ಪಿ.ಎಫ್.ಐ. ನ ಸಿಂಗಾಪುರ್ ಮತ್ತು ಕೊಲ್ಲಿ ದೇಶಗಳಲ್ಲಿ ೧೨ ಸಾವಿರಗಿಂತಲೂ ಹೆಚ್ಚಿನ ಸದಸ್ಯರು
ನವ ದೆಹಲಿ – ಭಾರತವು ನಿಷೇಧಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಈ ಭಯೋತ್ಪಾದಕ ಸಂಘಟನೆಯ ಸದಸ್ಯರಿಂದ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವುದಕ್ಕಾಗಿ ಹವಾಲಾದ ಮೂಲಕ ನಿಧಿ ಕಳುಹಿಸಲಾಗುತ್ತಿದೆ ಎಂದು (ಈಡಿ) ಜಾರಿ ನಿರ್ದೇಶನಾಲಯದಿಂದ ಮಾಹಿತಿ ಸಿಕ್ಕಿದೆ. ಪಿ.ಎಫ್.ಐ. ನ ಸಿಂಗಾಪುರ್ ಮತ್ತು ಕೊಲ್ಲಿ ದೇಶಗಳಲ್ಲಿ ೧೩ ಸಾವಿರಕ್ಕಿಂತಲೂ ಹೆಚ್ಚಿನ ಸದಸ್ಯರಿದ್ದು ಅವರಿಗೆ ಈ ನಿಧಿ ಸಂಗ್ರಹಿಸುವ ಹೊಣೆ ಇದೆ.
Terrorist activities in India are being funded through the hawala network by the PFI ! – ED
There are more than 13,000 members of the PFI based in Singapore and Gulf countries
The real aim of the PFI is to create an Islamic movement in India through Jihad!
The fact that… pic.twitter.com/sZF4wWs2oJ
— Sanatan Prabhat (@SanatanPrabhat) October 19, 2024
ಸಪ್ಟೆಂಬರ್ ೨೦೨೨ ರಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಮತ್ತು ಈಡಿ ಇವರು ಪಿ.ಎಫ್.ಐ. ನ ದೇಶಾದ್ಯಂತ ಅಲ್ಲಲ್ಲಿ ದಾಳಿ ನಡೆಸಿದ್ದರು. ಇದರಲ್ಲಿ ಪಿ.ಎಫ್.ಐ. ಗೆ ಸಂಬಂಧಪಟ್ಟ ಅನೇಕ ನಾಯಕರನ್ನು ಬಂಧಿಸಲಾಯಿತು. ಅದರ ನಂತರ ಯು.ಎ.ಪಿ.ಎ. ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಯಿತು. ದಾಳಿಯ ನಂತರ ಕೇಂದ್ರ ಸರಕಾರವು ಸಪ್ಟೆಂಬರ್ ೨೮, ೨೦೨೨ ರಲ್ಲಿ ಪಿ.ಎಫ್.ಐ. ಮೇಲೆ ನಿಷೇಧ ಹೇರಿತು. ಅಂದಿನಿಂದ ಈಡಿ ಪಿ.ಎಫ್.ಐ. ನ ಆಳವಾದ ತನಿಖೆ ನಡೆಸುತ್ತಿದೆ. ಮೇಲಿನ ಮಾಹಿತಿ ಇದು ಈ ತನಿಖೆಯ ಭಾಗವಾಗಿದೆ.
ಜಿಹಾದ್ ಮೂಲಕ ಭಾರತದಲ್ಲಿ ಇಸ್ಲಾಮಿ ಚಳವಳಿ ನಡೆಸುವುದು ಪಿ.ಎಫ್.ಐ. ನ ನಿಜವಾದ ಉದ್ದೇಶ !
ಪಿ.ಎಫ್.ಐ. ನ ನಿಜವಾದ ಉದ್ದೇಶ ಅದರ ಘಟನೆಯಲ್ಲಿ ನಮೂದಿಸಿರುವ ಉದ್ದೇಶಕ್ಕಿಂತಲೂ ಬೇರೆ ಇರುವುದಾಗಿ ತನಿಖೆಯಲ್ಲಿ ಕಂಡು ಬಂದಿದೆ. ಪಿ.ಎಫ್.ಐ. ತನ್ನನ್ನು ಸಾಮಾಜಿಕ ಸಂಘಟನೆ ಎಂದು ತೋರಿಸುತ್ತದೆ; ಆದರೆ ಪಿ.ಎಫ್.ಐ. ನ ನಿಜವಾದ ಉದ್ದೇಶ ಜಿಹಾದಾದ ಮಾಧ್ಯಮದಿಂದ ಭಾರತದಲ್ಲಿ ಇಸ್ಲಾಮಿ ಚಳವಳಿ ನಿರ್ಮಾಣ ಮಾಡುವುದು, ಇದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. (ಭಾರತದಲ್ಲಿ ಯಾರೇ ‘ಹಿಂದೂ ರಾಷ್ಟ್ರ’ದ ಬಗ್ಗೆ ಮಾತನಾಡಿದರೆ ತಕ್ಷಣ ಕಾಂಗ್ರೆಸ್ಸಿಗರು, ಪ್ರಗತಿಪರರು, ಕಮ್ಯುನಿಸ್ಟರು ಮುಂತಾದ ಜನರು ಮುಸಲ್ಮಾನರಿಗೆ ಅಪಾಯ ಆಗುತ್ತಿದೆ ಎಂದು ಕೂಗಾಡುತ್ತಾರೆ. ಇಂತಹವರು ಈಗ ಪಿ.ಎಫ್.ಐ. ನ ಕೃತ್ಯದ ಬಗ್ಗೆ ಮೌನ ಏಕೆ ? – ಸಂಪಾದಕರು) ಪಿ.ಎಫ್.ಐ. ನ ಉದ್ದೇಶ ಸಾಧಿಸುವುದಕ್ಕಾಗಿ ಶಾಂತಿಯುತವಾಗಿ ಮತ್ತು ಅಹಿಂಸಾ ಮಾರ್ಗ ಅನುಸರಿಸುತ್ತದೆ ಎಂದು ದಾವೆ ಮಾಡಿತ್ತು; ಆದರೆ ತನಿಖೆಯಲ್ಲಿ, ಶಾರೀರಿಕ ಪ್ರಶಿಕ್ಷಣ ವರ್ಗದ ಹೆಸರಿನಲ್ಲಿ ಪಿ.ಎಫ್.ಐ. ಹೊಡೆಯುವುದು, ಒದೆಯುವುದು, ಚೂರಿಯ ಮೂಲಕ ದಾಳಿ ಮಾಡುವುದು, ಲಾಠಿ ಮೂಲಕ ದಾಳಿ ಮಾಡುವುದು ಇದರ ಜೊತೆಗೆ ಹಿಂಸಕ ಕೃತಿಗಳ ಅಭ್ಯಾಸ ಮಾಡುತ್ತಿದೆ ಎಂಬುದು ಕಂಡುಬಂದಿದೆ.
ಪಿ.ಎಫ್.ಐ. ನ ಒಂದು ಸ್ಥಳ ಕೂಡ ಅದರ ಹೆಸರಿನಲ್ಲಿಲ್ಲ !
ದೇಶದಲ್ಲಿ ಈಗ ಇರುವ ಪಿ.ಎಫ್.ಐ. ನ ಸ್ಥಳಗಳಲ್ಲಿ ಒಂದು ಸ್ಥಳ ಕೂಡ ಆ ಸಂಘಟನೆಯ ಹೆಸರಿನಲ್ಲಿ ನೋಂದಣಿ ಆಗಿಲ್ಲ. (ಪಿ.ಎಫ್.ಐ. ನ ಜಾಣತನ ತಿಳಿಯಿರಿ ! – ಸಂಪಾದಕರು) ಶಾರೀರಿಕ ಪ್ರಶಿಕ್ಷಣ ವರ್ಗದ ಜಾಗ ಕೂಡ ನಕಲಿ ಮಾಲೀಕರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ೨೦೧೩ ರಲ್ಲಿ ಕೇರಳದಲ್ಲಿನ ಕನ್ನೂರು ಜಿಲ್ಲೆಯಲ್ಲಿ ಶಾರೀರಿಕ ಪ್ರಶಿಕ್ಷಣ ವರ್ಗದಲ್ಲಿ ಸ್ಪೋಟಕ ಮತ್ತು ಹಿಂಸಕ ಶಸ್ತ್ರಾಸ್ತ ಪ್ರಶಿಕ್ಷಣ ನೀಡಲಾಗಿತ್ತು. ವಿವಿಧ ಧರ್ಮಗಳ ಜೊತೆಗೆ ವೈರತ್ವ ಬೆಳೆಸುವುದು ಮತ್ತು ಪಿ.ಎಫ್.ಐ. ಸದಸ್ಯರಿಗೆ ಭಯೋತ್ಪಾದಕ ಚಟುವಟಿಕೆಯಲ್ಲಿ ಪ್ರೇರೇಪಿಸುವುದು, ಇದು ಈ ಶಿಬಿರದ ಉದ್ದೇಶವಾಗಿತ್ತು.
ಸಂಪಾದಕೀಯ ನಿಲುವು
|