ಶೇ. ೫೩ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಬೆಂಗಳೂರಿನ ಚಿ. ಅಭಯರಾಮ ಮುಸಲಿಕಂಠಿ (ವಯಸ್ಸು ೬ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)ವನ್ನು ನಡೆಸುವ ಪೀಳಿಗೆ ! ಚಿ. ಅಭಯರಾಮ ಮುಸಲಿಕಂಠಿ ಈ ಪೀಳಿಗೆಯಲ್ಲಿ ಒಬ್ಬ !
ಚಿ. ಅಭಯರಾಮ

ಹುಟ್ಟಿದಾಗಿನಿಂದ ೧ ವರ್ಷದ ವರೆಗೆ ‘ನಾನು ನಾಮಜಪವನ್ನು ಮಾಡುತ್ತಿರು ವಾಗ ಚಿ. ಅಭಯರಾಮನು ಸ್ಪಂದಿಸು ತ್ತಿದ್ದನು, ಹಾಗೆಯೇ ನಾಮಜಪ ಮಾಡಿದ ನಂತರ ಅವನು ಚಪ್ಪಾಳೆ ತಟ್ಟುತ್ತಿದ್ದನು.

೧ ರಿಂದ ೨ ವರ್ಷ

೧. ಸಹನಶೀಲತೆ : ರಜೆಯಲ್ಲಿ ನಾವು ಕಂಚಿಗೆ ಹೋಗಿದ್ದೆವು. ಆಗ ಅಲ್ಲಿ ತುಂಬಾ ಜನಸಂದಣಿ ಇರುವುದರಿಂದ ನಮಗೆ ಎರಡೂವರೆ ಗಂಟೆಗಳ ವರೆಗೆ ನಿಲ್ಲಬೇಕಾಯಿತು. ಆದರೂ ಅವನು ಯಾವ ತೊಂದರೆಯನ್ನೂ ಕೊಡಲಿಲ್ಲ. ಅವನು ಶಾಂತವಾಗಿದ್ದು ಶ್ಲೋಕವನ್ನು ಹೇಳುತ್ತಿದ್ದನು.

೨. ದೇವರ ಬಗೆಗಿನ ಆಸಕ್ತಿ : ಒಮ್ಮೆ ನಾವು ಅವನ ಅಜ್ಜನವರ ಬಳಿ ಹೋಗಿ ದ್ದಾಗ ಅವನು ಅಜ್ಜನªರು ಮನೆಯಲ್ಲಿ ಪೂಜೆ ಮಾಡುವುದನ್ನು ನೋಡಿದನು. ಅನಂತರ ಅವನು ಸಹ ಅದೇ ರೀತಿ ಪೂಜೆ ಮಾಡುತ್ತಿದ್ದನು.

೩. ಧರ್ಮಾಚರಣೆಯ ಆಸಕ್ತಿ : ಅಭಯರಾಮನಿಗೆ ಯಾವಾಗಲೂ ತಿಲಕವನ್ನು ಹಚ್ಚಿಕೊಳ್ಳಲು ಇಷ್ಟವಾಗುತ್ತದೆ. ಅವನ ಸ್ಮರಣಶಕ್ತಿ ಚೆನ್ನಾಗಿದೆ. ನಾನು ಹೇಳುತ್ತಿರುವ ಕೆಲವು ಶ್ಲೋಕಗಳನ್ನು ಅವನು ಕಲಿತುಕೊಂಡನು. ಅವನು ಪ್ರತಿದಿನ ೧೦ ಶ್ಲೋಕಗಳನ್ನು ತಪ್ಪದೇ ಹೇಳುತ್ತಾನೆ.

೪. ಅವನು ಪ್ರತಿದಿನ ರಾತ್ರಿ ಮಲಗುವ ಮುನ್ನ ಕ್ಷಮೆ ಯಾಚನೆ ಮಾಡಿ ಮಲಗುತ್ತಾನೆ.

೫. ಪ್ರಾರ್ಥನೆ ಮಾಡಿದ ನಂತರ ಅರ್ಚಕರು ತೆಂಗಿನಕಾಯಿಯನ್ನು ಪ್ರಸಾದವೆಂದು ಕೊಡುವುದು : ನಾನು ಅಭಯರಾಮನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದ ನಂತರ ಅನೇಕ ಬಾರಿ ಅರ್ಚಕರು ಅವನಿಗೆ ಪ್ರಸಾದವನ್ನು ಕೊಡುತ್ತಾರೆ. ಒಮ್ಮೆ ಕಾಮಾಕ್ಷಿ ದೇವಸ್ಥಾನಕ್ಕೆ ಹೋಗುವಾಗ ನಾನು ಅವನಿಗಾಗಿ ಊಟವನ್ನು ತೆಗೆದುಕೊಂಡು ಹೋಗಿರಲಿಲ್ಲ. ಆಗ ನಾನು ಕಾಮಾಕ್ಷಿ ದೇವಿಗೆ, ‘ನನ್ನ ಮಗುವಿಗೆ ನೀನೇ ಊಟವನ್ನು ನೀಡು’ ಎಂದು ಪ್ರಾರ್ಥನೆ ಮಾಡಿದೆನು. ಸ್ವಲ್ಪ ಸಮಯದ ನಂತರ ಅಲ್ಲಿನ ಓರ್ವ ಅರ್ಚಕರು ಒಡೆದ ತೆಂಗಿನಕಾಯಿಯ ಬಟ್ಟಲನ್ನು ಪ್ರಸಾದವೆಂದು ಅಭಯರಾಮನ ಕೈಗೆ ಕೊಟ್ಟರು.

– ಸೌ. ಭಾರ್ಗವಿ ಮುಸಲಿಕಂಠಿ, ಬೆಂಗಳೂರು (ಚಿ. ಅಭಯರಾಮನ ತಾಯಿ) (೧.೬.೨೦೨೪)