ಕೇರಳದ ಮುನಂಬಂನಲ್ಲಿ ಭೂ ವಿವಾದ

ಕೊಚ್ಚಿ (ಕೇರಳ) – ಕೇರಳ ರಾಜ್ಯದ ಮುನಂಬಂನಲ್ಲಿನ ಒಂದು ಆಸ್ತಿಯನ್ನು ವಕ್ಫ್ ಎಂದು ಘೋಷಿಸಿದ ನಂತರ, ಅಲ್ಲಿನ ಸುಮಾರು 600 ಕುಟುಂಬಗಳ ಸ್ಥಳಾಂತರದ ಸಾಧ್ಯತೆ ಉಂಟಾಯಿತು. ಈ ಹಿನ್ನೆಲೆಯಲ್ಲಿ, ಆ ಆಸ್ತಿಯನ್ನು ಪರಿಶೀಲಿಸಲು ಸರಕಾರ ರಚಿಸಿದ ತನಿಖಾ ಆಯೋಗದ ನಿರ್ಧಾರಕ್ಕೆ ಕೇರಳ ಉಚ್ಚ ನ್ಯಾಯಾಲಯನ ವಿಭಾಗೀಯ ಪೀಠವು ಮಾನ್ಯತೆ ನೀಡಿತ್ತು. ಇದರ ವಿರುದ್ಧ ವಕ್ಫ್ ಮಂಡಳಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಿದೆ.
ಮುನಂಬಂನಲ್ಲಿನ ಭೂ ವಿವಾದವು 404.76 ಎಕರೆಗೆ ಸಂಬಂಧಿಸಿತ್ತು; ಆದರೆ ಸಮುದ್ರದ ನೀರಿನಿಂದಾದ ಭೂ ಸವೆತದಿಂದಾಗಿ ಅದು ಸುಮಾರು 135.11 ಎಕರೆಗೆ ಇಳಿದಿದೆ. 1950 ರಲ್ಲಿ ಸಿದ್ದಿಕ್ ಸೈತ್ ಎಂಬ ವ್ಯಕ್ತಿಯು ಈ ಭೂಮಿಯನ್ನು ಫಾರೂಕ್ ಕಾಲೇಜಿಗೆ ಉಡುಗೊರೆಯಾಗಿ ನೀಡಿದ್ದರು. ಆದಾಗ್ಯೂ, ಈ ಭೂಮಿಯ ಮೇಲೆ ಈಗಾಗಲೇ ಅನೇಕ ಜನರ ಮನೆಗಳಿದ್ದವು. ಇದರಿಂದಾಗಿ ಕಾಲೇಜು ಮತ್ತು ಅಲ್ಲಿ ವಾಸಿಸುವ ನಾಗರಿಕರ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ನಂತರ ಕಾಲೇಜು ಭೂಮಿಯ ಕೆಲವು ಭಾಗವನ್ನು ಈ ನಿವಾಸಿಗಳಿಗೆ ಮಾರಾಟ ಮಾಡಿದೆ. ಈ ಭೂಮಿ ಮಾರಾಟ ಮಾಡುವಾಗ, ಇದು ವಕ್ಫ್ ಭೂಮಿ ಎಂದು ನಮೂದಿಸಿರಲಿಲ್ಲ. 2019 ರಲ್ಲಿ ಕೇರಳ ವಕ್ಫ್ ಮಂಡಳಿಯು ಈ ಭೂಮಿಯನ್ನು ಔಪಚಾರಿಕವಾಗಿ ವಕ್ಫ್ ಆಸ್ತಿ ಎಂದು ನೋಂದಾಯಿಸಿತು, ಇದರಿಂದಾಗಿ ಹಿಂದಿನ ಮಾರಾಟಗಳು ರದ್ದಾದವು. ಇದರಿಂದ ನಿವಾಸಿಗಳು ಪ್ರತಿಭಟನೆ ವ್ಯಕ್ತಪಡಿಸಿದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!