ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (ಸೆಪ್ಟೆಂಬರ್ ೨೧ ರಿಂದ ಅಕ್ಟೋಬರ್ ೬ ೨೦೨೧) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ | ಈ ನಾಮ ಜಪವನ್ನು ಕಡಿಮೆಪಕ್ಷ ೧ ಗಂಟೆ ಮಾಡಬೇಕು.

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನು ಈಗ ಜಾಲತಾಣದ ಒಂದೇ `ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಈ ಪೋಸ್ಟ್ ಗಳು ಕನ್ನಡ ಸಾಪ್ತಾಹಿಕದ ಲಿಂಕ್‍ನಲ್ಲಿ ಒಂದು ವಾರದ ವರೆಗೆ ಮತ್ತು ಹಿಂದಿ ಮತ್ತು ಆಂಗ್ಲ ಪಾಕ್ಷಿಕದ ಲಿಂಕ್‍ನಲ್ಲಿ ಪೂರ್ಣ ಹದಿನೈದು ದಿನಗಳ ವರೆಗೆ, ಹಾಗೂ ಮರಾಠಿ ಲಿಂಕ್‍ನಲ್ಲಿ ಆಯಾ ದಿನದ ಪೋಸ್ಟ್ ಗಳು ಕಾಣಿಸಿಕೊಳ್ಳುತ್ತವೆ.

ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮ ಇವುಗಳ ವಿಷಯದಲ್ಲಿ ಮಾರ್ಗದರ್ಶಕವಾಗಿರುವ ‘ಸನಾತನ ಪಂಚಾಂಗ ೨೦೨೨ರ ಬೇಡಿಕೆಯನ್ನು ನೋಂದಾಯಿಸಿ !

ಚೈತನ್ಯದ ಸ್ರೋತವಾಗಿರುವ ಈ ಪಂಚಾಂಗವು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಇವುಗಳ ಅದ್ಭುತವಾದ ಸಂಗಮವೇ ಆಗಿದೆ.

ಸನಾತನದ ಗ್ರಂಥಗಳನ್ನು ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ

ಮರಾಠಿ, ಹಿಂದಿ ಅಥವಾ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆ, ಅದೇ ರೀತಿ ಕನ್ನಡದಿಂದ ಇತರ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಗಳಿಗೆ ಅನುವಾದ ಮಾಡುವ ಸೇವೆ ಲಭ್ಯವಿದೆ.

ಸನಾತನದ ರಾಮನಾಥಿ ಆಶ್ರಮ, ಹಾಗೆಯೇ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೋಟಗಾರಿಕೆ ಸೇವೆಯನ್ನು ಮಾಡಲು ಮನುಷ್ಯಬಲದ ಅವಶ್ಯಕತೆ !

ಕೃಷಿ ಕೆಲಸವನ್ನು ಮಾಡಲು ಇಚ್ಛಿಸುವ, ಶಾರೀರಿಕ ಸೇವೆಯನ್ನು ಮಾಡಬಹುದಾದ, ಕೃಷಿಯನ್ನು ಮಾಡುವ ಅನುಭವವಿರುವ ಮತ್ತು ಅನುಭವವಿರದಿದ್ದರೂ ಈ ರೀತಿಯ ಸೇವೆಯನ್ನು ಕಲಿಯಲು ಇಚ್ಛಿಸುವ ಸಾಧಕರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು.

ತಮ್ಮ ಮೃತ್ಯುಪತ್ರವನ್ನು (ಇಚ್ಛಾಪತ್ರವನ್ನು) ಸಿದ್ಧಪಡಿಸಿರಿ ಮತ್ತು ಅದರಿಂದಾಗುವ ಲಾಭವನ್ನು ಗಮನದಲ್ಲಿರಿಸಿ ಸಂಭಾವ್ಯ ಅಡಚಣೆಗಳನ್ನು ತಡೆಗಟ್ಟಿರಿ !

ತಮ್ಮ ವಾರಸುದಾರರು ಇದ್ದರೆ ಅಥವಾ ಇಲ್ಲದಿದ್ದರೆ ‘ಯಾವುದೇ ಕಾರಣದಿಂದ ಎಲ್ಲ ಸಂಬಂಧವನ್ನು ಮುರಿದಿರುವಂತಹ ಸಂಬಂಧಿಕರೂ ಮರಣದ ನಂತರ ಸಂಪತ್ತನ್ನು ಕಬಳಿಸುವ ಅಪಾಯವನ್ನು ಇಚ್ಛಾಪತ್ರವನ್ನು ಮಾಡಿ ಇಡುವುದರಿಂದ ತಪ್ಪಿಸಬಹುದು.

ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ದೈವೀ ಬಾಲಕರು ಮತ್ತು ಯುವ ಸಾಧಕರ ಪೋಷಕರಿಗೆ ಸೂಚನೆ !

ಬಹಳಷ್ಟು ಪೋಷಕರು ಪ್ರತಿವರ್ಷ ಬಾಲಕನ ಹುಟ್ಟುಹಬ್ಬದಂದು ಲೇಖನವನ್ನು ಕಳಿಸುತ್ತಾರೆ. ಇಂತಹ ಲೇಖನಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ‘ಸನಾತನ ಪ್ರಭಾತ ಪತ್ರಿಕೆಯಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಲೇಖನವನ್ನು ಪ್ರಕಟಿಸಲು ಸ್ಥಳಾವಕಾಶದ ಕೊರತೆಯಾಗುತ್ತಿದೆ. ಆದುದರಿಂದ ಪ್ರತಿವರ್ಷ ಇಂತಹ ಲೇಖನವನ್ನು ಕಳುಹಿಸಬಾರದು.

‘ಸನಾತನ ಪ್ರಭಾತಕ್ಕಾಗಿ ಲೇಖನಗಳನ್ನು ಕಳುಹಿಸುವಾಗ ಕೇವಲ ನಾವೀನ್ಯಪೂರ್ಣ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾದ ಅಂಶಗಳನ್ನು ಮಾತ್ರ ಕಳುಹಿಸಿರಿ !

ಪರಾತ್ಪರ ಗುರು ಡಾಕ್ಟರರ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಅನುಭೂತಿಗಳು, ಈ ಹಿಂದಿನ ಅವರ ಭೇಟಿಯ ಪ್ರಸಂಗಗಳು, ಅವರಿಂದ ಕಲಿಯಲು ಸಿಕ್ಕಿರುವ ಅಂಶಗಳು, ‘ಅವರು ಸಾಧನೆಯಲ್ಲಿ ಮತ್ತು ಸೇವೆಯಲ್ಲಿ ಹೇಗೆ ಸಿದ್ಧ ಮಾಡಿದರು ?, ಇತ್ಯಾದಿ ವಿಷಯಗಳನ್ನು ಒಳಗೊಂಡಿರುವ ನಿಖರವಾದ ಸ್ಪಷ್ಟತೆಯಿಂದ ಕೂಡಿದ ಲೇಖನಗಳನ್ನು ಆದ್ಯತೆಯಿಂದ ಕಳುಹಿಸಬೇಕು.

ಗುರುಕಾರ್ಯಕ್ಕಾಗಿ ಅರ್ಪಣೆ ರೂಪದಲ್ಲಿ ದೊರೆತ ಧನವನ್ನು ಅಪವ್ಯಯ ಮಾಡುವವರ ಮಾಹಿತಿ ತಿಳಿಸಿ

ಅನೇಕ ಹಿತಚಿಂತಕರು ಸನಾತನದ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ಆಯಾ ಸಮಯದಲ್ಲಿ ಧನ ಅಥವಾ ವಸ್ತು ಸ್ವರೂಪದಲ್ಲಿ ಅರ್ಪಣೆ ನೀಡುತ್ತಿರುತ್ತಾರೆ. ಈ ಅರ್ಪಣೆಯನ್ನು ಯೋಗ್ಯ ಸ್ಥಳಕ್ಕೆ ತಲುಪಿಸುವುದು ಪ್ರತಿಯೊಬ್ಬ ಸಾಧಕನ ಕರ್ತವ್ಯವಾಗಿರುತ್ತದೆ. ಒಂದೆಡೆ ಮಾತ್ರ ಈ ಅರ್ಪಣೆಯ ಅಪವ್ಯಯವಾಗಿರುವುದು ಗಮನಕ್ಕೆ ಬಂದಿದೆ.

ಸನಾತನದ ಸಾಧಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳ ಭಾವ ಮತ್ತು ಆತ್ಮೀಯತೆಯನ್ನು ದುರುಪಯೋಗಿಸಿಕೊಂಡು ಹಣ ಸಂಗ್ರಹಿಸುವ ತಥಾಕಥಿತ ಸ್ವಾಮಿಗಳಿಂದ ಜಾಗರೂಕರಾಗಿರಿ !

ಓರ್ವ  ಹಿತಚಿಂತಕರಿಗೆ  ‘ನೀವು ಬಾಡಿಗೆ ಮನೆಯಲ್ಲಿ ಎಷ್ಟು ಸಮಯ ಇರುತ್ತೀರಿ. ನೀವೇ ಮನೆ ಮಾಡಬಹುದಲ್ಲ ಎಂದು ಹೇಳುವುದು, ಓರ್ವ ಸಾಧಕರ ಮನೆಯಲ್ಲಿ ಅವರ ಅಡಚಣೆಗೆ ಉಪಾಯವೆಂದು ಮನೆಯಲ್ಲಿ ತೆಂಗಿನಕಾಯಿಯ ದೃಷ್ಟಿ  ನಿವಾಳಿಸಿ ಅದನ್ನು ಮನೆಯೊಳಗೆ ಒಡೆಯುವುದು ಇಂತಹವುಗಳನ್ನು ಮಾಡುತ್ತಿದ್ದಾರೆ.