ನಾನು ಶಿಬು ಸೋರೆನ್ ಅವರ ಮಗನಾದ ಕಾರಣ, ನನಗೆ ಬಂಧನದ ಚಿಂತೆಯಿಲ್ಲ ! – ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ ಸೊರೇನ

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ ಸೊರೇನ ಅವರ ಬಂಧನದ ಮೊದಲಿನ ಹೇಳಿಕೆ

ರಾಂಚಿ (ಜಾರ್ಖಂಡ್) – ಜನವರಿ 31 ರ ಸಾಯಂಕಾಲ ತಡವಾಗಿ ಜಾರ್ಖಂಡ ಮುಖ್ಯಮಂತ್ರಿ ಹೇಮಂತ ಸೊರೆನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ನಂತರ ಜಾರಿ ನಿರ್ದೇಶನಾಲಯ (‘ಇಡಿ’) ಅವರನ್ನು ಬಂಧಿಸಿತು. ಮುಖ್ಯಮಂತ್ರಿ ಹುದ್ದೆಯಲ್ಲಿರುವಾಗ ಬಂಧಿಸಲ್ಪಟ್ಟಿರುವ ಸೊರೆನ ಇವರು ಝಾರಖಂಡದ 3ನೇ, ಹಾಗೂ ಭಾರತದ 7ನೇ ಮುಖ್ಯಮಂತ್ರಿಯಾಗಿದ್ದಾರೆ. ಬಂಧನದ ಮೊದಲು ಸೊರೆನ ತಮ್ಮ ಒಂದು ವಿಡಿಯೋ ಪ್ರಸಾರ ಮಾಡಿದ್ದರು. ಅದರಲ್ಲಿ ಅವರು ಇ.ಡಿ. ಇಂದು ನನ್ನನ್ನು ಬಂಧಿಸಬಹುದು; ಆದರೆ ನನಗೆ ಚಿಂತೆಯಿಲ್ಲ, ನಾನು ಶಿಬೂ ಸೊರೆನ ಇವರ ಪುತ್ರನಾಗಿದ್ದೇನೆ.

ಅವರು ಮಾತನ್ನು ಮುಂದುವರಿಸಿ,

ಇಡೀ ದಿನದ ತನಿಖೆಯ ನಂತರ, ನನಗೆ ಸಂಬಂಧವಿಲ್ಲದ ವ್ಯಕ್ತಿಗಳಿಂದ ನನ್ನನ್ನು ಬಂಧಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಇ.ಡಿ. ಬಳಿ ಇದುವರೆಗೂ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ, ಎಂದು ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಇನ್ನೂ ಯಾವುದೇ ಖಚಿತವಾದ ಪುರಾವೆಗಳಿಲ್ಲ ಎಂದು ಅವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ‘ದೆಹಲಿಯಲ್ಲಿರುವ ನನ್ನ ನಿವಾಸದ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿ ನನ್ನ ಪ್ರತಿಷ್ಠಗೆ ಮಸಿಬಳಿಯಲು ಪ್ರಯತ್ನಿಸಿದ್ದಾರೆ. ಬಡ ಮತ್ತು ಆದಿವಾಸಿಗಳ ಮೇಲೆ ಅತ್ಯಾಚಾರ ಮಾಡುವವರ ವಿರುದ್ಧ ಈಗ ತಿರುಗಿ ನಿಲ್ಲಬೇಕಾಗಿದೆ’ ಎಂದು ಅವರು ಹೇಳಿದರು. ಈ ಶೋಷಣೆಯ ವಿರುದ್ಧ ನಮಗೆ ಹೊಸದಾಗಿ ಹೋರಾಟ ನಡೆಸಬೇಕಾಗುತ್ತದೆ.

ಭೂಮಿ ಹಗರಣ ಸಂಬಂಧಿತ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಬಂಧನ !

ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸೋರೆನ ಅವರನ್ನು ಬಂಧಿಸಲಾಗಿದೆ. ಕ್ರಿಮಿನಲ್ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಬಂಧಿಸಬೇಕಾದರೆ ವಿಧಾನಸಭಾಧ್ಯಕ್ಷರ ಅನುಮತಿ ಆವಶ್ಯಕವಿದೆ. ಈ ಪ್ರಕ್ರಿಯೆಯನ್ನು ತಪ್ಪಿಸಲು, ಇಡಿ ಮೊದಲು ಸೊರೆನ ಅವರನ್ನು ಕರೆಸಿತು ಮತ್ತು ನಂತರ ಅವರನ್ನು ರಾಜ್ಯಪಾಲರ ಬಳಿಗೆ ಕರೆದೊಯ್ದಿತು. ಸೋರೆನ ರಾಜೀನಾಮೆ ನೀಡಿದ ನಂತರ, ಅವರನ್ನು ಬಂಧಿಸಿದರು.

ಮುಖ್ಯಮಂತ್ರಿ ಸ್ಥಾನದಲ್ಲಿರುವಾಗ ಬಂಧಿಸಲ್ಪಟ್ಟವರ ಹೆಸರು ಈ ಕೆಳಗಿನಂತಿದೆ !

ಜೆ. ಜಯಲಲಿತಾ, ತಮಿಳುನಾಡು

ಲಾಲು ಪ್ರಸಾದ್ ಯಾದವ್, ಬಿಹಾರ

ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ

ಓಂ ಪ್ರಕಾಶ್ ಚೌತಾಲಾ, ಹರಿಯಾಣ

ಮಧು ಕೋಡಾ, ಜಾರ್ಖಂಡ್

ಶಿಬು ಸೊರೆನ್, ಜಾರ್ಖಂಡ್