|
ನವ ದೆಹಲಿ – ಇಡಿಯು ಮೇಲಿಂದ ಮೇಲೆ ಪ್ರಸ್ತುತಪಡಿಸುತ್ತಿರುವ ಹೆಚ್ಚುವರಿ ಆರೋಪ ಪತ್ರಗಳು ಇದು ತಪ್ಪಾದ ಪದ್ಧತಿ ಆಗಿದೆ, ಎಂದು ಸರ್ವೋಚ್ಚ ನ್ಯಾಯಾಲಯವು ಇಡಿಯನ್ನು ಉದ್ದೇಶಿಸಿ ಆದೇಶ ನೀಡಿದೆ. ‘ಯಾವುದಾದರೂ ಪ್ರಕರಣದಲ್ಲಿನ ಮೊಕದ್ದಮೆ ನಡೆಯಬಾರದು ಮತ್ತು ಆರೋಪಿಗಳಿಗೆ ಜಾಮೀನು ದೊರೆಯಬಾರದು’, ಅದಕ್ಕಾಗಿ ತನಿಖಾ ವ್ಯವಸ್ಥೆ ಹೀಗೆ ಮಾಡುತ್ತಿದ್ದದರೂ ಈ ಪದ್ಧತಿ ತಪ್ಪಾಗಿದೆ. ಹೀಗೆ ಮಾಡುವುದರಿಂದ ಆರೋಪಿಗೆ ಅನಿಶ್ಚಿತ ಅವಧಿಗಾಗಿ ಜೈಲಲ್ಲಿ ಇರಿಸಲು ಸಾಧ್ಯವಿಲ್ಲ. ಯಾವಾಗ ನೀವು ಆರೋಪಿಯನ್ನು ಬಂಧಿಸುತ್ತೀರೋ ಆಗ ಮೊಕದ್ದಮೆ ನಡೆಸುವುದು ಅವಶ್ಯಕವಾಗಿರುತ್ತದೆ, ಎಂದು ನ್ಯಾಯಾಲಯ ನಮೂದಿಸಿದೆ. ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತ ಇವರ ವಿಭಾಗೀಯಪೀಠವು ಜಾರ್ಖಂಡದಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಪ್ರೇಮ ಪ್ರಕಾಶ ಇವರು ದಾಖಲಿಸಿರುವ ಜಾಮೀನ ಅರ್ಜಿಯ ಬಗ್ಗೆ ಈ ಟಿಪ್ಪಣಿ ಮಾಡಿದೆ.
(ಸೌಜನ್ಯ – ET NOW)
೧. ಪ್ರೇಮ ಪ್ರಕಾಶ್ ಇವರು ೧೮ ತಿಂಗಳಿಂದ ಜೈಲಿನಲ್ಲಿ ಇದ್ದಾರೆ ಎಂದು ಕೂಡ ನ್ಯಾಯಾಲಯ ಹೇಳಿದೆ.
೨. ಈ ಸಮಯದಲ್ಲಿ ನ್ಯಾಯಾಲಯವು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ಜೈಲು ಶಿಕ್ಷೆಯ ಸಂದರ್ಭ ನೀಡಿದರು. ಅದರಲ್ಲಿ ಕೂಡ ಇಡಿಯು ಫೆಬ್ರವರಿ ೨೦೨೩ ರಲ್ಲಿ ಮದ್ಯ ಹಗರಣದ ಪ್ರಕರಣದಲ್ಲಿ ಬಂಧಿಸಿದೆ.
೩. ಜಾರ್ಖಂಡ್ ಗಣಿಗಾರಿಕೆಯ ಮೊಕದ್ದಮೆಯಲ್ಲಿ ಇಡಿಯ ವತಿಯಿಂದ ನ್ಯಾಯವಾದಿ ಎಸ್.ವಿ. ರಾಜು ಉಪಸ್ಥಿತರಿದ್ದರು. ನ್ಯಾಯಮೂರ್ತಿ ಖನ್ನಾ ಇವರು ಅವರಿಗೆ, ತನಿಖೆ ಪೂರ್ಣ ಆಗುವವರೆಗೆ ಯಾರಿಗೂ ಬಂದಿಸಲಾಗದು, ಇದನ್ನು ದೃಢಪಡಿಸುವುದೆ ಈ ಜಾಮೀನಿನ ಉದ್ದೇಶವಾಗಿದೆ. ಇಲ್ಲವಾದರೆ ನೀವು ೯೦ ದಿನಗಳಲ್ಲಿ ಈಗ ಆರೋಪ ಪತ್ರ ದಾಖಲಿಸಬೇಕು ಎಂದು ಹೇಳಿದರು.
೪. ಇದರ ಬಗ್ಗೆ ರಾಜು ಇವರು, ಆರೋಪಿಗೆ ಬಿಡುಗಡೆಯಾದರೆ ಸಾಕ್ಷಿ ಅಥವಾ ಸಾಕ್ಷಿದಾರರಿಗೆ ಕಿರುಕುಳ ನೀಡಬಹುದು ಎಂದು ಹೇಳಿದರು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸುತ್ತಾ, ಆರೋಪಿ ಹೀಗೆನಾದರೂ ಮಾಡುತ್ತಿದ್ದರೆ ಆಗ ನೀವು ನಮ್ಮ ಬಳಿ ಬನ್ನಿ; ಆದರೆ ಓರ್ವ ಆರೋಪಿಯನ್ನು ೧೮ ತಿಂಗಳಿಂದ ಜೈಲಲ್ಲಿ ಇಡುವುದು ಯೋಗ್ಯವಲ್ಲ ಎಂದು ಹೇಳಿದರು.