ಉಚ್ಚ ಲೋಕಗಳಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿರುವ ದೈವಿ (ಸಾತ್ತ್ವಿಕ) ಮಕ್ಕಳು ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಚಿ. ಸಚ್ಚಿದಾನಂದ ಉದಯಕುಮಾರ ಅವರಲ್ಲಿ ಒಬ್ಬನು !

ಚಿ. ಸಚ್ಚಿದಾನಂದ ಉದಯಕುಮಾರನ ಬಗ್ಗೆ ಆತನ ತಾಯಿಗೆ ಅರಿವಾದ ಗುಣವೈಶಿಷ್ಟ್ಯ ಗಳನ್ನು ಇಲ್ಲಿ ಕೊಡುತ್ತಿದ್ದೇವೆ

೧. ಜನಿಸುವ ಮೊದಲು
‘ನಾನು ಗರ್ಭಿಣಿಯಿದ್ದಾಗ ಧಾರ್ಮಿಕ ಗ್ರಂಥಗಳನ್ನು ಓದುತ್ತಿದ್ದೆನು. ನಾನು ನಿಯಮಿತವಾಗಿ ಶ್ಲೋಕ ಮತ್ತು ಶ್ರೀರಾಮರಕ್ಷಾ ಸ್ತೋತ್ರವನ್ನು ಹೇಳುತ್ತಿದ್ದೆನು.
೨. ಜನಿಸಿದ ನಂತರ
೨ ಅ. ಜನ್ಮದಿಂದ ೧ ವರ್ಷ
೨ ಅ ೧. ನಾವು ಸಂಚಾರವಾಣಿಯಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣನ ಜೋಗುಳಗೀತೆಯನ್ನು ಹಾಕಿದಾಗ ಚಿ. ಸಚ್ಚಿದಾನಂದನು ಅದನ್ನು ಕೇಳುತ್ತ ಮಲಗುತ್ತಿದ್ದನು.
೨ ಅ ೨. ಮಲಗುವಾಗ ಕೈಗಳ ಮುದ್ರೆ ಮಾಡುವುದು : ‘ಸಚ್ಚಿದಾನಂದನಿಗೆ ಹಸಿವಾಗಬೇಕು ಮತ್ತು ಅವನ ತೂಕ ಹೆಚ್ಚಾಗಬೇಕು’, ಎಂದು ಸದ್ಗುರು ಡಾ. ಮುಕುಲ ಗಾಡಗೀಳ ಇವರು ಅವನಿಗಾಗಿ ನಮಗೆ ನಾಮಜಪಾದಿ ಉಪಾಯಗಳನ್ನು ಮಾಡಲು ಹೇಳಿದ್ದರು. ಅವರು ನಮಗೆ ನಮ್ಮ ಒಂದು ಅಂಗೈಯನ್ನು ಸಚ್ಚಿದಾನಂದನ ಕಿವಿಯ ಹತ್ತಿರ ಮತ್ತು ಇನ್ನೊಂದು ಕೈಯನ್ನು ಅವನ ಅನಾಹತಚಕ್ರದ ಮೇಲೆ ಹಿಡಿಯುವುದು ಮತ್ತು ಅದೇ ರೀತಿ ಅವನ ಬಾಯಿಯ ಎದುರಿಗೆ ಅಂಗೈಯನ್ನು ಹಿಡಿಯುವ ಇನ್ನೊಂದು ಮುದ್ರೆಯನ್ನಿಟ್ಟು ನಾಮಜಪ ಮಾಡಲು ಹೇಳಿದ್ದರು. ನಾವು ಅದರಂತೆ ಮಾಡುತ್ತಿದ್ದೆವು. ಸಚ್ಚಿದಾನಂದನು ಮಲಗುವಾಗ ಕೆಲವೊಮ್ಮೆ ಈ ಮುದ್ರೆ ಯನ್ನು ಮಾಡುತ್ತಿದ್ದನು.
೨ ಅ ೩. ಸಾತ್ತ್ವಿಕತೆಯ ಆಸಕ್ತಿ : ಸಚ್ಚಿದಾನಂದನು ಜನಿಸಿದಾಗಿನಿಂದಲೇ ಸಾತ್ತ್ವಿಕ ವಾತಾವರಣವನ್ನು ಗುರುತಿಸುತ್ತಿದ್ದನು. ನಾವು ರಜ-ತಮ ಹೆಚ್ಚು ಇರುವ ಸ್ಥಳಕ್ಕೆ ಹೋದಾಗ ಅವನು ಅಲ್ಲಿಂದ ದೂರ ಹೋಗಲು ತುಂಬಾ ಹಟ ಮಾಡುತ್ತಿದ್ದನು. ನಾವು ಅಲ್ಲಿಂದ ಹೊರಗೆ ಬಂದತಕ್ಷಣ ಅವನು ಶಾಂತನಾಗು ತ್ತಿದ್ದನು. ನಾನು ಅವನಿಗೆ ಹಾಲು ಕುಡಿಸು ವಾಗ ನಾಮಜಪ ಮಾಡುತ್ತಿದ್ದರೆ ಮಾತ್ರ ಅವನು ಹಾಲು ಕುಡಿಯುತ್ತಿದ್ದನು.
೨ ಅ ೪. ನಾಮಜಪಾದಿ ಉಪಾಯಗಳನ್ನು ಮಾಡಿ ಮುಗಿಸಿದ ನಂತರ ಮಲಗುವುದು : ಅವನು ಪ್ರತಿದಿನ ನಾವು ಅವನಿಗಾಗಿ ಮಾಡುತ್ತಿರುವ ನಾಮಜಪಾದಿ ಉಪಾಯಗಳು ಪೂರ್ಣವಾದ ನಂತರವೇ ಮಲಗುತ್ತಿದ್ದನು. ನಾನು ಅವನಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ‘ನನಗೂ ಚೈತನ್ಯ ಸಿಗುತ್ತಿದೆ’, ಎಂದು ನನಗೆ ಅರಿವಾಗುತ್ತಿತ್ತು.
೨ ಆ. ೧ ರಿಂದ ೨ ವರ್ಷ
೨ ಆ ೧. ಪ್ರೇಮಭಾವ : ಅವನು ತನ್ನ ತಂಗಿಯನ್ನು ಮುದ್ದಿಸುತ್ತಾನೆ ಮತ್ತು ಅವಳ ಕಾಳಜಿಯನ್ನು ತೆಗೆದುಕೊಳ್ಳುತ್ತಾನೆ. ಅವಳು ತೊಟ್ಟಿಲಲ್ಲಿದ್ದರೆ, ಅವನು ಅವಳಿಗೆ ತೊಟ್ಟಿಲು ತೂಗುತ್ತಾನೆ. ಅವಳಿಗೆ ಆಟಿಕೆಗಳನ್ನು ಕೊಡುತ್ತಾನೆ. ನಾವು ಅವಳನ್ನು ಮುದ್ದಿಸುವಾಗ ಅವನಿಗೆ ತುಂಬಾ ಆನಂದವಾಗುತ್ತದೆ.
೨ ಆ ೨. ೨೦.೬.೨೦೨೪ ರಂದು ಗುರುಪೂರ್ಣಿಮೆಯ ನಿಮಿತ್ತ ಸಾಧಕರಿಗಾಗಿ ಸಂತರ ಮಾರ್ಗದರ್ಶನ ಇತ್ತು. ಆಗ ಸಚ್ಚಿದಾನಂದನು ಆಡುತ್ತಿರುವಾಗ ಓಡಿ ಬಂದನು ಮತ್ತು ಅವನು ಕೈ ಜೋಡಿಸಿ ಪ್ರಾರ್ಥನೆ ಮಾಡಿದನು ಮತ್ತು ಸಾಷ್ಟಾಂಗ ನಮಸ್ಕಾರ ಮಾಡಿದನು.
೨ ಆ ೩. ಅವನು ‘ಪರಾತ್ಪರ ಗುರು ಡಾ. ಜಯಂತ ಆಠವಲೆ ಯವರ ‘ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥವನ್ನು ನೋಡುತ್ತಾನೆ. ಆಗ ಅವನಿಗೆ ತುಂಬಾ ಆನಂದವಾಗುತ್ತದೆ.
೨ ಆ ೪. ದೇವರ ಬಗ್ಗೆ ಆಸಕ್ತಿ : ನಾವು ಬೆಳಗ್ಗೆ ದೇವರ ಪೂಜೆ ಯನ್ನು ಮಾಡುವಾಗ ಮತ್ತು ಸಾಯಂಕಾಲ ಆರತಿಯನ್ನು ಮಾಡುವಾಗ ಅವನು ಘಂಟೆಯನ್ನು ಬಾರಿಸುತ್ತಾನೆ. ಅವನು ದೇವರಿಗೆ ಮತ್ತು ತುಳಸಿ ವೃಂದಾವನಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುತ್ತಾನೆ. ಅವನು ಗಿಡದಲ್ಲಿನ ಹೂವುಗಳನ್ನು ಕಿತ್ತು ತಂದು ದೇವರಿಗೆ ಅರ್ಪಿಸುತ್ತಾನೆ. ಅವನು ಎಲ್ಲರಿಗೂ ಪ್ರಸಾದವನ್ನು ಕೊಡುತ್ತಾನೆ. ಭಜನೆ ಅಥವಾ ದೇವರ ಹಾಡುಗಳನ್ನು ಕೇಳುವಾಗ ಆನಂದದಿಂದ ಕುಣಿಯುತ್ತಾನೆ. ಆಗಾಗ ದೇವರಕೋಣೆಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ.
೨ ಆ ೫. ಶ್ರೀರಾಮನ ನಾಮಜಪ ಕೇಳಲು ಇಷ್ಟವಾಗುವುದು : ನಾವು ಸಂಚಾರವಾಣಿಯಲ್ಲಿ ಹಚ್ಚಿದ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ನಾಮಜಪವನ್ನು ಕೇಳುತ್ತ ಮಲಗುತ್ತಾನೆ. ನಾವು ಜಯಘೋಷ ಮಾಡಿದ ನಂತರ ಅವನು ಎರಡೂ ಕೈಗಳನ್ನು ಮೇಲೆ ಮಾಡಿ ‘ಜೈ’ ಎಂದು ಹೇಳುತ್ತಾನೆ. ನಾವು ದೊಡ್ಡ ಧ್ವನಿಯಲ್ಲಿ ನಾಮಜಪ ಮಾಡುತ್ತಿದ್ದರೆ ಅವನು ಚಪ್ಪಾಳೆ ತಟ್ಟುತ್ತಾನೆ.
೨ ಆ ೬. ಸತ್ಸಂಗದ ಆಸಕ್ತಿ : ಬೆಳಗ್ಗೆ ೭ ಗಂಟೆಗೆ ಸಾಧಕರಿಗಾಗಿ ಆನ್‌ಲೈನ್‌ನಲ್ಲಿ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಂತರು, ವಯಸ್ಸು ೪೮ ವರ್ಷ) ಇವರ ಭಾವಸತ್ಸಂಗವಿರುತ್ತಿತ್ತು. ಆಗ ಸಚ್ಚಿದಾನಂದನು ಮಲಗಿದ್ದರೂ ಸತ್ಸಂಗ ಪ್ರಾರಂಭವಾಗುವ ಮೊದಲು ಎದ್ದು ಪೂರ್ಣ ಸತ್ಸಂಗವನ್ನು ಕೇಳುತ್ತಿದ್ದನು.
೩. ಸಚ್ಚಿದಾನಂದನ ವಿಷಯದ ಅನುಭೂತಿ
ಸಚ್ಚಿದಾನಂದನಿಗೆ ಸ್ನಾನವನ್ನು ಮಾಡಿಸುವಾಗ ಕೆಲವೊಮ್ಮೆ ನನ್ನ ಕೈಗಳಿಗೆ ಗಂಧದ ಪರಿಮಳ ಬರುತ್ತದೆ. ಕೆಲವೊಮ್ಮೆ ಅವನ ದೇಹದ ಮೇಲೆ ದೈವೀ ಕಣಗಳು ಕಂಡುಬರುತ್ತವೆ.
– ಸೌ. ಪ್ರೇಮಾ ಉದಯಕುಮಾರ (ಚಿ. ಸಚ್ಚಿದಾನಂದನ ತಾಯಿ), ಉಜಿರೆ, ದಕ್ಷಿಣ ಕನ್ನಡ. (೨೦.೫.೨೦೨೪)