‘ಆಪತ್ಕಾಲದಲ್ಲಿ ಮಾರ್ಗ ತೋರಲು ಈಶ್ವರ ಸ್ವರೂಪ ಮೂವರು ಗುರುಗಳು ಲಭಿಸಿರುವುದು, ಸನಾತನದ ಸಾಧಕರ ಪರಮಭಾಗ್ಯ

೧. ಸನಾತನದ ಮೂವರು ಗುರುಗಳ ಪೃಥ್ವಿಯ ಮೇಲಿನ ಅಸ್ತಿತ್ವ ಮಾತ್ರದಿಂದಲೇ ಸಾಧಕರ ರಕ್ಷಣೆಯಾಗಲಿದೆ !

‘ಯಾರ ಪ್ರಾಣವಾಯುವಿನಲ್ಲಿ ಕ್ಷಣಾರ್ಧದಲ್ಲಿ ಅನಂತ ಕೋಟಿ ಬ್ರಹ್ಮಾಂಡಕ್ಕೆ ಹೋಗಿ ಬರುವಷ್ಟು ವಾಯುವಿದೆಯೋ, ಯಾರ ವಾಣಿಯಲ್ಲಿ ದೇವಿ ಸರಸ್ವತಿ ನೆಲೆಸಿದ್ದಾಳೆಯೋ ಮತ್ತು ಯಾರ ವಾಣಿಯಿಂದ ಹೊರಡುವ ಶಬ್ದಗಳನ್ನು ಕೇಳಲು ದೇವತೆಗಳೂ ಆತುರರಾಗಿರುತ್ತಾರೆಯೋ, ಅಂತಹ ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಮೂವರೂ ಗುರುಗಳು ಅಲೌಕಿಕವಾಗಿದ್ದಾರೆ. ‘ಈ ಮೂವರೂ ಗುರುಗಳ ಪೃಥ್ವಿಯ ಮೇಲಿನ ಅಸ್ತಿತ್ವದಿಂದಲೇ ವಿಶ್ವದ ಸನಾತನದ ಎಲ್ಲ ಸಾಧಕರ ರಕ್ಷಣೆಯಾಗಲಿದೆ, ಎನ್ನುವುದು ನನ್ನ ದೃಢ ಶ್ರದ್ಧೆಯಾಗಿದೆ. ಸನಾತನದ ಮೂವರೂ ಗುರುಗಳ ಮೇಲೆ ಶ್ರದ್ಧೆಯನ್ನು ಇಟ್ಟಿರುವುದರಿಂದ, ಘೋರ ಆಪತ್ಕಾಲದಿಂದ ಪಾರಾಗುವ ಸನಾತನದ ಸಾಧಕರು ೨೦೨೩ ನೇ ಇಸವಿಯ ಬಳಿಕ ಸೃಷ್ಟಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಸದ್ಯ ಸಂಪೂರ್ಣ ಪೃಥ್ವಿಯನ್ನು ‘ಕೊರೊನಾ ವಿಷಾಣುರೂಪಿ ಜಾಗತಿಕ ಸಂಕಟ ಆವರಿಸಿದೆ. ಇದು ಆಪತ್ಕಾಲವೇ ಆಗಿದೆ.

ಸಮಾಜದಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳ ಜನರು ಭಯ, ಒತ್ತಡ ಮತ್ತು ಚಿಂತೆಯಿಂದ ಕೂಡಿದ್ದಾರೆ. ಅನೇಕ ಕೋಟಿ ಜನರು ಕೇವಲ ಒಂದು ಹೊತ್ತು ಊಟವನ್ನು ಮಾಡುತ್ತಿದ್ದಾರೆ. ಅನೇಕ ಜನರಿಗೆ ವಾಸಕ್ಕೆ ಮನೆ ಉಳಿದಿಲ್ಲ. ‘ಭವಿಷ್ಯ ಹೇಗಿರಬಹುದು ?, ಎನ್ನುವ ಚಿಂತೆಯಿಂದ ಅನೇಕ ಜನರು ಮಾನಸಿಕ ರೋಗಿಗಳಾಗುತ್ತಿದ್ದಾರೆ. ಸಮಾಜದಲ್ಲಿ ಆಪತ್ಕಾಲದ ಜೀವನವೆಂದರೆ ಕಡಲ ತೀರದಿಂದ ಬಹುದೂರ, ವಿಶಾಲ ಸಮುದ್ರದ ಮಧ್ಯ ಭಾಗದಲ್ಲಿ, ಕಡುಕತ್ತಲೆಯ ರಾತ್ರಿಯಲ್ಲಿ, ಅತಿ ವೇಗವಾಗಿ ಬೀಸುವ ಗಾಳಿಯಲ್ಲಿ ಒಂದು ಚಿಕ್ಕ ದೋಣಿಯಲ್ಲಿ ಒಬ್ಬರೇ ಪಯಣಿಸುವಂತಾಗಿದೆ. ಅವರಿಗೆ ಮಾರ್ಗ ತೋರಿಸುವವರು ಯಾರೂ ಇಲ್ಲದಂತಾಗಿದೆ. ಸನಾತನದ ಸಾಧಕರ ಪರಮಭಾಗ್ಯವೆಂದರೆ, ಅವರಿಗೆ ಮೂವರು ಗುರುಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಆಪತ್ಕಾಲದಲ್ಲಿ ಗುರುಗಳ ಬಾಯಿಯಿಂದ ಹೊರಟ ಶಬ್ದಗಳು ಮಂತ್ರದಂತೆ ಕಾರ್ಯ ಮಾಡುತ್ತಿರುವ ಅನುಭೂತಿ ಎಲ್ಲ ಸಾಧಕರಿಗೆ ಬರಲಿದೆ. ಸಾಧಕರು ಮೂವರೂ ಗುರುಗಳು ಏನು ಹೇಳುತ್ತಾರೆಯೋ, ಅದನ್ನು ಪಾಲಿಸುವುದು, ಎಲ್ಲ ಕಾರ್ಯಪದ್ಧತಿಯ, ಜವಾಬ್ದಾರ ಸಾಧಕರಿಂದ ಮತ್ತು ‘ಸನಾತನ ಪ್ರಭಾತದಲ್ಲಿ ಬರುವ ಸೂಚನೆಗಳನ್ನು ಪಾಲಿಸಿದರೆ, ಮೂವರೂ ಗುರುಗಳು ಸಾಧಕರನ್ನು ಆಪತ್ಕಾಲದಿಂದ ಸುಖರೂಪವಾಗಿ ಪಾರು ಮಾಡುತ್ತಾರೆ.

ಶ್ರೀ. ವಿನಾಯಕ ಶಾನಭಾಗ

೨. ಶ್ರೀವಿಷ್ಣುವಿನ ಅಭಯ ಹಸ್ತದಂತೆ ಸಾಧಕರ ಮೇಲೆ ಕೃಪಾಛಾಯೆಯನ್ನು ನೀಡುವ ಪರಾತ್ಪರ ಗುರು ಡಾಕ್ಟರ !

ಶ್ರೀವಿಷ್ಣುವಿನ ಅಭಯ ಹಸ್ತದ ಕುರಿತು ನಾವೆಲ್ಲ ಸಾಧಕರು ಕೇಳಿದ್ದೇವೆ. ಶ್ರೀವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಅಭಯ ಹಸ್ತದಲ್ಲಿ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಆಪತ್ಕಾಲದಲ್ಲಿಯೇ ಶ್ರೀವಿಷ್ಣುವಿನ ‘ಅಭಯ ಹಸ್ತದ ಮಹತ್ವ ಗಮನಕ್ಕೆ ಬರುತ್ತದೆ. ಇನ್ನು ಮುಂದೆಯೂ ಕೊರೊನಾದಂತಹ ಅನೇಕ ಆಪತ್ಕಾಲಗಳು ಬರಬಹುದು; ಆದರೆ ಗುರುದೇವರು ಸಾಧಕರ ಕೈ ಹಿಡಿದುಕೊಂಡು ಅವರನ್ನು ಹೂವಿನಂತೆ ಅದರಿಂದ ಪಾರು ಮಾಡಲಿದ್ದಾರೆ. ‘ಶ್ರೀವಿಷ್ಣುವಿನ ಅಭಯ ಹಸ್ತ ಎಲ್ಲ ಸಾಧಕರ ಮಸ್ತಕದ ಮೇಲೆ ನಿರಂತರವಾಗಿರಲಿ ಮತ್ತು ಅವರ ಕೃಪಾಛತ್ರದಲ್ಲಿ ಎಲ್ಲ ಸಾಧಕರು ಆನಂದದಿಂದ ಆಪತ್ಕಾಲವನ್ನು ಎದುರಿಸುವಂತಾಗಲಿ, ಇದೇ ಶ್ರೀವಿಷ್ಣುವಿನ ಅವತಾರ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಪ್ರಾರ್ಥನೆ.

– ಶ್ರೀ. ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಗುರು ಮತ್ತು ಶಿಷ್ಯ ಇವರ ಸಂಬಂಧ ಪ್ರೇಮದ ದಾರದಿಂದ ಜೋಡಿಸಲ್ಪಟ್ಟಿದ್ದರಿಂದ ಶಿಷ್ಯನಿಗಾಗುವ ಚಿಕ್ಕಚಿಕ್ಕ ದುಃಖದ ಅರಿವೂ ಗುರುಗಳಿಗೆ ಆಗುವುದು

ಓರ್ವ ಮಹಿಳಾ ಭಕ್ತಳು ಅಮ್ಮನಿಗೆ ಕೇಳಿದರು, ‘ಅಮ್ಮ ಇಡೀ ಜಗತ್ತಿನಲ್ಲಿ ನಿಮ್ಮ ಲಕ್ಷಗಟ್ಟಲೆ ಭಕ್ತರಿದ್ದಾರೆ. ಈ ಲಕ್ಷಗಟ್ಟಲೆ ಜನರಲ್ಲಿ ನಿಮಗೆ ನನ್ನ ಮನಸ್ಸಿನ ದುಃಖ ಹೇಗೆ ತಿಳಿಯುತ್ತದೆ? ಅದಕ್ಕ ಅಮ್ಮ ಸುಂದರ ಹಾಗೂ ಸಮರ್ಪಕವಾಗಿ ಉತ್ತರ ನೀಡಿದರು. ಅವರು ಹೇಳಿದರು, ‘ಮಗಲೇ, ನಮ್ಮ ಶರೀರದಲ್ಲಿ ಕೋಟಿಗಟ್ಟಲೆ ಕೂದಲುಗಳಿರುತ್ತದೆ. ಅವುಗಳಲ್ಲಿ ಒಂದು ಕೂದಲನ್ನು ಯಾರಾದರೂ ಎಳೆದರೂ ನಮಗೆ ಯಾವ ಕೂದಲು ಎಳೆದರು ಮತ್ತು ಎಲ್ಲಿ ವೇದನೆಯಾಗುತ್ತಿದೆ, ಎಂಬುದು ಕ್ಷಣವೇ ತಿಳಿಯುವುದಿಲ್ಲವೇ? ಅದೇ ರೀತಿ ಪ್ರೇಮಿದ ಸಂಬಂಧಿದಿಂದ ಜೋಡಿಸಲ್ಪಟ್ಟಿದ್ದರಿಂದ ಅಮ್ಮ ತಮ್ಮ ಮಕ್ಕಳ ಮನಸ್ಸಿನಲ್ಲಿ ದುಃಖವನ್ನು ಸಹಜವಾಗಿ ಅರಿತುಕೊಳ್ಳಬಹುದು. – ಮಾತೃವಾಣಿ (ಆಗಸ್ಟ್ ೨೦೧೦)