ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ

ಗುರುಪೂರ್ಣಿಮೆಯಂದು ೧೦೦೦ ಪಟ್ಟು ಹೆಚ್ಚು ಕಾರ್ಯನಿರತ ಗುರುತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ’ಆನ್‌ಲೈನ್’ ಮೂಲಕ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸುತ್ತಿದ್ದೇವೆ.  ತಮಗೆಲ್ಲರಿಗೂ ಹಾರ್ದಿಕ ಆಮಂತ್ರಣ.

ನಶ್ವರದಿಂದ ಶಾಶ್ವತದೆಡೆಗೆ 

ಸನಾತನ ಧರ್ಮದಲ್ಲಿ, ಶಿಷ್ಯರಿಗೆ ಕಣ್ಣಿಗೆ ಕಾಣುವ ದೇವರೇ ದೀಕ್ಷಾಗುರುಗಳು. ಅದರಲ್ಲೂ ಗುರುಗಳೊಂದಿಗೆ ವಾಸಿಸಿ ಹನ್ನೆರಡು ವರ್ಷಗಳಿಗಿಂತ ಜಾಸ್ತಿಯೇ ಕಾಲ ಗುರುಸೇವೆ, ಆಶ್ರಮದ ಸೇವೆ ಮಾಡುತ್ತಾ ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಶಿಷ್ಯರು ಮುಂದೆ ಅಸಾಧಾರಣ ಜ್ಞಾನಿಗಳಾಗಿ ಮುಗಿಲೆತ್ತರಕ್ಕೆ ಏರುತ್ತಾರೆ

ಗುರುಪೂರ್ಣಿಮೆ ಎಂದರೆ ‘ವ್ಯಾಸಪೂರ್ಣಿಮೆ !‘

ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಇವುಗಳ ಸಂಗಮವಾಗಿರುವ ‘ಗುರುಕೃಪಾಯೋಗದ ಮೂಲಕ ಪ.ಪೂ. ಗುರುದೇವರು ಜೀವನದ ಪ್ರತಿಯೊಂದು ಅಂಗದ ಅಧ್ಯಾತ್ಮೀಕರಣ ಮಾಡುವುದನ್ನು ಕಲಿಸಿದರು ! ಆ ಅಮೂಲ್ಯ ಬೋಧನೆಯ ಪ್ರಸಾರ ಮಾಡುವುದೇ ಅವರ ಬಗೆಗಿನ ನಿಜವಾದ ಕೃತಜ್ಞತೆಯಾಗಿದೆ.

ಮಹರ್ಷಿಗಳು ಮಾಡಿದ ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವದ ಗೌರವ !

ಗುರುಕಾರ್ಯವನ್ನು ಪೂರ್ಣತ್ವಕ್ಕೆ ತೆಗೆದುಕೊಂಡು ಹೋಗಲು ಸಾಧಕರಿಗೆ ಪ್ರಕಾಶರೂಪಿ ಊರ್ಜೆಯು ದೊರೆಯಲೆಂದು ಭೃಗು ಮಹರ್ಷಿಗಳ ಆಜ್ಞೆಯಿಂದ ೧೯.೨.೨೦೧೯ ರಂದು ‘ಸಹಸ್ರದೀಪದರ್ಶನ ಸಮಾರಂಭ’ ನೆರವೇರಿತು. ಈ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೈಯಲ್ಲಿನ ದೀಪದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೈಗಳಲ್ಲಿನ ದೀಪಗಳನ್ನು ಪ್ರಜ್ವಲಿಸಲಾಯಿತು.

ಭವರೋಗಕ್ಕೆ ಏಕೈಕ ಸಂಜೀವನಿ ‘ಗುರುಕೃಪಾಯೋಗ !

ವಿವಿಧ ಯೋಗ ಸಾಧನೆಗಳಿಂದ ಜೀವದ ಸಾತ್ತ್ವಿಕತೆಯು ಹೆಚ್ಚಾಗಿ ಜೀವದ ಸಪ್ತದೇಹಗಳು ಶುದ್ಧವಾಗುತ್ತವೆ. ಅದರಲ್ಲಿ ಶಕ್ತಿ, ಜ್ಞಾನ, ಆನಂದವು ಹೆಚ್ಚಾಗಿ ಜೀವಕ್ಕೆ ಪರಿಪೂರ್ಣತೆಯು ಬರತೊಡಗುತ್ತದೆ. ಅವನಿಂದಾಗುವ ತಪ್ಪುಗಳು ಕಡಿಮೆಯಾಗುತ್ತದೆ. ಅವನಲ್ಲಿನ ಚೈತನ್ಯದಲ್ಲಿ ಹೆಚ್ಚಳವಾಗುತ್ತದೆ.

ಧರ್ಮಸಂಸ್ಥಾಪನೆಗಾಗಿ ಸರ್ವಸ್ವದ ತ್ಯಾಗ ಮಾಡಿ !

ಪ್ರಭು ಶ್ರೀರಾಮಚಂದ್ರನು ಸಮಸ್ತ ಜೀವಗಳ ಕಲ್ಯಾಣ ಮಾಡುವ ರಾಮ ರಾಜ್ಯವನ್ನು ಸ್ಥಾಪಿಸಿದನು. ಭಗವಾನ ಶ್ರೀಕೃಷ್ಣನು ದುಷ್ಟ ಕೌರವರನ್ನು ಪರಾಭವಗೊಳಿಸಿ ಧರ್ಮ ರಾಜ್ಯವನ್ನು ಸ್ಥಾಪಿಸಿದನು. ಕಲಿಯುಗದಲ್ಲಿಯೂ ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ್ದಾರೆ.

‘ಆಪತ್ಕಾಲದಲ್ಲಿ ಮಾರ್ಗ ತೋರಲು ಈಶ್ವರ ಸ್ವರೂಪ ಮೂವರು ಗುರುಗಳು ಲಭಿಸಿರುವುದು, ಸನಾತನದ ಸಾಧಕರ ಪರಮಭಾಗ್ಯ

ಸಾಧಕರು ಮೂವರೂ ಗುರುಗಳು ಏನು ಹೇಳುತ್ತಾರೆಯೋ, ಅದನ್ನು ಪಾಲಿಸುವುದು, ಎಲ್ಲ ಕಾರ್ಯಪದ್ಧತಿಯ, ಜವಾಬ್ದಾರ ಸಾಧಕರಿಂದ ಮತ್ತು ‘ಸನಾತನ ಪ್ರಭಾತದಲ್ಲಿ ಬರುವ ಸೂಚನೆಗಳನ್ನು ಪಾಲಿಸಿದರೆ, ಮೂವರೂ ಗುರುಗಳು ಸಾಧಕರನ್ನು ಆಪತ್ಕಾಲದಿಂದ ಸುಖರೂಪವಾಗಿ ಪಾರು ಮಾಡುತ್ತಾರೆ.

ಪ.ಪೂ. ಭಕ್ತರಾಜ ಮಹಾರಾಜರಿಗೆ ಗುರುಗಳಲ್ಲಿದ್ದ ಅಚಲ ಶ್ರದ್ಧೆ !

ಸ್ವಲ್ಪದರಲ್ಲಿ ಹೇಳುವುದಾದರೆ ಸಂತರು, ಗುರುಗಳು ಗದರಿಸುತ್ತಿದ್ದರೆ, ಅವರ ಗದರಿಸುವುದರ ವಿಶ್ಲೇಷಣೆಯನ್ನು ಮಾಡದೇ ನಾಮಸ್ಮರಣೆ ಮತ್ತು ಸೇವೆಯನ್ನು ಮಾಡುತ್ತಲೇ ಇರಬೇಕು, ಏಕೆಂದರೆ ನಿಜವಾದ ಕಾರಣವನ್ನು ತಿಳಿದುಕೊಳ್ಳುವುದು ನಮ್ಮ ಕ್ಷಮತೆಗೆ ಮೀರಿದ ಸಂಗತಿಯಾಗಿದೆ !

ಶ್ರೇಷ್ಠವಾದ ‘ಗುರು-ಶಿಷ್ಯ ಪರಂಪರೆ !

ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ. ಎಣ್ಣೆಬತ್ತಿ ಇರದಿರುವ ದೀಪವನ್ನು ಒಂದು ವೇಳೆ ೧೦೦ ಬಾರಿ ಪ್ರಕಾಶಮಾನವಾಗಿರುವ ದೀಪದ ಹತ್ತಿರ ಕೊಂಡೊಯ್ದರೂ, ಅದು ಬೆಳಕು ಕೊಡುವುದಿಲ್ಲ. ಶಿಷ್ಯನ ದೀಪದಲ್ಲಿನ ಎಣ್ಣೆ ಬತ್ತಿಯೆಂದರೆ ಅವನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿ !

ಗುರುಗಳ ಋಣವನ್ನು ತೀರಿಸಲು ಎಂದಿಗೂ ಆಗವುದಿಲ್ಲ; ಹಾಗಾಗಿ ಅವರಲ್ಲಿ ಕೇವಲ ಪ್ರಾರ್ಥನೆಯನ್ನು ಮಾಡಿರಿ !

ವ್ಯಷ್ಟಿ ಅಥವಾ ಸಮಷ್ಟಿಯಾಗಿರಲಿ ಯಾವುದೇ ಮಾರ್ಗದಿಂದ ಹೋದರೂ ಶ್ರೀಗುರುಗಳ ಮಾರ್ಗದರ್ಶನ ಮತ್ತು ಅನುಗ್ರಹವು ಪಡೆಯವುದು ಅತ್ಯಂತ ಅವಶ್ಯಕವಿದೆ. ಗುರುಭಕ್ತಿಯೇ ವ್ಯಷ್ಟಿ ಮತ್ತು ಸಮಷ್ಟಿ ಕಾರ್ಯದ ಗುರುಕೀಲಿಕೈಯಾಗಿದೆ.