Sheikh Shahjahan CBI Custody : ಶೇಖ ಶಾಹಜಹಾನ ನನ್ನು ಸಿಬಿಐಗೆ ಒಪ್ಪಿಸಿದ ಪೊಲೀಸರು !

ಈ ಹಿಂದೆ ಪೊಲೀಸರು ನಿರಾಕರಿಸಿತ್ತು !

ಬಂಗಾಲ ಸರಕಾರದಿಂದ ಕೊಲಕಾತಾ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಕೋಲಕಾತಾ (ಬಂಗಾಲ) – ಬಂಗಾಲದ ಸಂದೇಶಖಾಲಿ ಇಲ್ಲಿಯ ಹಿಂದೂ ಮಹಿಳೆಯರ ಲೈಂಗಿಕ ಶೋಷಣೆ ಮತ್ತು ಈಡಿ ತಂಡದ ಮೇಲಿನ ಹಲ್ಲೆಯ ಪ್ರಕರಣದಲ್ಲಿ ಬಂಧಿಸಿರುವ ತೃಣಮೂಲ ಕಾಂಗ್ರೆಸ್ಸಿನ ಮುಖಂಡ ಶೇಖ ಶಾಹಜಹಾನ ಇವನನ್ನು ಕೊಲಕಾತಾ ಉಚ್ಚ ನ್ಯಾಯಾಲಯವು ಸಿಬಿಐಗೆ ಒಪ್ಪಿಸಲು ಆದೇಶ ನೀಡಿತ್ತು; ಆದರೆ ಬಂಗಾಲ ಪೊಲೀಸರು ಇದಕ್ಕೆ ನಿರಾಕರಿಸಿದ್ದರು. ಬಂಗಾಲ ಸರಕಾರವು ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ; ಆದರೆ ನ್ಯಾಯಾಲಯವು ಅದರ ಕುರಿತು ತ್ವರಿತ ವಿಚಾರಣೆ ನಡೆಸಲು ನಿರಾಕರಿಸಿದೆ. ‘ಎಲ್ಲಿಯವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದಿಲ್ಲ ಅಲ್ಲಿಯವರೆಗೆ ಆರೋಪಿಯನ್ನು ಸಿಬಿಐಗೆ ಒಪ್ಪಿಸಲು ಸಾಧ್ಯವಿಲ್ಲ. ಎಂದು ಬಂಗಾಲ ಪೊಲೀಸರು ಹೇಳಿದ್ದಾರೆ. ಉಚ್ಚ ನ್ಯಾಯಾಲಯವು ಮಾರ್ಚ್ ೫ ರಂದು ಮಧ್ಯಾಹ್ನ ೪ ವರೆಗೆ ಶೇಖ ಶಾಹಜಹಾನ ಇವನನ್ನು ಸಿಬಿಐಗೆ ಒಪ್ಪಿಸಿರಲಿಲ್ಲ, ಸಂಜೆ 6.30ರ ನಂತರ ಪೊಲೀಸರು ಶಾಹಜಹಾನ ನನ್ನು ಸಿಬಿಐಗೆ ಒಪ್ಪಿಸಿದ್ದಾರೆ.

ಸಂಪಾದಕೀಯ ನಿಲುವು

ಶಾಹಜಹಾನ ಶೇಖ ನನ್ನು ಸಿಬಿಐ ವಶಕ್ಕೆ ನೀಡಿದರೆ ತೃಣಮೂಲ ಕಾಂಗ್ರೆಸ್ಸಿನ ಎಲ್ಲಾ ಹಗರಣಗಳ ಮಾಹಿತಿ ಬೆಳಕಿಗೆ ಬರುವುದರಿಂದ ಬಂಗಾಲ ಸರಕಾರ ಅವನನ್ನು ಒಪ್ಪಿಸಲು ನಿರಾಕರಿಸುತ್ತಿದೆ. ಇದರಿಂದ ತೃಣಮೂಲ ಕಾಂಗ್ರೆಸ್ಸಿಗೆ ಪ್ರಜಾಪ್ರಭುತ್ವದ ಎಷ್ಟು ಚಿಂತೆ ಇದೆ, ಇದು ತಿಳಿಯುತ್ತದೆ !