“ನೀವು ದೇವರನ್ನೂ ಬಿಡಲಿಲ್ಲ!” – ದೇವಸ್ವಂ ಮಂಡಳಿಯ ಮಾಜಿ ಸದಸ್ಯ ಕೆ.ಪಿ. ಶಂಕರ್ ದಾಸ್ ಇವರಿಗೆ ಸುಪ್ರೀಂ ಕೋರ್ಟನಿಂದ ತರಾಟೆ Sabarimala Gold Theft Case

ಶಬರಿಮಲೈ ದೇಗುಲದ ಚಿನ್ನದ ಕಳ್ಳತನ ಪ್ರಕರಣ

ತಿರುವನಂತಪುರಂ (ಕೇರಳ): ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವಸ್ವಂ ಮಂಡಳಿಯ ಮಾಜಿ ಸದಸ್ಯ ಕೆ.ಪಿ. ಶಂಕರ ದಾಸರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು, “ನೀವು ದೇವರನ್ನೂ ಬಿಡಲಿಲ್ಲ!” ಎಂದು ಕಠಿಣ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿತು. ಈ ಪ್ರಕರಣದಲ್ಲಿ ಕೇರಳ

ಕೆ. ಪಿ . ಶಂಕರ ದಾಸ ಇವರ ವಿರುದ್ಧ ಉಚ್ಚ ನ್ಯಾಯಾಲಯವು ನೀಡಿದ್ದ ಕೆಲವು ವರದಿಗಳನ್ನು  ತೆಗೆದುಹಾಕಬೇಕೆಂದು ಕೋರಿ ದಾಸ ಇವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ನ್ಯಾಯಮೂರ್ತಿಗಳಾದ ದೀಪಂಕರ ದತ್ತಾ ಮತ್ತು ಸತೀಶ ಚಂದ್ರ ಶರ್ಮಾ ಅವರ ಪೀಠವು ಈ ಬೇಡಿಕೆಯನ್ನು ತಿರಸ್ಕರಿಸಿದೆ.

ಶಬರಿಮಲೈ ದೇಗುಲದ ಚಿನ್ನದ ಆಭರಣಗಳನ್ನು ಮತ್ತು ವಸ್ತುಗಳನ್ನು ವಿದ್ಯುತ್ ಲೇಪನಕ್ಕಾಗಿ (Electroplating) ಹಾಗೂ ದುರಸ್ತಿಗಾಗಿ ಕಳುಹಿಸಿದಾಗ, ಅದರಲ್ಲಿನ ಚಿನ್ನವು ಕಳ್ಳತನವಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ ಪ್ರಕರಣವು ಕೇರಳ ಉಚ್ಚ ನ್ಯಾಯಾಲಯಕ್ಕೆ ಹೋದ ನಂತರ, ಇದರ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (SIT) ವಹಿಸಲಾಯಿತು. ಎಸ್ಐಟಿ ತನಿಖೆಯ ಪ್ರಕಾರ, ಈ ವಸ್ತುಗಳಲ್ಲಿದ್ದ ಚಿನ್ನವನ್ನು ಕದ್ದು ಮಾರಾಟ ಮಾಡಿರುವ ಸಾಧ್ಯತೆಯಿದೆ. ಈ ಪ್ರಕರಣದ ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಎಂಬಾತ ತನ್ನ ವೈಯಕ್ತಿಕ ಲಾಭಕ್ಕಾಗಿ ದೇವಸ್ಥಾನದ ಚಿನ್ನವನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

“ದೇವರು ಮತ್ತು ದೇವಸ್ಥಾನಕ್ಕಾದರೂ ಕೈ ಹಾಕಬಾರದಿತ್ತು!”

ಅರ್ಜಿಯನ್ನು ವಜಾಗೊಳಿಸುವಾಗ ಸರ್ವೋಚ್ಚ ನ್ಯಾಯಾಲಯವು “ಕನಿಷ್ಠ ದೇವರು ಮತ್ತು ದೇವಸ್ಥಾನವನ್ನಾದರೂ ಬಿಡಬೇಕಿತ್ತು” ಎಂದು ಹೇಳುತ್ತಾ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು. ಶಬರಿಮಲೈ ಅಯ್ಯಪ್ಪ ದೇಗುಲದ ಚಿನ್ನದ ಕಳ್ಳತನ ಪ್ರಕರಣದಲ್ಲಿ ದೇವಸ್ವಂ ಮಂಡಳಿಯ ಸದಸ್ಯ ಶಂಕರ ದಾಸರು ಸಹ ಅಷ್ಟೇ ಜವಾಬ್ದಾರರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಪರಾಧದ ಗಾಂಭೀರ್ಯವನ್ನು ಪರಿಗಣಿಸಿ, ಉಚ್ಚ ನ್ಯಾಯಾಲಯವು ದಾಸ ಅವರ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಕೆಲವು ಸಡಿಲಿಕೆಗಳನ್ನು ನೀಡಿದ್ದರೂ, ಅವರಿಗೆ ವಿಚಾರಣೆಯಿಂದ ಯಾವುದೇ ವಿನಾಯಿತಿ ನೀಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಚಿನ್ನದ ಪ್ಲೇಟಸ್ ಗಳ ಕಳ್ಳತನ ಮತ್ತು ಅದರಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿಯಲ್ಲಿ ಶಂಕರ ದಾಸ ಮತ್ತು ಕೆ. ವಿಜಯಕುಮಾರರು ಭಾಗಿಯಾಗಿದ್ದಾರೆ ಎಂಬ ಅಂಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತನಿಖಾ ತಂಡಕ್ಕೆ ಹೆಚ್ಚಿನ ಕಾಲಾವಕಾಶ

ಕೇರಳ ಹೈಕೋರ್ಟ್ನ ದೇವಸ್ವಂ ಪೀಠವು ಶಬರಿಮಲೈ ಚಿನ್ನದ ಕಳ್ಳತನದ ತನಿಖೆಯನ್ನು ಪೂರ್ಣಗೊಳಿಸಲು ಎಸ್ಐಟಿಗೆ ಹೆಚ್ಚುವರಿ ಸಮಯವನ್ನು ನೀಡಿದೆ. ತನಿಖೆಯ ಮಧ್ಯಂತರ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯವು ಗಡುವನ್ನು 6 ವಾರಗಳವರೆಗೆ ವಿಸ್ತರಿಸಿದೆ. ಎಸ್ಐಟಿ ಈಗ ಜನವರಿ 19 ರಂದು ಮಧ್ಯಂತರ ತನಿಖಾ ವರದಿಯನ್ನು ಸಲ್ಲಿಸಲಿದೆ.

ಸೋನಿಯಾ ಗಾಂಧಿ ಜೊತೆ ಮುಖ್ಯ ಆರೋಪಿಯ ಫೋಟೋ

ಈ ಪ್ರಕರಣದ ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಮತ್ತು ಗೋವರ್ಧನ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಇರುವ ಫೋಟೋ ಈಗ ಹೊರಬಂದಿದ್ದು, ಇದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಕೇರಳದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು, “ಕಾಂಗ್ರೆಸ್ ಈ ಫೋಟೋದ ಹಿಂದಿನ ಸತ್ಯವನ್ನು ಜನರ ಮುಂದೆ ಇಡಬೇಕು” ಎಂದು ಒತ್ತಾಯಿಸಿದ್ದಾರೆ. ಶಬರಿಮಲೈ ಚಿನ್ನದ ಕಳ್ಳತನ ಪ್ರಕರಣವು ಕೇವಲ ಸಾಮಾನ್ಯ ಕಳ್ಳತನವಲ್ಲ, ಇದು ಅಂತರಾಷ್ಟ್ರೀಯ ಚಿನ್ನದ ಕಳ್ಳಸಾಗಾಣಿಕೆಯೊಂದಿಗೆ ಸಂಬಂಧ ಹೊಂದಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

  • ದೇವಸ್ಥಾನಗಳ ಸರಕಾರೀಕರಣದಿಂದ ಇನ್ನೆಷ್ಟು ದುಷ್ಪರಿಣಾಮಗಳು ಬಹಿರಂಗವಾದ ನಂತರ ಹಿಂದೂಗಳು ಎಚ್ಚರಗೊಳ್ಳುವರು? ೧೦೦ ಕೋಟಿ ಹಿಂದೂಗಳಿಗೆ ಇದು ಅತ್ಯಂತ ನಾಚಿಕೆಗೇಡು! 
  • ಸಾಮ್ಯವಾದಿಗಳು ಇವರು ಕಟ್ಟರ ಹಿಂದೂ ದ್ವೇಷಿಗಳಾಗಿರುವುದರಿಂದ ಅವರ ಆಡಳಿತ ವೆಂದರೆ ಮೊಗಲರ ಆಡಳಿತವಾಗಿದೆ ! ಇಂತಹವರನ್ನು ಚುನಾವಣೆಯಲ್ಲಿ ರಾಜಕೀಯವಾಗಿ ಮುಗಿಸುವುದೇ, ಇದಕ್ಕೆ ಉಪಾಯವಾಗಿದೆ !