ಗುರುಗಳು ಶಿಷ್ಯರಿಗೆ ಕಲಿಸುವುದು

ಸಂತರು ಅಥವಾ ಗುರುಗಳು ಸಾಧಕರಿಗೆ ಅಥವಾ ಶಿಷ್ಯರಿಗೆ ವಿವಿಧ ರೀತಿಯಲ್ಲಿ ಕಲಿಸುತ್ತಿರುತ್ತಾರೆ. ಕೆಲವೊಮ್ಮೆ ಅವರ ಕಲಿಸುವಿಕೆಯು ಪ್ರತ್ಯಕ್ಷವಾಗಿದ್ದರೆ, ಇನ್ನೂ ಕೆಲವೊಮ್ಮೆ ಅದು ಪರೋಕ್ಷ (ವರ್ತನೆಯಿಂದ) ವಾಗಿರುತ್ತದೆ. ಕೆಲವೊಮ್ಮೆ ಅವರು ವಿನೋದದಿಂದ ಕಲಿಸಿದರೆ, ಇನ್ನೂ ಕೆಲವೊಮ್ಮೆ ಅವರು ಅನುಭೂತಿಗಳನ್ನು ಕೊಟ್ಟು ಕಲಿಸುತ್ತಾರೆ.

ಗುರುಗಳಿಲ್ಲದೇ ಈಶ್ವರನ ದರ್ಶನವಾಗುವುದು ಅಸಾಧ್ಯ !

ಬೀದಿದೀಪವು ಬರುವ-ಹೋಗುವ ಜನರಿಗೆ ಬೆಳಕು ತೋರಿಸುತ್ತದೆ, ಆದರೆ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನರೂಪಿ ಬೆಳಕನ್ನು ತೋರಿಸಲು ಗುರುಗಳು ಪರಿಶ್ರಮಪಡುತ್ತಿರುತ್ತಾರೆ.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯ ಅಂದರೆ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ !

ಹಿಂದೂಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣ ಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ. ಅದರ ಅಂತರ್ಗತ ವ್ಯಕ್ತಿತ್ವ ವಿಕಸನ, ಅಧ್ಯಾತ್ಮ ಮತ್ತು ಧರ್ಮಶಿಕ್ಷಣ ಇತ್ಯಾದಿಗಳ ಕುರಿತು ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಹಿಂದೂ ಜನಜಾಗೃತಿ ಸಮಿತಿಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿ ಧರ್ಮ ಕಾರ್ಯಕ್ಕಾಗಿ ವಿನಿಯೋಗಿಸಲಿದೆ.

ಗುರುಗಳ ಮಹತ್ವ

ಭಗವಂತನ ತತ್ತ್ವಕ್ಕನುಸಾರ ನ್ಯಾಯವ್ಯವಸ್ಥೆ ಇದೆ. ಒಂದು ವೇಳೆ ನೀನು ಉತ್ತಮ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಉತ್ತಮ ಫಲ, ಉತ್ತಮ ಆಯುಷ್ಯ ಮತ್ತು ಮುಕ್ತಿ ಸಿಗುವುದು; ಆದರೆ ಒಂದು ವೇಳೆ ನೀನು ಕೆಟ್ಟ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಕೆಟ್ಟ ಫಲವೇ ಸಿಗುವುದು ಮತ್ತು ನಿನಗೆ ಶಿಕ್ಷೆಯಾಗುವುದು.