ತಮಿಳುನಾಡು ವಕ್ಫ್ ಬೋರ್ಡನ ಅಧ್ಯಕ್ಷ ಸ್ಥಾನದ ದುರುಪಯೋಗ ಪಡಿಸಿಕೊಂಡಿರುವ ಕುರಿತು ವಿಚಾರಣೆ ನಡೆಸಿ !

ಸೂಫಿ ಇಸ್ಲಾಮಿಕ್ ಬೋರ್ಡ್‌ನಿಂದ ಕೇಂದ್ರ ಹಣಕಾಸು ಸಚಿವರಲ್ಲಿ ಮನವಿ !

ಚೆನ್ನೈ (ತಮಿಳುನಾಡು) – ತಮಿಳುನಾಡು ವಕ್ಫ್ ಬೋರ್ಡ್ ದ ಅಧ್ಯಕ್ಷ ಅಬ್ದುಲ್ ರಹಮಾನ್ ಇವನ ಮೇಲೆ ಹುದ್ದೆಯ ದುರುಪಯೋಗ ಮಾಡಿರುವ ಪ್ರಕರಣದ ವಿಚಾರಣೆ ನಡೆಯಬೇಕು ಎಂದು ರಾಜ್ಯದ ಸೂಫಿ ಇಸ್ಲಾಮಿಕ್ ಬೋರ್ಡ್‌ನಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಈಡಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

೧. ಸೂಫಿ ಇಸ್ಲಾಮಿಕ್ ಬೋರ್ಡ್ ಪತ್ರದಲ್ಲಿ, ಅಬ್ದುಲ್ ರೆಹಮಾನ್ ಇವನ ನೇತೃತ್ವದಲ್ಲಿನ ತಿರುಚಿಯ ವೆಪ್ಪುರ್ ಇಲ್ಲಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆ ಕಟ್ಟುವ ಪ್ರಕ್ರಿಯೆ ಆರಂಭವಾಗಿರುವ ಮಾಹಿತಿ ೨೦೨೨ ಆರಂಭದಿಂದಲೇ ಸಾರ್ವಜನಿಕವಾಗಿದೆ. ಅಬ್ದುಲ್ ರೆಹಮಾನ್ ಇವನು ಅವನ ಸಾರ್ವಜನಿಕ ಹುದ್ದೆಯ ದುರುಪಯೋಗ ಮಾಡಿಕೊಂಡು ಈ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ನಿಧಿ ಸಂಗ್ರಹಿಸುತ್ತಿದ್ದಾನೆ. ಇದು ಸುಲಿಗೆಯ ಹಣವಾಗಿದೆ. ಅದು ಸುಮಾರು ೩೦೦ ಕೋಟಿ ಎಷ್ಟು ಇದೆ. ಅದಕ್ಕಾಗಿ ರೆಹಮಾನ್ ಇವನು ರಾಜ್ಯದ ಅನೇಕ ಸ್ಥಳಗಳಲ್ಲಿ ಸಭೆಗಳನ್ನು ನಡೆಸಿದ್ದಾನೆ. ರೆಹಮಾನ್ ಇವನು ಅನುಮತಿ ಇಲ್ಲದೆ ವಿದೇಶದಿಂದ ಕೂಡ ಹಣ ಸಂಗ್ರಹಿಸುತ್ತಿದ್ದಾನೆ.

೨. ತ್ರಿವರ್ಣ ಧ್ವಜದ ಅವಮಾನ ಮಾಡಿರುವ ಪ್ರಕರಣದಲ್ಲಿ ಸಪ್ಟೆಂಬರ್ ೨೦೨೨ ರಲ್ಲಿ ಅಬ್ದುಲ್ ರೆಹಮಾನ ಮೇಲೆ ದೂರು ದಾಖಲಾಗಿತ್ತು. ಅಜಮಲ್ ಖಾನ್ ಇವರು ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದರು.

3. ಸೂಫಿ ಬೋರ್ಡ್‌, ಅಬ್ದುಲ್ ರೆಹಮಾನ್ ಇವನು ರಾಜಕೀಯ ಪಕ್ಷಕ್ಕಾಗಿ ಹಣದ ದಲ್ಲಾಳಿ ಎಂದು ಕಾರ್ಯ ಮಾಡುತ್ತಿದ್ದಾನೆ. ರಾಜಕೀಯ ಪಕ್ಷಕ್ಕೆ ಕಪ್ಪು ಹಣ ಪಡೆಯುವುದು ಮತ್ತು ಅದನ್ನು ಬಿಳಿಯನ್ನಾಗಿ ಮಾಡುವುದು ಇದಕ್ಕಾಗಿ ಅವನು ಸಂಪರ್ಕಿಸುತ್ತಾನೆ. ಅದಕ್ಕಾಗಿ ಅವನು ‘ಕೈಧೆ ಮಿಲ್ಲತ್ ತಮಿಳು ಪೇರಾವಾಯಿ’ ಎಂಬ ಸಂಸ್ಥೆ ನಡೆಸುತ್ತಿದ್ದಾನೆ. ಎಂದು ಆರೋಪ ಮಾಡಿದೆ.

ಸಂಪಾದಕೀಯ ನಿಲುವು

ಈ ರೀತಿಯ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸರಕಾರಕ್ಕೆ ಇದು ತಿಳಿಯುವುದಿಲ್ಲವೇ ?