ಗುರುಪೂರ್ಣಿಮೆ ನಿಮಿತ್ತ ಸಂದೇಶ
‘ಗುರುಪೂರ್ಣಿಮೆಯು ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಈ ದಿನದಂದು ಪ್ರತಿಯೊಬ್ಬ ಶ್ರದ್ಧಾವಂತ ಹಿಂದೂವು ಆಧ್ಯಾತ್ಮಿಕ ಗುರುಗಳ ಬಗ್ಗೆ ಕೃತಜ್ಞತೆಯೆಂದು ತನ್ನ ಕ್ಷಮತೆಗನುಸಾರ ತನು-ಮನ-ಧನವನ್ನು ಸಮರ್ಪಿಸುತ್ತಿರುತ್ತಾನೆ ಅಧ್ಯಾತ್ಮದಲ್ಲಿ ತನು, ಮನ ಮತ್ತು ಧನ ಇವುಗಳ ತ್ಯಾಗಕ್ಕೆ ಅಸಾಧಾರಣ ಮಹತ್ವವಿದೆ; ಆದರೆ ಗುರು ತತ್ತ್ವಕ್ಕೆ ಶಿಷ್ಯನ ಒಂದು ದಿನದ ತನು-ಮನ-ಧನದ ತ್ಯಾಗವಲ್ಲ, ಆದರೆ ಸರ್ವಸ್ವದ ತ್ಯಾಗವು ಬೇಕಾಗಿರುತ್ತದೆ. ಸರ್ವಸ್ವದ ತ್ಯಾಗ ಮಾಡದೇ ಮೋಕ್ಷ ಪ್ರಾಪ್ತಿಯಾಗುವುದಿಲ್ಲ. ಆದುದರಿಂದ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಲು ಬಯಸುವವರು ಸರ್ವಸ್ವದ ತ್ಯಾಗವನ್ನುಮಾಡಬೇಕು. ವೈಯಕ್ತಿಕ ಜೀವನದಲ್ಲಿ ಧರ್ಮಪರಾಯಣ ಜೀವನವನ್ನು ನಡೆಸುವ ಶ್ರದ್ಧಾವಂತ ಹಿಂದೂ ವಾಗಿರಲಿ ಅಥವಾ ಸಮಾಜಸೇವಕ, ದೇಶಭಕ್ತ ಮತ್ತು ಹಿಂದುತ್ವನಿಷ್ಠ ಹೀಗೆ ಸಮಷ್ಟಿ ಜೀವನ ದಲ್ಲಿ ಕರ್ಮಶೀಲ ಹಿಂದೂವಾಗಿರಲಿ, ಅವರಿಗೆ ಸಾಧನೆಗಾಗಿ ಸರ್ವಸ್ವದ ತ್ಯಾಗ ಮಾಡುವುದು ಕಠಿಣವೆನಿಸಬಹುದು; ಆದರೆ ಅವರಿಗೆ ರಾಷ್ಟ್ರ- ಧರ್ಮದಕಾರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡುವುದು ತುಲನೆಯಲ್ಲಿ ಸುಲಭವೆನಿಸಬಹುದು. ಪ್ರಸ್ತುತ ಧರ್ಮಸಂಸ್ಥಾಪನೆಗಾಗಿ ಕಾರ್ಯ ಮಾಡುವುದು ಸರ್ವೋತ್ತಮ ಸಮಷ್ಟಿ ಸಾಧನೆಯಾಗಿದೆ. ಧರ್ಮಸಂಸ್ಥಾಪನೆ ಎಂದರೆ ಸಮಾಜ ವ್ಯವಸ್ಥೆ ಮತ್ತು ರಾಷ್ಟ್ರ ರಚನೆಯನ್ನು ಆದರ್ಶವಾಗಿರಿಸಲು ಮಾಡುವ ಪ್ರಯತ್ನವಾಗಿದೆ. ಕಲಿಯುಗದಲ್ಲಿ ಈ ಕಾರ್ಯವನ್ನು ಮಾಡಬೇಕಾದರೆ ಸಮಾಜಕ್ಕೆ ಧರ್ಮಾಚರಣೆಯನ್ನು ಕಲಿಸುವುದು ಮತ್ತು ಆದರ್ಶ ರಾಜ್ಯ ವ್ಯವಸ್ಥೆಗಾಗಿ ನ್ಯಾಯೋಚಿತವಾಗಿ ಹೋರಾಡುವುದು ಅನಿವಾರ್ಯವಾಗಿದೆ. ಆರ್ಯ ಚಾಣಕ್ಯ, ಛತ್ರಪತಿ ಶಿವಾಜಿ ಮಹಾರಾಜರು ಸಹ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ್ದರು. ಅವರ ತ್ಯಾಗದಿಂದ ಧರ್ಮ ಸಂಸ್ಥಾಪನೆಯ ಕಾರ್ಯವು ಯಶಸ್ವಿಯಾಗಿತ್ತು, ಎಂಬ ಇತಿಹಾಸವನ್ನು ಗಮನದಲ್ಲಿಡಿ. ಆದುದರಿಂದಲೇ ಧರ್ಮನಿಷ್ಠ ಹಿಂದೂಗಳೇ, ಈ ಗುರುಪೂರ್ಣಿಮೆಯಿಂದ ಧರ್ಮಸಂಸ್ಥಾಪನೆಗಾಗಿ ಅಂದರೆ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸರ್ವಸ್ವದ ತ್ಯಾಗ ಮಾಡುವ ಸಿದ್ಧತೆಯನ್ನು ಮಾಡಿರಿ ಮತ್ತು ಇಂತಹ ತ್ಯಾಗ ಮಾಡುವುದರಿಂದ ಖಂಡಿತವಾಗಿಯೂ ಗುರುತತ್ತ್ವಕ್ಕೆ ಅಪೇಕ್ಷಿತವಾದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !
– (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.
ಆಪತ್ಕಾಲದಲ್ಲಿ ಗುರುಗಳ ಪ್ರೀತಿಮಯ ಕೃಪಾಛತ್ರವನ್ನು ಅನುಭವಿಸಲು ಶಿಷ್ಯರಾಗಿರಿ !
‘ಸಾಧಕರ ಜೀವನದಲ್ಲಿ ಗುರುಗಳಿಗೆ ಅನನ್ಯ ಸಾಧಾರಣ ಮಹತ್ವವಿದೆ. ಸಾಧಕಾವಸ್ಥೆಯ ಮುಂದಿನ ಆಧ್ಯಾತ್ಮಿಕ ಹಂತವೆಂದರೆ ಶಿಷ್ಯಾವಸ್ಥೆಯನ್ನು ಪ್ರಾಪ್ತ ಮಾಡಿಕೊಳ್ಳುವುದು. ಆಜ್ಞಾಪಾಲನೆ ಮತ್ತು ತನು-ಮನ-ಧನದ ತ್ಯಾಗವನ್ನು ಮಾಡಿದ ಶಿಷ್ಯನ ಯೋಗಕ್ಷೇಮವನ್ನು ಗುರುಗಳೇ ನೋಡಿಕೊಳ್ಳುತ್ತಾರೆ. ಇಂತಹ ಶಿಷ್ಯನಿಗೆ ಯಾವುದೇ ಸಂಕಟದ ಬಿಸಿ ತಟ್ಟುವುದಿಲ್ಲ; ಏಕೆಂದರೆ ಅವನ ಮೇಲೆ ಗುರುಗಳ ಪ್ರೀತಿಮಯ ಕೃಪಾಛತ್ರ ಇರುತ್ತದೆ. ಸದ್ಯದ ಆಪತ್ಕಾಲದಲ್ಲಿ ಸಾಧಕರಿಗೆ ಗುರುಗಳ ಪ್ರೀತಿಮಯ ಕೃಪಾಛತ್ರವನ್ನು ಅನುಭವಿಸುವ ಸುವರ್ಣಾವಕಾಶವಿದೆ. ಮುಂಬರುವ ಆಪತ್ಕಾಲದಲ್ಲಿ ಸಂಕಟದ ದೊಡ್ಡ ದೊಡ್ಡ ಬೆಟ್ಟಗಳನ್ನು ದಾಟ ಬೇಕಾಗುವುದು. ಇದನ್ನು ಗಮನದಲ್ಲಿಟ್ಟುಕೊಂಡು ಈ ಆಪತ್ಕಾಲವನ್ನು ಜಯಿಸಲು ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರುಗಳಿಗೆ ಅನನ್ಯ ಭಾವದಿಂದ ಶರಣಾಗೋಣ ಮತ್ತು ಅವರ ನಿಜವಾದ ಶಿಷ್ಯರಾಗಲು ಸಾಧನೆಯ ಪ್ರಯತ್ನಗಳ ಪರಾಕಾಷ್ಠೆಯನ್ನು ಮಾಡೋಣ
– ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ. (೨೮.೪.೨೦೨೧)
ಧರ್ಮಸಂಸ್ಥಾಪನೆಯ ದೈವೀ ಕಾರ್ಯದಲ್ಲಿ ಸಹಭಾಗಿಗಳಾಗಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಿ !
ಪೃಥ್ವಿಯ ಮೇಲೆ ಅಧರ್ಮ ಬಲಾಢ್ಯವಾದಾಗ ಈಶ್ವರನು ಅವತರಿಸುತ್ತಾನೆ ಮತ್ತು ಭಕ್ತರ ರಕ್ಷಣೆಯನ್ನು ಮಾಡುತ್ತಾನೆ. ‘ನ ಮೆ ಭಕ್ತಃ ಪ್ರಣಶ್ಯತಿ| (ನನ್ನ ಭಕ್ತರು ನಾಶವಾಗುವುದಿಲ್ಲ) ಎಂದು ಭಗವಾನ ಶ್ರೀಕೃಷ್ಣನು ಭಕ್ತರಿಗೆ ವಚನವನ್ನು ನೀಡಿದ್ದಾನೆ. ಅವನು ಶ್ರೀರಾಮ ಶ್ರೀಕೃಷ್ಣ ಮುಂತಾದ ಅವತಾರಗಳಲ್ಲಿ ಅನೇಕ ಲೀಲೆಗಳನ್ನು ಮಾಡಿ ಭಕ್ತರನ್ನು ರಕ್ಷಿಸಿದನು. ಪ್ರಭು ಶ್ರೀರಾಮಚಂದ್ರನು ಸಮಸ್ತ ಜೀವಗಳ ಕಲ್ಯಾಣ ಮಾಡುವ ರಾಮ ರಾಜ್ಯವನ್ನು ಸ್ಥಾಪಿಸಿದನು. ಭಗವಾನ ಶ್ರೀಕೃಷ್ಣನು ದುಷ್ಟ ಕೌರವರನ್ನು ಪರಾಭವಗೊಳಿಸಿ ಧರ್ಮ ರಾಜ್ಯವನ್ನು ಸ್ಥಾಪಿಸಿದನು. ಕಲಿಯುಗದಲ್ಲಿಯೂ ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ್ದಾರೆ. ಹೇಗೆ ಶ್ರೀರಾಮನ ಕಾರ್ಯದಲ್ಲಿ ವಾನರ ಸೇನೆಯು ಸಹ ಭಾಗಿಯಾಗಿ ತಮ್ಮ ಉದ್ಧಾರವನ್ನು ಮಾಡಿಕೊಂಡಿತೋ, ಹಾಗೆಯೇ ಪರಾತ್ಪರ ಗುರು ಡಾಕ್ಟರರ ಧರ್ಮ ಸ್ಥಾಪನೆಯ ಈ ದೈವೀ ಕಾರ್ಯದಲ್ಲಿ ಸಹಭಾಗಿಗಳಾಗಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಿರಿ !
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ (೨೮.೪.೨೦೨೧)