(ದ್ರಾವಿಡ ಎಂದರೆ ದ್ರಾವಿಡ ಮುನ್ನೇತ್ರ ಕಳಘಂ (ದ್ರಾವಿಡ ಪ್ರಗತಿ ಸಂಘ))
ನವದೆಹಲಿ : ದ್ರಮುಕದ ಮಾಜಿ ನಾಯಕ ಜಾಫರ್ ಸಾದಿಕ್ ಮತ್ತು ಅವರ ಸಹಚರರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯವು (‘ಇಡಿ’) ದಾಳಿ ನಡೆಸಿದ್ದು, 55 ಕೋಟಿ 30 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದೆ. ಇದರಲ್ಲಿ ಐಷಾರಾಮಿ ಬಂಗಲೆ, ಹೋಟೆಲ್, ದುಬಾರಿ ಕಾರುಗಳು ಇತ್ಯಾದಿಗಳನ್ನು ಒಳಗೊಂಡಿದೆ.
ಮಾದಕ ಪದಾರ್ಥ ನಿಯಂತ್ರಣ ವಿಭಾಗ ಮತ್ತು ಕಸ್ಟಮ್ಸ್ ಇಲಾಖೆಯ ತನಿಖೆಯ ಆಧಾರದ ಮೇಲೆ ತಮಿಳುನಾಡಿನ 15 ಸ್ಥಳಗಳಲ್ಲಿ ‘ಇಡಿ’ಯು ದಾಳಿ ನಡೆಸಿತು. ಜಾಫರ್ ಸಾದಿಕ್, ಅವನ ಸಹೋದರ ಮುಹಮ್ಮದ್ ಸಲೀಂ ಮತ್ತು ಇತರರು ‘ಸೂಡೋಫೆಡ್ರಿನ್’ ಮತ್ತು ಇತರ ಮಾದಕವಸ್ತುಗಳ ರಫ್ತು ಮತ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಜಾಫರ್ ಸಾದಿಕ್ ನನ್ನು ‘ಇಡಿ’ಯು ಜೂನ್ 26, 2024 ರಂದು ಬಂಧಿಸಿತ್ತು. ನಂತರ ಆಗಸ್ಟ್ 12 ರಂದು ಅವರ ಸಹೋದರ ಮುಹಮ್ಮದ್ ಸಲೀಂ ನನ್ನೂ ‘ಇಡಿ’ ಯು ಬಂಧಿಸಿತ್ತು.
ಸಂಪಾದಕೀಯ ನಿಲುವುಹಿಂದೂ ಧರ್ಮವನ್ನು ನಾಶಪಡಿಸುವ ಹೇಳಿಕೆ ನೀಡುವ ಪಕ್ಷದ ನಾಯಕರ ನಿಜ ಸ್ಥಿತಿ ಗಮನಿಸಿ ! |