ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ

ಗುರುಪೂರ್ಣಿಮೆಯಂದು ೧೦೦೦ ಪಟ್ಟು ಹೆಚ್ಚು ಕಾರ್ಯನಿರತ ಗುರುತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು’ ಆನ್‌ಲೈನ್’ ಮೂಲಕ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸುತ್ತಿದ್ದೇವೆ. ತಮಗೆಲ್ಲರಿಗೂ ಹಾರ್ದಿಕ ಆಮಂತ್ರಣ.

ಗುರುಪೂರ್ಣಿಮೆಯನ್ನು ಆಚರಿಸುವುದರಲ್ಲಿ, ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸುವ ಒಂದು ಉದ್ದೇಶವಿದೆ; ಅದರ ಜೊತೆಗೆ ಆ ದಿನ ಗುರುಗಳ ಕೃಪಾಶೀರ್ವಾದವು ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ನಿತ್ಯಕ್ಕಿಂತಲೂ ಹೆಚ್ಚು ಪಟ್ಟು ಇರುತ್ತದೆ. ಮಹೋತ್ಸವದ ಕಾರ್ಯದಲ್ಲಿ ಸಕ್ರಿಯವಾಗಿ ಸಹಭಾಗಿಗಳಾಗುವವರಿಗೆ ಅವರ ಪಾಲ್ಗೊಳ್ಳುವಿಕೆಯ ಪ್ರಮಾಣಕ್ಕೆ ತಕ್ಕಂತೆ ಲಾಭವಾಗುತ್ತದೆ. ಆ ದಿನ ಕೇವಲ ದರ್ಶನಕ್ಕೆಂದು ಬಂದಿರುವವರಿಗೆ ಸಹಜವಾಗಿಯೇ ಕಡಿಮೆ ಲಾಭವಾಗುತ್ತದೆ. ನಿಜವಾದ ಶಿಷ್ಯನಿಗೆ ಕ್ಷಣಕ್ಷಣಕ್ಕೂ ಗುರುಗಳ ನೆನಪಿರುತ್ತದೆ. ಇತರರಿಗೆ ಕನಿಷ್ಠ ಪಕ್ಷ ವರ್ಷಕ್ಕೊಮ್ಮೆಯಾದರೂ ಗುರುಗಳ ನೆನಪಾಗಲೆಂದು ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ !

ಗುರುಪೂರ್ಣಿಮಾ ಮಹೋತ್ಸವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿ