2023ರ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆಗೆ ಎನ್.ಐ.ಎ. ತಂಡ ತೆರಳಿತ್ತು
ಮೇದಿನಿಪುರ (ಬಂಗಾಳ) – ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ಮೇಲೆ ಏಪ್ರಿಲ್ 6 ರ ಮುಂಜಾನೆ ಗುಂಪೊಂದು ಕಲ್ಲುಗಳನ್ನೆಸೆದು ವಾಹನವನ್ನು ಧ್ವಂಸಗೊಳಿಸಿದೆ. ಇದರಲ್ಲಿ ದಳದ ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಳದ ಮೇಲೆ ಆಕ್ರಮಣ ಮಾಡಿದ ಪ್ರಕರಣದಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಭೂಪತಿನಗರದಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆಗೆ ಎನ್.ಐ.ಎ. ಇಲ್ಲಿಗೆ ಬಂದಾಗ ಈ ಘಟನೆ ನಡೆದಿದೆ. ಈ ಸ್ಫೋಟದಲ್ಲಿ 3 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ 8 ನಾಯಕರ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕೆಲವರಿಗೆ ನೋಟಿಸ್ ನೀಡಲಾಗಿತ್ತು; ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಬಳಿಕ ಎನ್.ಐ.ಎ. ಅವರನ್ನು ವಶಕ್ಕೆ ಪಡೆಯಲು ಆಗಮಿಸಿದಾಗ ಈ ಘಟನೆ ನಡೆದಿದೆ.
ಫೆಬ್ರವರಿಯಲ್ಲಿ ‘ಇಡಿ’ ಮೇಲೂ ಆಕ್ರಮಣ ಆಗಿತ್ತು !
ಇದಕ್ಕೂ ಮುನ್ನ ಜನವರಿ 5 ರಂದು, ಜಾರಿ ನಿರ್ದೇಶನಾಲಯದ (ಇಡಿ) ಮೇಲೆ ಬಂಗಾಳದ ಸಂದೇಶಖಾಲಿ ಪ್ರದೇಶದಲ್ಲಿ ಆಕ್ರಮಣ ಆಗಿತ್ತು. ಈ ತಂಡವು ಇಲ್ಲಿ ಆಗಿನ ತೃಣಮೂಲ ಕಾಂಗ್ರೆಸ್ಸಿನ ಹಂಗಾಮಿ ನಾಯಕ ಶೇಖ್ ಷಹಜಹಾನ್ ಅವರನ್ನು ಭೂ ಹಗರಣದ ಪ್ರಕರಣದಲ್ಲಿ ಬಂಧಿಸಲು ಇಲ್ಲಿಗೆ ಹೋದಾಗ 100 ಕ್ಕೂ ಹೆಚ್ಚು ಜನರ ಗುಂಪು ತಂಡದ ಮೇಲೆ ದಾಳಿ ನಡೆಸಿತು. ಇದರಲ್ಲಿ ಓರ್ವ ಅಧಿಕಾರಿ ಗಾಯಗೊಂಡಿದ್ದರು.
ಸಂಪಾದಕೀಯ ನಿಲುವು‘ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿ ಅನೇಕ ವರ್ಷಗಳಾಗಿರುವಾಗ, ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗದೇ ಇರುವುದು ಜನರಿಗೆ ಮತ್ತು ಭದ್ರತಾ ವ್ಯವಸ್ಥೆಯ ಮೇಲೆ ಆದ ಅನ್ಯಾಯ’ ಎಂದು ಈಗ ಅಲ್ಲಿಯ ದೇಶವಾಸಿಗಳಿಗೆ ಅನ್ನಿಸತೊಡಗಿದೆ ! |