ಗುರುಪೂರ್ಣಿಮೆ ಎಂದರೆ ‘ವ್ಯಾಸಪೂರ್ಣಿಮೆ !‘

‘ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್ | ಇದು ಮಹರ್ಷಿ ವ್ಯಾಸರ ಮಹಾನತೆಯಾಗಿದೆ. ಈ ವಚನವು ಇಂದು ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತನ್ನು ರಚಿಸುವ ಪ.ಪೂ. ಡಾ. ಜಯಂತ ಆಠವಲೆಯವರಿಗೂ ಅಕ್ಷರಶಃ ಅನ್ವಯಿಸುತ್ತದೆ. ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಇವುಗಳ ಸಂಗಮವಾಗಿರುವ ‘ಗುರುಕೃಪಾಯೋಗದ ಮೂಲಕ ಪ.ಪೂ. ಗುರುದೇವರು ಜೀವನದ ಪ್ರತಿಯೊಂದು ಅಂಗದ ಅಧ್ಯಾತ್ಮೀಕರಣ ಮಾಡುವುದನ್ನು ಕಲಿಸಿದರು ! ಆ ಅಮೂಲ್ಯ ಬೋಧನೆಯ ಪ್ರಸಾರ ಮಾಡುವುದೇ ಅವರ ಬಗೆಗಿನ ನಿಜವಾದ ಕೃತಜ್ಞತೆಯಾಗಿದೆ.