೧. ಪ.ಪೂ. ಭಕ್ತರಾಜ ಮಹಾರಾಜರಿಗೆ (ಪ.ಪೂ. ಬಾಬಾ) ತುಂಬಾ ಅನಾರೋಗ್ಯವಿದ್ದಾಗ ಆಧುನಿಕ ವೈದ್ಯರು (ಡಾಕ್ಟರರು) ಅವರನ್ನು ಆಸ್ಪತ್ರೆಗೆ ಸೇರಿಸಲು ಹೇಳಿದ್ದರೂ ಶ್ರೀ ಅನಂತಾನಂದ ಸಾಯೀಶರವರ ಭಂಡಾರಾವಿದ್ದುದರಿಂದ (ಅನ್ನಸಮರ್ಪಣೆ) ಮರಣ ಬಂದರೂ ಭಂಡಾರವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಪ.ಪೂ. ಬಾಬಾರವರು ಹೇಳಿದ್ದರು.
ನನಗೆ ನೆನಪಿದೆ, ೧೯೮೮ ನೇ ಇಸವಿಯಲ್ಲಿ ಮೋರಟಕ್ಕಾದಲ್ಲಿ ಪ.ಪೂ. ಅನಂತಾನಂದ ಸಾಯಿಶರವರ ಭಂಡಾರಾ ಇತ್ತು. ಆಗ ಪ.ಪೂ. ಬಾಬಾರವರಿಗೆ ತುಂಬಾ ಅನಾರೋಗ್ಯವಿತ್ತು. ಆಧುನಿಕ ವೈದ್ಯರು ಪ.ಪೂ. ಬಾಬಾರವರನ್ನು ಆಸ್ಪತ್ರೆಗೆ ಸೇರಲು ಹೇಳಿದರು. ಅದಕ್ಕೆ ಅವರು ‘ನನ್ನ ಗುರುಗಳ ಭಂಡಾರಾ ಇದೆ. ನಾನು ಎಲ್ಲೂ ಹೋಗುವುದಿಲ್ಲ. ನನಗೆ ಸಾವು ಬಂದರೂ ಪರವಾಗಿಲ್ಲ, ಎಂದರು.
೨. ಗುರುಬಂಧುಗಳ ಅಲೌಕಿಕ ಪ್ರೇಮ
ಒಂದು ರಾತ್ರಿ ಪ.ಪೂ. ಭುರಾನಂದ ಬಾಬಾ ಪ.ಪೂ. ಬಾಬಾರವರ ಕೋಣೆಗೆ ಬಂದಾಗ ನಾವು ಮೂರು ಜನರಷ್ಟೇ ಅಲ್ಲಿದ್ದೆವು.
ಆಗ ಅವರ ನಡುವೆ ಈ ಮುಂದಿನಂತೆ ಸಂಭಾಷಣೆ ನಡೆಯಿತು.
ಪ.ಪೂ. ಭುರಾನಂದ ಬಾಬಾ : ಏನಾಗಿದೆ ?
ಪ.ಪೂ. ಬಾಬಾ : ತುಂಬಾ ಕೆಮ್ಮಿದೆ.
ಪ.ಪೂ. ಭುರಾನಂದ ಬಾಬಾ : ನಿನಗೇನೂ ಆಗಿಲ್ಲ; ನಿನ್ನ ಗಂಟಲು (ಕಿರುನಾಲಿಗೆ) ಕೂತಿದೆಯಷ್ಟೇ. ನಾನೀಗ ಅದನ್ನು ಸರಿ ಮಾಡುತ್ತೇನೆ. (ಪ.ಪೂ. ಭುರಾನಂದ ಬಾಬಾರವರು ನನಗೆ ನುಡಿದರು) ರವಿ ಹೋಗು ನಾಲ್ಕು ಲವಂಗಗಳನ್ನು ಬಿಸಿ ಮಾಡಿ ಅದನ್ನು ಪುಡಿ ಮಾಡಿ ಜೇನುತುಪ್ಪ ಹಾಕಿ ತೆಗೆದುಕೊಂಡು ಬಾ.
ನಾನು ಹೋಗಿ ಅದನ್ನು ತಯಾರಿಸಿ ತೆಗೆದುಕೊಂಡು ಬಂದೆ. ಪ.ಪೂ. ಭುರಾನಂದ ಬಾಬಾರವರು ಪ.ಪೂ. ಬಾಬಾರವರ ಬೆನ್ನಿಗೆ ಕೈ ಹಾಕಿ ಎಬ್ಬಿಸಿ ಆ ಜೇನುತುಪ್ಪ ಹಾಗೂ ಲವಂಗದ ಮಿಶ್ರಣವನ್ನು ತಮ್ಮ ಮದ್ಯದ ಬೆರಳಿನಿಂದ ಪ.ಪೂ. ಬಾಬಾರವರ ಗಂಟಲಿಗೆ ಹಾಕಿದರು ಹಾಗೂ ನಿನ್ನ ಗಂಟಲು ಈಗ ಸರಿ ಹೋಗಿದೆ; ಹೋಗಿ ಮಲಗು ಎಂದರು. ಅನಂತರ ಪ.ಪೂ. ಬಾಬಾರವರು ಮಲಗಿದರು. – ಶ್ರೀ. ರವೀಂದ್ರ ಕಸರೇಕರ (ಪ.ಪೂ. ಭಕ್ತರಾಜ ಮಹಾರಾಜರ ಮಗ), ನಾಶಿಕ (೬.೧.೨೦೧೯)
ಬಾಬಾರಿಗೆ ಗುರುಗಳ ಮೇಲಿದ್ದ ಭಾವ
ಒಮ್ಮೆ ಶ್ರೀ ಅನಂತಾನಂದ ಸಾಯೀಶರು (ಬಾಬಾರವರ ಗುರುಗಳು) ಒಂದು ಸ್ಥಳಕ್ಕೆ ಟಾಂಗಾದಲ್ಲಿ ಹೋಗುವವರಿದ್ದರು. ಆಗ ಅವರು ದಿನೂನಿಗೆ (ಬಾಬಾರವರ ಪೂರ್ವಾಶ್ರಮದ ಹೆಸರು) ಟಾಂಗಾದಲ್ಲಿ ಕುಳಿತುಕೊಳ್ಳಲು ಹೇಳಿದರು. ‘ಗುರುಗಳ ಬಳಿ ಹೇಗೆ ಕುಳಿತುಕೊಳ್ಳುವುದು ?’ ಎಂಬ ವಿಚಾರದಿಂದ ದಿನೂ ಟಾಂಗಾದಲ್ಲಿ ಕುಳಿತುಕೊಳ್ಳಲಿಲ್ಲ. ಟಾಂಗಾದ ಹಿಂದೆ ಬರಿಗಾಲುಗಳಿಂದ ಓಡುತ್ತಿದ್ದನು. ದಿನೂನ ಕಾಲಿಗೆ ಏನಾದರೂ ತಾಗಬಾರದೆಂದು ಗುರುಗಳು ಅವನಿಗೆ ಚಪ್ಪಲಿಗಳನ್ನು ಕೊಟ್ಟರು. ‘ಗುರುಗಳ ಚಪ್ಪಲಿಗಳನ್ನು ತಾನು ಹೇಗೆ ಹಾಕಿಕೊಳ್ಳುವುದು ?’ ಎಂಬ ವಿಚಾರದಿಂದ ದಿನೂ ಚಪ್ಪಲಿಗಳನ್ನು ಹಾಕಿಕೊಳ್ಳಲಿಲ್ಲ ಮತ್ತು ಅವುಗಳನ್ನು ಗೌರವದಿಂದ ಎರಡೂ ಕೈಗಳಿಂದ ಹೃದಯದ ಬಳಿ ಹಿಡಿದುಕೊಂಡು ಟಾಂಗಾದ ಹಿಂದೆ ಓಡುತ್ತಿದ್ದನು. ಆಗ ಗುರುಗಳು ಅವನಿಗೆ ಗದರಿಸಿದರು. ಈ ಗದರಿಸುವುದು “ಟಾಂಗಾದಲ್ಲಿ ಕುಳಿತುಕೊಳ್ಳುವುದು ಮತ್ತು ಚಪ್ಪಲಿಗಳನ್ನು ಹಾಕಿಕೊಳ್ಳುವುದು ಈ ಗುರ್ವಾಜ್ಞೆಯನ್ನು ಪಾಲಿಸದಿರುವುದರಿಂದ ಆಗಿತ್ತೇ ?” ಎಂದು ಕೇಳಿದ್ದಕ್ಕೆ ಬಾಬಾರವರು, “ಇಲ್ಲ” ಎಂದರು. ಹಾಗಾದರೆ ‘ಗುರುಗಳು ಏಕೆ ಗದರಿಸಿದರು’ ಎಂಬುದರ ಉತ್ತರವನ್ನೂ ಬಾಬಾ ಕೊಡಲಿಲ್ಲ.
ಸ್ವಲ್ಪದರಲ್ಲಿ ಹೇಳುವುದಾದರೆ ಸಂತರು, ಗುರುಗಳು ಗದರಿಸುತ್ತಿದ್ದರೆ, ಅವರ ಗದರಿಸುವುದರ ವಿಶ್ಲೇಷಣೆಯನ್ನು ಮಾಡದೇ ನಾಮಸ್ಮರಣೆ ಮತ್ತು ಸೇವೆಯನ್ನು ಮಾಡುತ್ತಲೇ ಇರಬೇಕು, ಏಕೆಂದರೆ ನಿಜವಾದ ಕಾರಣವನ್ನು ತಿಳಿದುಕೊಳ್ಳುವುದು ನಮ್ಮ ಕ್ಷಮತೆಗೆ ಮೀರಿದ ಸಂಗತಿಯಾಗಿದೆ ! (ಸನಾತನ ನಿರ್ಮಿತ ಗ್ರಂಥ ‘ಸಂತ ಭಕ್ತರಾಜ ಮಹಾರಾಜರ ಬೋಧನೆ (ಖಂಡ ೧))