ನಾವು ಗುರುಗಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಋಣವನ್ನು ತೀರಿಸಬೇಕೆಂದರೆ, ಯಾವ ಮಾಧ್ಯಮದಿಂದ ನಾವು ತೀರಿಸುತ್ತೇವೋ, ಅದೆಲ್ಲವೂ ಗುರುಗಳದ್ದೇ ಆಗಿದೆ. ಆದುದರಿಂದ ಋಣವು ಪುನಃ ಹೆಚ್ಚಳವೇ ಆಗುತ್ತದೆ. ಇಂತಹ ಸಮಯದಲ್ಲಿ ಗುರುಗಳಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ‘ನನ್ನ ಮೇಲೆ ನಿಮ್ಮ ಋಣವು ಎಷ್ಟು ಹೆಚ್ಚಾಗಬೇಕು ಎಂದರೆ ನನ್ನಿಂದ ಅದನ್ನು ತೀರಿಸಲು ಸಾಧ್ಯವಾಗಬಾರದು ಆಗ ನೀವು ನನ್ನನ್ನು ಜಪ್ತಿ ಮಾಡಿರಿ, ಅಂದರೆ ನನ್ನ ಅಸ್ತಿತ್ವವನ್ನು ಮುಗಿಸಿ ಅಲ್ಲಿ ಕೇವಲ ನಿಮ್ಮ ಅಸ್ತಿತ್ವವೇ ಇರಲಿ.
ಗುರುಭಕ್ತಿಯೇ ವ್ಯಷ್ಟಿ ಮತ್ತು ಸಮಷ್ಟಿ ಕಾರ್ಯದ ಗುರುಕೀಲಿಕೈಯಾಗಿದೆ !
‘ಕೇವಲ ಸಾಧಕರೇ ಅಲ್ಲ, ಪ್ರತಿಯೊಬ್ಬ ಮನುಷ್ಯನ ಜನ್ಮದ ಧ್ಯೇಯವು ಈಶ್ವರ ಪ್ರಾಪ್ತಿಯಾಗಿದೆ, ಅಂದರೆ, ಆನಂದಪ್ರಾಪ್ತಿಯಾಗಿದೆ. ಕಾಲಾನುನುಸಾರ ಈ ಧ್ಯೇಯವನ್ನು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಳ ಮಾಧ್ಯಮದಿಂದ ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. ವ್ಯಷ್ಟಿ ಸಾಧನೆಯ ಸ್ವರೂಪದಲ್ಲಿ ಸಗುಣ ಗುರು ಕೃಪೆಯ ಮಾಧ್ಯಮದಿಂದ ವೈಯಕ್ತಿಕ ಆನಂದಪ್ರಾಪ್ತಿಯ ಕಡೆಗೆ ಹೋದರೆ, ಸಮಷ್ಟಿ ಸಾಧನೆಯ ಸ್ವರೂಪದಲ್ಲಿ ನಿರ್ಗುಣ ಗುರುತತ್ತ್ವದ ಧರ್ಮಸ್ವರೂಪದೊಂದಿಗೆ ಏಕರೂಪವಾಗುವುದು ಅಂದರೆ ಸಮಷ್ಟಿಗೆ ಆನಂದ ನೀಡುವುದು. ಹಿಂದೂ ರಾಷ್ಟ್ರದ ಸ್ಥಾಪನೆಯು ಗುರುಗಳ ಸಮಷ್ಟಿ ಅಂದರೆ ಧರ್ಮಸ್ವರೂಪದೊಂದಿಗೆ ಏಕರೂಪವನ್ನಾಗಿ ಮಾಡುವ, ಅಂದರೆ ಎಲ್ಲ ಜೀವಗಳಿಗೆ ಆನಂದ ನೀಡುವ ಸಾಧನೆಯಾಗಿರುವುದರಿಂದ ಅದು ಮೋಕ್ಷದಾಯಕವಾಗಿದೆ. ವ್ಯಷ್ಟಿ ಅಥವಾ ಸಮಷ್ಟಿಯಾಗಿರಲಿ ಯಾವುದೇ ಮಾರ್ಗದಿಂದ ಹೋದರೂ ಶ್ರೀಗುರುಗಳ ಮಾರ್ಗದರ್ಶನ ಮತ್ತು ಅನುಗ್ರಹವು ಪಡೆಯವುದು ಅತ್ಯಂತ ಅವಶ್ಯಕವಿದೆ. ಗುರುಭಕ್ತಿಯೇ ವ್ಯಷ್ಟಿ ಮತ್ತು ಸಮಷ್ಟಿ ಕಾರ್ಯದ ಗುರುಕೀಲಿಕೈಯಾಗಿದೆ.
– (ಸದ್ಗುರು) ಡಾ. ಚಾರುದತ್ತ ಪಿಂಗಳೆ