ಶ್ರೇಷ್ಠವಾದ ‘ಗುರು-ಶಿಷ್ಯ ಪರಂಪರೆ !

‘ಗುರು-ಶಿಷ್ಯ ಪರಂಪರೆಯು ಹಿಂದೂ ಸಂಸ್ಕೃತಿಯ ಶ್ರೇಷ್ಠತೆಯಲ್ಲಿನ ಒಂದು ರತ್ನಭರಿತ ಕೊಂಡಿ  !

‘ವಸಿಷ್ಠಋಷಿ-ಶ್ರೀರಾಮ, ‘ಸಾಂದೀಪನಿಋಷಿ-ಶ್ರೀಕೃಷ್ಣ, ‘ಆರ್ಯಚಾಣಕ್ಯ-ಚಂದ್ರಗುಪ್ತ ಇವರೆಲ್ಲ ಆದರ್ಶ ಗುರು-ಶಿಷ್ಯಗಳ ಉದಾಹರಣೆಯಾಗಿದ್ದಾರೆ. ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ. ಎಣ್ಣೆಬತ್ತಿ ಇರದಿರುವ ದೀಪವನ್ನು ಒಂದು ವೇಳೆ ೧೦೦ ಬಾರಿ ಪ್ರಕಾಶಮಾನವಾಗಿರುವ ದೀಪದ ಹತ್ತಿರ ಕೊಂಡೊಯ್ದರೂ, ಅದು ಬೆಳಕು ಕೊಡುವುದಿಲ್ಲ. ಶಿಷ್ಯನ ದೀಪದಲ್ಲಿನ ಎಣ್ಣೆ ಬತ್ತಿಯೆಂದರೆ ಅವನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿ !

ಗುರುಗಳ ಉಪದೇಶದ ಅನುಕರಣೆ (ಅನುಸರಿಸಬೇಕು) ಮಾಡಬೇಕು !

ಪರದೇಶದಲ್ಲಿ ಪ್ರಯಾಣಿಕನಿಗೆ ಸರಿಯಾದ ಮಾರ್ಗವು ಗೊತ್ತಿರದಿದ್ದರೆ, ಆ ಪ್ರಯಾಣಿಕನು ಅಲ್ಲಿನ ಜನರ ಸೂಚನೆಯಂತೆ ಮಾರ್ಗಕ್ರಮಣವನ್ನು ಮಾಡುತ್ತಾನೆ. ಅದೇ ರೀತಿ ಯಾರಿಗೆ ಭಗವಂತನ ಸ್ಥಳವು ಗೊತ್ತಿದೆಯೋ, ಅಂತಹ ಗುರುಗಳ ಉಪದೇಶದ ಅನುಕರಣೆಯನ್ನು ಮಾಡಬೇಕು. (ಆಧಾರ : ಪೂ. ಬಾಳಾಜಿ ಆಠವಲೆಯವರ ವಿಚಾರಸಂಪತ್ತು : ಭಾಗ ೩ (ಸುಗಮ ಅಧ್ಯಾತ್ಮ)

 ಗುರುಗಳ ಶ್ರೇಷ್ಠತೆ

೧. ಗುರುಗಳು ಸ್ಪರ್ಶಮಣಿಗಿಂತಲೂ ಶ್ರೇಷ್ಠರಾಗಿರುತ್ತಾರೆ; ಏಕೆಂದರೆ ಸ್ಪರ್ಶಮಣಿಯು ಕಬ್ಬಿಣವನ್ನು ಬಂಗಾರವನ್ನಾಗಿ ಮಾಡುತ್ತದೆ, ಸ್ಪರ್ಶಮಣಿಯನ್ನಾಗಿ ಮಾಡುವುದಿಲ್ಲ. ತದ್ವಿರುದ್ಧ ಗುರುಗಳು ಶಿಷ್ಯನನ್ನು ತಮ್ಮಂತೆ ‘ಗುರು ಗಳನ್ನಾಗಿ ಮಾಡುತ್ತಾರೆ.

೨. ಗುರುಗಳ ಮಹತ್ವದ ವರ್ಣನೆಯನ್ನು ಮಾಡುವುದೆಂದರೆ ಶಬ್ದಗಳ ಆಚೆಗಿದೆ.

. ಗುರುಗಳು, ‘ಆಧ್ಯಾತ್ಮಿಕ ವಾದವಿವಾದದಲ್ಲಿ ಶಿಷ್ಯನು ನನ್ನನ್ನು ಯಾವಾಗಲೂ ಸೋಲಿಸಬೇಕು ಎಂದು ಹೇಳುತ್ತಾರೆ.

(ಆಧಾರ : ಪೂ. ಬಾಳಾಜಿ ಆಠವಲೆಯವರ ವಿಚಾರಸಂಪತ್ತು : ಭಾಗ ೩ (ಸುಗಮ ಅಧ್ಯಾತ್ಮ)