ಉಚ್ಚ ಲೋಕಗಳಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿರುವ ದೈವಿ (ಸಾತ್ತ್ವಿಕ) ಮಕ್ಕಳು ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಚಿ. ಪಾರ್ಥ ಕುಡಕುಂಟಿ ಅವರಲ್ಲಿ ಒಬ್ಬನು !

೧. ಜನಿಸಿದಾಗಿನಿಂದ ೧ ವರ್ಷ
೧ ಅ. ದೇವರ ಬಗ್ಗೆ ಸೆಳೆತ : ‘ನಾವು ಸಂಚಾರವಾಣಿಯಲ್ಲಿ ಶ್ರೀರಾಮನ ಹಾಡುಗಳನ್ನು ಹಾಕಿದಾಗ ಪಾರ್ಥನು ಮಲಗುತ್ತಿದ್ದನು. ಅವನು ಯಾವಾಗಲೂ ಮುದ್ರೆ ಮಾಡಿ ಮಲಗುತ್ತಿದ್ದನು. ಅವನನ್ನು ಕಂಕುಳದಲ್ಲಿ ಎತ್ತಿಕೊಂಡು ದೇವರ ಹಾಡುಗಳನ್ನು ಮತ್ತು ಶ್ಲೋಕಗಳನ್ನು ಹೇಳಿದಾಗ ಅವನು ತುಂಬಾ ಆನಂದದಿಂದ ಕೇಳುತ್ತಿದ್ದನು. ಪಾರ್ಥನು ಶ್ರೀಕೃಷ್ಣನ ಚಿತ್ರವನ್ನು ನೋಡಿ ನಗುತ್ತಿದ್ದನು.
೧ ಆ. ಪರಾತ್ಪರ ಗುರು ಡಾ. ಆಠವಲೆಯವರ ಬಗೆಗಿನ ಭಾವ : ಅವನು ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಛಾಯಾಚಿತ್ರವನ್ನು ನೋಡುತ್ತ ನಗುತ್ತಿದ್ದನು ಮತ್ತು ಆ ಛಾಯಾಚಿತ್ರವನ್ನು ಕೈಯಲ್ಲಿ ಹಿಡಿಯುತ್ತಿದ್ದನು. ಅವನು ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ಮನೆಯಲ್ಲಿ ಇಟ್ಟಿದ ಸ್ಥಳದಲ್ಲಿ ತೆವಳುತ್ತ ಹೋಗುತ್ತಿದ್ದನು ಮತ್ತು ಆ ಛಾಯಾಚಿತ್ರವನ್ನು ಏಕಾಗ್ರತೆಯಿಂದ ನೋಡುತ್ತಿದ್ದನು.

೨. ೧ ರಿಂದ ೩ ವರ್ಷ
೨ ಅ. ಮೋಹಕ : ಪಾರ್ಥನನ್ನು ನೋಡಿದಾಗ ಪ್ರತಿಯೊಬ್ಬರೂ ಅವನೊಂದಿಗೆ ತುಂಬಾ ಪ್ರೀತಿಯಿಂದ ಮಾತನಾಡುತ್ತಾರೆ. ನಮ್ಮ ಸಂಬಂಧಿಕರು ಅಥವಾ ಪರಿಚಿತ ವ್ಯಕ್ತಿಗಳು ನಮಗೆ ಕರೆ ಮಾಡಿದರೆ ಅವರು ನಮಗೆ ‘ಪಾರ್ಥನಿಗೆ ಸಂಚಾರವಾಣಿ ಕೊಡಿ’ ಎಂದು ಹೇಳುತ್ತಾರೆ ಮತ್ತು ಮೊದಲು ಅವನೊಂದಿಗೆ ಮಾತನಾಡುತ್ತಾರೆ.
೨ ಆ. ಪಾರ್ಥನು ಎಲ್ಲರೊಂದಿಗೆ ತುಂಬಾ ಪ್ರೀತಿಯಿಂದ ಮಾತನಾಡುತ್ತಾನೆ.
೨ ಇ. ದೇವರ ಬಗ್ಗೆ ಆಸಕ್ತಿ
೧. ಅವನು ಪ್ರತಿಯೊಂದು ಕೃತಿಯನ್ನು (ಸ್ನಾನ ಮತ್ತು ಊಟ ಇತ್ಯಾದಿ) ಮಾಡುವ ಮೊದಲು ಶ್ಲೋಕವನ್ನು ಹೇಳುತ್ತಾನೆ.
೨. ಅವನಿಗೆ ಮಾರುತಿಯ ಮೇಲೆ ಅಪಾರ ಭಕ್ತಿಯಿದೆ. ಅವನು ಹನುಮಾನಚಾಲೀಸಾ ಅನ್ನು ತಪ್ಪಿಲ್ಲದೇ ಹೇಳುತ್ತಾನೆ.
೩. ಅವನ ಆರೋಗ್ಯ ಸರಿಯಿಲ್ಲದಿದ್ದಾಗ ಅವನು ನಮಗೆ ಸಂಚಾರವಾಣಿಯಲ್ಲಿ ‘ಶ್ರೀರಾಮರಕ್ಷಾಸ್ತೋತ್ರ’ವನ್ನು ಹಚ್ಚಲು ಹೇಳುತ್ತಾನೆ ಮತ್ತು ಅದನ್ನು ಕೇಳುತ್ತ ಮಲಗುತ್ತಾನೆ. ನಂತರ ಅವನು ‘ನನಗೆ ಈಗ ಆರಾಮವೆನಿಸುತ್ತಿದೆ’, ಎಂದು ಹೇಳುತ್ತಾನೆ.
೨ ಈ. ನಾವು ಸಂಚಾರವಾಣಿಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಹಾಕಿದರೆ ಅವನು ಆನಂದದಿಂದ ಕೇಳುತ್ತಾನೆ.
೨ ಉ. ಪಾರ್ಥನು ಮಾತನಾಡುವಾಗ ಅವನ ಮಾತಿನಲ್ಲಿ ಚೈತನ್ಯವೆನಿಸುತ್ತದೆ. ಪಾರ್ಥನ ಮಾತುಗಳನ್ನು ಕೇಳುವಾಗ ಇತರರಿಗೆ ಆನಂದವಾಗುತ್ತದೆ. ಎಲ್ಲರಿಗೂ ‘ಅವನ ಮಾತುಗಳನ್ನು ಕೇಳುತ್ತಲೇ ಇರಬೇಕು’, ಎಂದೆನಿಸುತ್ತದೆ.
೨ ಊ. ‘ಪಾರ್ಥನು ಜನಿಸಿದಾಗಿನಿಂದ ಮನೆಯಲ್ಲಿ ತುಂಬಾ ಶಾಂತಿ ಮತ್ತು ಸಮಾಧಾನವೆನಿಸುತ್ತಿದೆ’, ಎಂದು ಅವನ ಅಜ್ಜನವರು ಹೇಳುತ್ತಾರೆ.
– ಸೌ. ಶೈಲಜಾ ಪಾಟೀಲ (ಚಿ. ಪಾರ್ಥನ ಅಜ್ಜಿ (ತಾಯಿಯ ತಾಯಿ), ಬಾಗಲಕೋಟೆ. (೮.೭.೨೦೨೪)