ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬೆಂಗಳೂರಿನ ಕು. ನಾರಾಯಣಿ ಪೈ (ವಯಸ್ಸು ೩ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ನಾರಾಯಣಿ ಪೈ ಈ ಪೀಳಿಗೆಯಲ್ಲಿ ಒಬ್ಬಳು !

ಕು. ನಾರಾಯಣಿ ಪೈ

೧. ಸ್ವಾವಲಂಬಿ

’ಕು. ನಾರಾಯಣಿಯು ತನ್ನ ಎಲ್ಲ ಕೆಲಸಗಳನ್ನು ತಾನೇ ಮಾಡಲು ಪ್ರಯತ್ನಿಸುತ್ತಾಳೆ.

೨. ಕಲಿಯುವ ವೃತ್ತಿ

ಅವಳು ಹೊಸ ವಿಷಯವನ್ನು ತುಂಬಾ ಉತ್ಸಾಹದಿಂದ ಕಲಿಯುತ್ತಾಳೆ ಮತ್ತು ಅವಳು ಇತರರ ಗುಣಗಳನ್ನು ತನ್ನಲ್ಲಿ ತರಲು ಪ್ರಯತ್ನಿಸುತ್ತಾಳೆ.

೩. ಕು. ನಾರಾಯಣಿಯು ತನಗೆ ಬೇಕಾಗಿರುವ ವಸ್ತುಗಳನ್ನು ಕೇಳಿ ತೆಗೆದುಕೊಳ್ಳುತ್ತಾಳೆ.

೪. ಸಾತ್ತ್ವಿಕತೆಯ ಆಸಕ್ತಿ

ಕು. ನಾರಾಯಣಿಯು ದಿನವಿಡಿ ಚೈತನ್ಯವಾಹಿನಿಯಲ್ಲಿನ ನಾಮಜಪ ಮತ್ತು ಸ್ತೋತ್ರಗಳನ್ನು ಕೇಳುತ್ತಾಳೆ. ಅವಳಿಗೆ ದೇವಸ್ಥಾನದಲ್ಲಿ ಹೋಗಲು ತುಂಬಾ ಇಷ್ಟವಾಗುತ್ತದೆ. ಅವಳಿಗೆ ಕುಂಕುಮ ಹಚ್ಚಲು ಮತ್ತು ಪ್ರಸಾದವನ್ನು ತಿನ್ನಲು ಇಷ್ಟವಾಗುತ್ತದೆ.

೫. ಪ್ರೇಮಭಾವ

ಅವಳು ಅಜ್ಜಿ-ಅಜ್ಜನವರ ಕಾಲುಗಳಿಗೆ ಎಣ್ಣೆ ಹಚ್ಚುವುದು ಮತ್ತು ಔಷಧಿಯನ್ನು ಕೊಡುವುದು, ತನ್ನ ಆಟಿಕೆಗಳನ್ನು ಇತರರಿಗೆ ಕೊಡುವುದು ಮುಂತಾದವುಗಳನ್ನು ಮಾಡುತ್ತಾಳೆ. ಅವಳು ತನಗೆ ಇಷ್ಟವಾಗುವ ಸಿಹಿ ಪದಾರ್ಥಗಳನ್ನು ಇತರರಿಗೆ ಕೊಡುತ್ತಾಳೆ.

ಸೌ. ಪ್ರತೀಕ್ಷಾ ಪೈ

೬. ಕರುಣೆ

ಮನೆಯ ಮುಂದೆ ಆಕಳು-ಕರುಗಳು ಬಂದರೆ, ಅವಳು ಅವುಗಳಿಗೆ ಹಣ್ಣುಗಳನ್ನು ಹುಡುಕಿ ತಿನ್ನಲು ಕೊಡುತ್ತಾಳೆ, ಹಾಗೆಯೇ ಅವಳು ಅಜ್ಜನವರ ಬಳಿ ’ಆಕಳಿಗೆ ತಿನ್ನಲು ಕೊಡಿ’, ಎಂದು ಹೇಳುತ್ತಾಳೆ.

೭. ದೇವರ ಬಗೆಗಿನ ಭಾವ

ನಾರಾಯಣಿಗೆ ದೇವಸ್ಥಾನಕ್ಕೆ ಹೋಗಲು ಇಷ್ಟವಾಗುತ್ತದೆ. ಅವಳು ಪ್ರತಿದಿನ ಮಲಗುವ ಮುನ್ನ ಸಂಚಾರವಾಣಿಯಲ್ಲಿ ನಾಮಜಪ ಹಾಕಲು ಹೇಳುತ್ತಾಳೆ. ಆ ಸಮಯದಲ್ಲಿ ಅವಳು ನಮಗೆ, ”ನಾಮಜಪದಿಂದ ಅನಿಷ್ಟ ಶಕ್ತಿ ಬರುವುದಿಲ್ಲ” ಎಂದು ಹೇಳುತ್ತಾಳೆ. ಅವಳು ಶ್ರೀರಾಮನಲ್ಲಿ ’ಬಾಣವನ್ನು ಬಿಟ್ಟು ಅನಿಷ್ಟ ಶಕ್ತಿಯನ್ನು ನಾಶ ಮಾಡಿ’ ಎಂದು ಪ್ರಾರ್ಥಿಸುತ್ತಾಳೆ. ನಾರಾಯಣಿಯು ತನ್ನ ಮೂರನೇ ಹುಟ್ಟುಹಬ್ಬದಂದು ಶ್ರೀರಾಮ, ಸೀತಾಮಾತಾ, ಲಕ್ಷ್ಮಣ, ಹನುಮಂತ, ಶ್ರೀಕೃಷ್ಣ, ಪರಮ ಪೂಜ್ಯ ಗುರುದೇವ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಇವರನ್ನೆಲ್ಲ ಹುಟ್ಟುಹಬ್ಬಕ್ಕೆ ಬರಲು ಪ್ರಾರ್ಥಿಸಿದಳು.

೮. ಗುರುಗಳ ಬಗೆಗಿನ ಭಾವ

ಅವಳು ’ನಾನು ಪರಮ ಪೂಜ್ಯ ಡಾಕ್ಟರರಂತೆ ಡಾಕ್ಟರ ಆಗುವೆನು’, ಎಂದು ಹೇಳುತ್ತಾಳೆ. ನಾರಾಯಣಿಯು ೧ ವರ್ಷ ೭ ತಿಂಗಳದವಳಾಗಿದ್ದಾಗ ನಮಗೆ ಪ.ಪೂ. ಗುರುದೇವರ ಜನ್ಮೋತ್ಸವಕ್ಕೆ (ಬ್ರಹ್ಮೋತ್ಸವಕ್ಕೆ) ಹೋಗಲು ಅವಕಾಶ ಸಿಕ್ಕಿತು. ಆಗ ಅವಳಿಗೆ ಉಷ್ಣತೆಯಿಂದ ತುಂಬಾ ತೊಂದರೆ ಆಗುತ್ತಿತ್ತು, ಆದರೂ ಸಹ ಅವಳು ಪರಮ ಪೂಜ್ಯ ಗುರುದೇವರಿಗೆ ನಮಸ್ಕಾರ ಮಾಡಿದ ನಂತರವೇ ಮಲಗಿದಳು.’

– ಸೌ. ಪ್ರತೀಕ್ಷಾ ಸಂತೋಷ ಪೈ (ನಾರಾಯಣಿಯ ತಾಯಿ), ಬೆಂಗಳೂರು. (೨೦.೫.೨೦೨೪)

(ಕು. ನಾರಾಯಣಿಯ ಗುಣ ವೈಶಿಷ್ಟ್ಯಗಳ ಅನುವಾದ ಮಾಡುವಾಗ ನನಗೆ ತುಂಬಾ ಭಾವಜಾಗೃತವಾಗುತ್ತಿತ್ತು. – ಸೌ. ಸುಜಾತಾ ಅಶೋಕ ರೇಣಕೆ, ರಾಮನಾಥಿ ಆಶ್ರಮ, ಗೋವಾ.)