ಮುಂಬಯಿ – ನೀರವ ಮೋದಿ, ವಿಜಯ ಮಲ್ಯ ಮತ್ತು ಮೆಹುಲ ಚೋಕ್ಸಿಯವರನ್ನು ತನಿಖಾ ದಳವು ಸೂಕ್ತ ಸಮಯದಲ್ಲಿ ಬಂಧಿಸಲಿಲ್ಲ. ಆದ್ದರಿಂದ ಅವರು ವಿದೇಶಕ್ಕೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಕಿವಿ ಹಿಂಡಿದೆ. ವಿದೇಶಕ್ಕೆ ಹೋಗಲು ನ್ಯಾಯಾಲಯದ ಅನುಮತಿ ಪಡೆಯುವುದರಿಂದ ವಿನಾಯತಿ ಪಡೆಯಲು ಚಾರ್ಟರ್ಡ ಅಕೌಂಟೆಂಟ ವ್ಯೋಮೇಶ ಶಾಹ ಇವರು ಮಾಡಿರುವ ಅರ್ಜಿಯ ವಿಚಾರಣೆಯ ಸಮಯದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು ಈ ಟಿಪ್ಪಣೆ ಮಾಡಿದರು.
1. ವಾಂದ್ರೆ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿನ ಒಂದು ಬ್ಯಾಂಕಿನಲ್ಲಿ 100 ಕೋಟಿ ರೂಪಾಯಿ ನಷ್ಟದ ಪ್ರಕರಣದಲ್ಲಿ ವ್ಯೋಮೇಶ್ ಶಾನನ್ನು 2023 ರಲ್ಲಿ ಬಂಧಿಸಲಾಗಿತ್ತು.
2. ವ್ಯೋಮೇಶ್ ಷಾ ಅವರು ಜಾಮೀನಿನ ಬಿಡುಗಡೆಯಾಗಿದ್ದು, ಜಾಮೀನು ನೀಡುವಾಗ ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ತೊರೆಯಬಾರದು ಎಂದು ಷರತ್ತು ವಿಧಿಸಲಾಗಿದೆ.
3. ಉದ್ಯೋಗದ ನಿಮಿತ್ತ ನಿರಂತರವಾಗಿ ವಿದೇಶಕ್ಕೆ ಹೋಗಬೇಕಾಗುತ್ತಿದ್ದರಿಂದ ಪ್ರತಿಬಾರಿಯೂ ನ್ಯಾಯಾಲಯದಿಂದ ಅನುಮತಿ ಪಡೆಯುವುದು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ವ್ಯೋಮೇಶ್ ಶಾ ‘ನ್ಯಾಯಾಲಯದ ಅನುಮತಿ ಪಡೆಯುವ ಷರತ್ತು ರದ್ದುಗೊಳಿಸಬೇಕು’, ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.
4. ನ್ಯಾಯಾಲಯವು ಈ ಬೇಡಿಕೆಯನ್ನು ತಿರಸ್ಕರಿಸಿತು. ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯವು ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರ ಉದಾಹರಣೆಗಳನ್ನು ಉಲ್ಲೇಖಿಸಿದೆ. ಭಾರತದಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆಸಿ ಈ ಮೂವರು ವಿದೇಶದಲ್ಲಿ ಪಲಾಯನ ಮಾಡಿದ್ದಾರೆ. ಅವರನ್ನು ಭಾರತಕ್ಕೆ ಕರೆತರುವಲ್ಲಿ ಇನ್ನೂ ಯಶಸ್ಸು ಸಿಕ್ಕಿಲ್ಲ ಎಂದು ಹೇಳಿದೆ.