ಶ್ರೀಕೃಷ್ಣನ ಅನುಸಂಧಾನದಲ್ಲಿರುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಚಿಕ್ಕಬಳ್ಳಾಪುರದ ಕು. ಧೃತಿ ಎಚ್.ಪಿ. (ವಯಸ್ಸು ೧೩ ವರ್ಷ) !


ಕು. ಧೃತಿ ಎಚ್.ಪಿ. ಇವಳ ಬಗ್ಗೆ ಅವಳ ತಾಯಿಗೆ ಅರಿವಾದ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.
ಧೃತಿಯ ಶಬ್ದದ ಅರ್ಥ : ದೃಢತೆ ಮತ್ತು ಲಕ್ಷ್ಮಿಯ ಒಂದು ಹೆಸರು
೧. ‘ಕು. ಧೃತಿಯು ಸತತವಾಗಿ ಆನಂದ ಮತ್ತು ಉತ್ಸಾಹದಿಂದಿರುತ್ತಾಳೆ.
೨. ಸೇವೆಯ ಆಸಕ್ತಿ
ಧೃತಿಯ ಪರೀಕ್ಷೆಯ ಮರುದಿನ ಮಹಾಶಿವರಾತ್ರಿ ಇತ್ತು. ಅವಳು ಅಧ್ಯಯನದ ಆಯೋಜನೆ ಮಾಡಿ ಗ್ರಂಥಪ್ರದರ್ಶನದ ಕಕ್ಷೆಯಲ್ಲಿ ಸೇವೆ ಮಾಡಿದಳು. ಅವಳಿಗೆ ಹಸ್ತಕಲೆಯಲ್ಲಿ ಆಸಕ್ತಿಯಿದೆ. ಅದರ ಉಪಯೋಗವನ್ನು ಅವಳು ಸೇವೆಗಾಗಿ ಮಾಡುತ್ತಾಳೆ. ಒಮ್ಮೆ ಮಂದಿರ ಅಧಿವೇಶನದಲ್ಲಿ ಅವಳು ಉಪಾಯಕ್ಕಾಗಿ ಪೆಟ್ಟಿಗೆಗಳನ್ನು ಉತ್ಕೃಷ್ಟ ರೀತಿಯಲ್ಲಿ ತಯಾರಿಸಿದ್ದಳು.
೩. ಸೂಕ್ಷ್ಮದಲ್ಲಿ ತಿಳಿದುಕೊಳ್ಳುವ ಕ್ಷಮತೆ
ಒಮ್ಮೆ ನಾನು ಸನಾತನದ ೬೯ ನೇ (ಸಮಷ್ಟಿ) ಸಂತರಾದ ಪೂ. (ಸೌ.) ಅಶ್ವಿನಿ ಪವಾರ ಇವರ ಸಂದರ್ಶನದ ಹಿಂದಿ ಭಾಷೆಯ ವಿಡಿಯೋ ನೋಡುತ್ತಿದ್ದೆನು. ಆಗ ಧೃತಿಯು ಇನ್ನೊಂದು ಕೋಣೆಯಿಂದ ಬಂದಳು ಮತ್ತು ನನಗೆ, ”ಇವರು ಸಂತರಿದ್ದಾರಲ್ಲ ? ಸಂತರೇ ಹೀಗೆ ಮಾತನಾಡಲು ಸಾಧ್ಯ” ಎಂದು ಹೇಳಿದಳು. ಅವಳಿಗೆ ಹಿಂದಿ ಬರುವುದಿಲ್ಲ, ಆದರೂ ಅವಳು ಸಂತರನ್ನು ಗುರುತಿಸಿದಳು.
೪. ಶ್ರೀಕೃಷ್ಣನ ಅನುಸಂಧಾನದಲ್ಲಿರುವುದು
೪ ಅ. ಶ್ರೀಕೃಷ್ಣನು ಕನಸಿನಲ್ಲಿ ಬಂದು ‘ಕಪ್ಪು ಬಟ್ಟೆಗಳನ್ನು ಧರಿಸಿದರೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತದೆ’, ಎಂದು ಹೇಳುವುದು : ಕು. ಧೃತಿ ಚಿಕ್ಕವಳಿದ್ದಾಗ ನಾವು ಅವಳಿಗಾಗಿ ಬಟ್ಟೆಗಳನ್ನು ಖರೀದಿಸಲು ಹೋಗಿದ್ದೆವು. ಅಂಗಡಿಯವನು ನಮಗೆ ಕಪ್ಪು ಬಣ್ಣದ ಬಟ್ಟೆಗಳನ್ನು ತೋರಿಸಿದ್ದನು. ಆಗ ‘ಕು. ಧೃತಿಗೆ ಹೇಗೆ ತಿಳಿಸಿ ಹೇಳುವುದು ?’, ಎಂದೆನಿಸಿತು. ಮರುದಿನ ಬೆಳಗ್ಗೆ ಅವಳು ನಮಗೆ, ”ಕೃಷ್ಣನು ನನ್ನ ಕನಸಿನಲ್ಲಿ ಬಂದಿದ್ದನು. ಅವನು ನನಗೆ ‘ಕಪ್ಪು ಬಣ್ಣದ ಬಟ್ಟೆಗಳನ್ನು ತೊಡುವುದರಿಂದ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತದೆ’, ಎಂದು ಹೇಳಿದನು” ಎಂದು ನಮಗೆ ಹೇಳಿದಳು. ಹಾಗೆಯೇ ಅವಳಿಗೆ ಏನಾದರೂ ಸಂದೇಹವಿದ್ದರೆ ಅವಳು ಶ್ರೀಕೃಷ್ಣನಿಗೆ ಕೇಳುತ್ತಾಳೆ ಮತ್ತು ಅವಳಿಗೆ ಉತ್ತರ ಸಿಗುತ್ತದೆ.
೪ ಆ. ಆಪತ್ಕಾಲದ ದೃಷ್ಟಿಯಲ್ಲಿ ಮನೆಯ ಬಗ್ಗೆ ಶ್ರೀಕೃಷ್ಣನು ಹೇಳುವುದು : ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡ ಇವರು ಸಾಧಕರಿಗೆ ಆಪತ್ಕಾಲದ ದೃಷ್ಟಿಯಲ್ಲಿ ಮನೆಯನ್ನು ಕಟ್ಟುವ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಕೆಲವು ದಿನಗಳ ನಂತರ ಧೃತಿಯು ನಮಗೆ ‘ಯೋಗ್ಯ ಸ್ಥಳದಲ್ಲಿ ಮನೆಯನ್ನು ಹೇಗೆ ಕಟ್ಟಬೇಕು ? ಮತ್ತು ಅಯೋಗ್ಯ ಸ್ಥಳದಲ್ಲಿ ಮನೆಯನ್ನು ಕಟ್ಟಿದರೆ, ಹೇಗೆ ತೊಂದರೆಯಾಗುವುದು ?’, ಎಂಬುದರ ಬಗ್ಗೆ ಹೇಳಿದಳು. ಆಗ ಅವಳು ನನಗೆ ಮನೆಯ ಬಗ್ಗೆ ‘ಶ್ರೀಕೃಷ್ಣನು ಹೇಳಿದನು’, ಎಂದು ನನಗೆ ಹೇಳಿದಳು.’
– ಸೌ. ರಚನಾ ಎಚ್.ಪಿ. (ಕು. ಧೃತಿಯ ತಾಯಿ), ಚಿಕ್ಕಬಳ್ಳಾಪುರ. (೨೨.೫.೨೦೨೪)
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |