ಮಹರ್ಷಿಗಳು ಮಾಡಿದ ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವದ ಗೌರವ !

ಮಹರ್ಷಿಗಳು ವಿವಿಧ ನಾಡಿಪಟ್ಟಿಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವದ ಬಗ್ಗೆ ವರ್ಣಿಸಿದ್ದಾರೆ. ಮಹರ್ಷಿಗಳು ಇಲ್ಲಿಯವರೆಗೆ ವಿವಿಧ ಧಾರ್ಮಿಕ ವಿಧಿಗಳನ್ನು ಮಾಡಲು ಹೇಳಿ ಅವರ ಅವತಾರತ್ವದ ಅಂಗಗಳನ್ನು ಬೆಳಕಿಗೆ ತಂದರು. ಆ ಸಂಯೋಗದಿಂದ ಪರಾತ್ಪರ ಗುರು ಡಾಕ್ಟರರ ಉಚ್ಚ ಆಧ್ಯಾತ್ಮಿಕ ಸ್ಥಿತಿಯ ಕುರಿತು ಸಾಧಕರಿಗೆ ಅನುಭೂತಿಗಳು ಬಂದವು. ಅತ್ಯಂತ ಶಾರೀರಿಕ ತೊಂದರೆ ಇರುವಾಗಲೂ ಪರಾತ್ಪರ ಗುರು ಡಾ. ಆಠವಲೆಯವರು ಮಹರ್ಷಿಗಳ ಆಜ್ಞಾಪಾಲನೆಯನ್ನು ಮಾಡಲು ಈ ಸಮಾರಂಭಗಳಲ್ಲಿ ಉಪಸ್ಥಿತರಿದ್ದರು. ಸಾಧಕರಿಗೆ ಈ ಸುವರ್ಣ ಕ್ಷಣಗಳ ದರ್ಶನವನ್ನು ಮಾಡಿಸುತ್ತಿದ್ದೇವೆ.

ಸಹಸ್ರದೀಪದರ್ಶನ ಸಮಾರಂಭ!

ಗುರುಕಾರ್ಯವನ್ನು ಪೂರ್ಣತ್ವಕ್ಕೆ ತೆಗೆದುಕೊಂಡು ಹೋಗಲು ಸಾಧಕರಿಗೆ ಪ್ರಕಾಶರೂಪಿ ಊರ್ಜೆಯು ದೊರೆಯಲೆಂದು ಭೃಗು ಮಹರ್ಷಿಗಳ ಆಜ್ಞೆಯಿಂದ ೧೯.೨.೨೦೧೯ ರಂದು ‘ಸಹಸ್ರದೀಪದರ್ಶನ ಸಮಾರಂಭ’ ನೆರವೇರಿತು. ಈ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೈಯಲ್ಲಿನ ದೀಪದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೈಗಳಲ್ಲಿನ ದೀಪಗಳನ್ನು ಪ್ರಜ್ವಲಿಸಲಾಯಿತು. ಅನಂತರ ಅವರು ಸಾಧಕಿಯರ ಕೈಗಳಲ್ಲಿನ ದೀಪಗಳನ್ನು ಪ್ರಜ್ವಲಿಸಿದರು. ಹೀಗೆ ಜ್ಯೋತಿಯಿಂದ ಜ್ಯೋತಿಯನ್ನು ಪ್ರಜ್ವಲಿಸಲಾಯಿತು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ‘ಶ್ರೀಂ’ ಬೀಜಮಂತ್ರ-ಅಂಕಿತ ಪದಕ ನೀಡುತ್ತಿರುವ ಪರಾತ್ಪರ ಗುರು ಡಾ. ಆಠವಲೆಯವರು

 

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ‘ಶ್ರೀಂ’ ಬೀಜಮಂತ್ರ-ಅಂಕಿತ ಪದಕವನ್ನು ನೀಡುತ್ತಿರುವ ಪರಾತ್ಪರ ಗುರು ಡಾ. ಆಠವಲೆಯವರು

ಗುರುಶಕ್ತಿ-ಪ್ರದಾನ ಸಮಾರಂಭ !

ಮಹರ್ಷಿ ಭೃಗು ಇವರ ಆಜ್ಞೆಯಿಂದ ೧೯.೨.೨೦೧೯ ಈ ದಿನದಂದು ‘ಗುರುಶಕ್ತಿ-ಪ್ರದಾನ ಸಮಾರಂಭ’ವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಈ ಸಮಯದಲ್ಲಿ ಮಹರ್ಷಿಗಳ ಆಜ್ಞೆಯಿಂದ ‘ಆಧ್ಯಾತ್ಮಿಕ ಉತ್ತರಾಧಿಕಾರಿ’ಯೆಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ‘ಶ್ರೀ’ ಬೀಜಮಂತ್ರ-ಅಂಕಿತ ಪದಕವನ್ನು ನೀಡಿ ಪರಾತ್ಪರ ಗುರು ಡಾ. ಆಠವಲೆಯವರು ಅವರಿಗೆ ಗುರುಶಕ್ತಿಯನ್ನು ಪ್ರದಾನಿಸಿದರು.

ಗುರುಗಳ ಮಹತ್ವ

ವರ್ತಮಾನ (ಪ್ರಸ್ತುತ) ಜನ್ಮದಲ್ಲಿನ ಅತ್ಯಂತ ಚಿಕ್ಕ-ಚಿಕ್ಕ ವಿಷಯಗಳಿಗೂ ಪ್ರತಿಯೊಬ್ಬರೂ ಶಿಕ್ಷಕರು, ವೈದ್ಯರು, ವಕೀಲರು ಇತ್ಯಾದಿ ಇತರ ಯಾರಿಂದಲಾದರೂ ಮಾರ್ಗದರ್ಶನವನ್ನು ಪಡೆಯುತ್ತಾರೆ; ಹಾಗಾದರೆ ‘ಜನ್ಮ-ಮರಣದ ಚಕ್ರದಿಂದ ಮುಕ್ತಿ ಕೊಡುವ ಗುರುಗಳ ಮಹತ್ವ ಎಷ್ಟಿರಬಹುದು ಎಂಬುದರ ಕಲ್ಪನೆಯನ್ನೂ ಸಹ ಮಾಡಲು ಆಗುವುದಿಲ್ಲ. ಇದು ಮುಂದಿನ ಅಂಶಗಳಿಂದ ಸ್ಪಷ್ಟವಾಗುವುದು.

(ಸನಾತನ ನಿರ್ಮಿತ ಗ್ರಂಥ ‘ಗುರುಗಳ ಮಹತ್ವ)

ಗುರುಗಳಿಗೆ ನಿಜವಾದ ಗುರುದಕ್ಷಿಣೆ ಸಮರ್ಪಿಸಿ !

ಸಾಧಕರಿಗೆ ಕಲಿಯುಗದಲ್ಲಿಯೂ ಮೋಕ್ಷದ ಸುಲಭವಾದ ಮಾರ್ಗವನ್ನು ತೋರಿಸುವ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಮತ್ತು ಪ.ಪೂ. ಗುರುದೇವರ ಆಧ್ಯಾತ್ಮಿಕ ಪರಂಪರೆಯನ್ನು ಸಮರ್ಥವಾಗಿ ನಡೆಸುವ ಅವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೃಪಾಛತ್ರದಲ್ಲಿ ಈ ಭೀಕರ ಸಂಕಟಕಾಲದಲ್ಲಿಯೂ ಸಾಧಕರು ಆನಂದದಿಂದ ಸಾಧನಾನಿರತರಾಗಿದ್ದಾರೆ. ಶ್ರೀಗುರುಗಳ ಬೋಧನೆಯನ್ನು ಭಕ್ತಿಭಾವದಿಂದ ಆಚರಣೆ ಮಾಡುವುದೇ, ನಿಜವಾದ ಗುರುದಕ್ಷಿಣೆಯಾಗಿದೆ.