‘ಸನಾತನ ಪ್ರಭಾತಕ್ಕಾಗಿ ಲೇಖನಗಳನ್ನು ಕಳುಹಿಸುವಾಗ ಕೇವಲ ನಾವೀನ್ಯಪೂರ್ಣ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾದ ಅಂಶಗಳನ್ನು ಮಾತ್ರ ಕಳುಹಿಸಿರಿ !

ಎಲ್ಲಾ ಸಾಧಕರಿಗೆ ಮಹತ್ವದ ಸೂಚನೆ

ಅನೇಕ ಸಾಧಕರು ಸಂಕಲನ ವಿಭಾಗಕ್ಕೆ ಪ್ರಸಾರದ ಅನುಭವ, ಅನುಭೂತಿ, ಕಲಿಯಲು ಸಿಕ್ಕಿರುವ ಅಂಶಗಳು, ಸಾಧನಾಪ್ರವಾಸ, ಭಾವಪ್ರಯೋಗ, ಕವಿತೆಗಳು ಮುಂತಾದ ವಿವಿಧ ಲೇಖನಗಳನ್ನು ‘ಸನಾತನ ಪ್ರಭಾತದಲ್ಲಿ ಪ್ರಕಟಿಸಲು ಕಳುಹಿಸುತ್ತಾರೆ. ಇತ್ತೀಚೆಗೆ ಸಾಧಕರಿಂದ ಅತ್ಯಧಿಕ ಪ್ರಮಾಣದಲ್ಲಿ ಮತ್ತು ಸವಿಸ್ತಾರವಾದ ಲೇಖನಗಳು ಬರುತ್ತಿವೆ. ಅವುಗಳನ್ನು ಆಯ್ಕೆ ಮಾಡಿ, ಸಂಕಲನ ಮಾಡಿ ಪ್ರಕಟಿಸಲು ಬಹಳ ಅಡಚಣೆಯಾಗುತ್ತಿದೆ. ಆದುದರಿಂದ ಇನ್ನು ಮುಂದೆ ಲೇಖನಗಳನ್ನು ಕಳುಹಿಸುವಾಗ ಸಾಧಕರು ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ಕಳುಹಿಸಬೇಕು.

೧. ‘ಸನಾತನ ಪ್ರಭಾತಕ್ಕಾಗಿ ಯಾವ ಲೇಖನಗಳನ್ನು ಕಳುಹಿಸಬೇಕು ?

ಅ. ಪರಾತ್ಪರ ಗುರು ಡಾಕ್ಟರರ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಅನುಭೂತಿಗಳು, ಈ ಹಿಂದಿನ ಅವರ ಭೇಟಿಯ ಪ್ರಸಂಗಗಳು, ಅವರಿಂದ ಕಲಿಯಲು ಸಿಕ್ಕಿರುವ ಅಂಶಗಳು, ‘ಅವರು ಸಾಧನೆಯಲ್ಲಿ ಮತ್ತು ಸೇವೆಯಲ್ಲಿ ಹೇಗೆ ಸಿದ್ಧ ಮಾಡಿದರು ?, ಇತ್ಯಾದಿ ವಿಷಯಗಳನ್ನು ಒಳಗೊಂಡಿರುವ ನಿಖರವಾದ ಸ್ಪಷ್ಟತೆಯಿಂದ ಕೂಡಿದ ಲೇಖನಗಳನ್ನು ಆದ್ಯತೆಯಿಂದ ಕಳುಹಿಸಬೇಕು.

ಆ. ಸನಾತನದ ಸಂತರ ಮತ್ತು ಸದ್ಗುರುಗಳ ಬಗೆಗಿನ ವೈಶಿಷ್ಟ್ಯಪೂರ್ಣವಾದ ಅನುಭೂತಿಗಳು, ಅವರಿಂದ ಕಲಿಯಲು ಸಿಕ್ಕಿರುವ ಅಂಶಗಳನ್ನು ಕಳುಹಿಸಬಹುದು.

. ಸಾಧಕರಿಗೆ ಬಂದಿರುವ ಹೊಸ ಅನುಭೂತಿಗಳು, ಸಾಧಕರ ಜೀವನದಲ್ಲಿನ ಕೆಲವು ವಿಶಿಷ್ಟ ಘಟನೆಗಳು ಮುಂತಾದ ಲೇಖನಗಳನ್ನು ಸಂಕ್ಷಿಪ್ತವಾಗಿ ಕಳುಹಿಸಬಹುದು.

. ಇತರ ಸಾಧಕರ ಹಾಗೂ ಬಾಲಸಾಧಕರ ಗುಣವೈಶಿಷ್ಟ್ಯಗಳನ್ನು ಕಳುಹಿಸುವಾಗ ಸಾಧಕರು ಅವುಗಳನ್ನು ಸಂಕ್ಷಿಪ್ತವಾಗಿ ಮತ್ತು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಬರೆದು ಕಳುಹಿಸಬೇಕು. ಬಾಲಸಾಧಕರ ವೈಶಿಷ್ಟ್ಯಪೂರ್ಣ ಲೇಖನಗಳನ್ನು ಕಳುಹಿಸುವ ಕುರಿತು ಸನಾತನ ಪ್ರಭಾತದಲ್ಲಿ ಆಗಾಗ ಪ್ರಕಟಿಸಲಾಗಿದೆ. ಆ ಚೌಕಟ್ಟುಗಳ ಕತ್ತರಿಸಿದ ತುಂಡುಗಳನ್ನು (ಪೇಪರ್ ಕಟಿಂಗ್) ಅಥವಾ ಆ ಸಂಚಿಕೆಯನ್ನು ತಮ್ಮ ಬಳಿಗೆ ಇಟ್ಟುಕೊಂಡು ಎಲ್ಲ ವಿವರಗಳನ್ನು ಪೂರ್ಣಗೊಳಿಸಿದ ಬಳಿಕವೇ ಲೇಖನಗಳನ್ನು ಸಂಕಲನದ ವಿಭಾಗಕ್ಕೆ ಕಳುಹಿಸಬೇಕು.

ಉ. ಇತರ ವಿಷಯಗಳ ಕುರಿತಾದ ಹೊಸ ಲೇಖನಗಳನ್ನೂ ಸಂಕ್ಷಿಪ್ತವಾಗಿ ಕಳುಹಿಸಬೇಕು.

ಊ. ಸಮಾಜದಲ್ಲಿ ಆಯಾ ಸಂದರ್ಭದಲ್ಲಿ ನಡೆಯುತ್ತಿರುವ ವಿಷಯಗಳ ಕುರಿತು ಮಾಹಿತಿಯನ್ನು ಕಳುಹಿಸುವಾಗ, ಉದಾ. ‘ಕೊರೊನಾ ಮಹಾಮಾರಿಯ ಬಗೆಗಿನ ಲೇಖನಗಳನ್ನು ಕಳುಹಿಸುವಾಗ, ‘ಸನಾತನ ಪ್ರಭಾತದಲ್ಲಿ ಈ ಹಿಂದೆ ಪ್ರಕಟಿಸಲಾಗಿರುವ ಮಾಹಿತಿಗಳನ್ನು ಅಥವಾ ಆ ರೀತಿಯ ಲೇಖನಗಳನ್ನು ಪುನಃ ಕಳುಹಿಸಬಾರದು. ಅದಕ್ಕಿಂತ ಬೇರೆ ಮತ್ತು ವೈಶಿಷ್ಟ್ಯಪೂರ್ಣವಾಗಿರುವ ಮಾಹಿತಿಗಳಿದ್ದರೆ ಮಾತ್ರ ಅವುಗಳನ್ನು ಸಂಕ್ಷಿಪ್ತವಾಗಿ ಬರೆದು ಕಳುಹಿಸಬೇಕು.

ಎ. ಸದ್ಯ ಬಹಳಷ್ಟು ಸಾಧಕರ ಮೃತ್ಯುವಾಗಿದೆ. ಮೃತಪಟ್ಟ ಸಾಧಕರಿಗೆ ಸಂಬಂಧಿಸಿದಂತೆ ಮಹತ್ವಪೂರ್ಣ ಲೇಖನಗಳನ್ನು ಅವರ ಕುಟುಂಬದವರು ಮತ್ತು ಸಾಧಕರು ಆದಷ್ಟು ಬೇಗನೆ ಕಳುಹಿಸಿದರೆ, ಅವರ ನಿಧನದ ನಂತರದ ೧೦ ನೇ ಅಥವಾ ೧೨ ನೇ ದಿನದಂದು ಪ್ರಕಟಿಸಲು ಸಾಧ್ಯವಾಗುತ್ತದೆ. ಬಹಳಷ್ಟು ಸಲ ಈ ಲೇಖನಗಳು ೨-೩ ದಿನಗಳು ಇರುವಾಗ ಬರುವುದರಿಂದ, ಅವುಗಳ ಸಂಕಲನ ಮಾಡಿ ಅವುಗಳನ್ನು ದೈನಿಕದಲ್ಲಿ ಪ್ರಕಟಿಸಲು ಬಹಳ ಗಡಿಬಿಡಿಯಾಗುತ್ತದೆ. ಇಂತಹ ಲೇಖನಗಳನ್ನು ಕಳುಹಿಸುವಾಗ ಅದರೊಂದಿಗೆ ಮರಣ ಹೊಂದಿರುವ ಸಾಧಕರ ಛಾಯಾಚಿತ್ರಗಳನ್ನು ಕಳುಹಿಸಬೇಕು. ಲೇಖನದಲ್ಲಿ ಅವರ ವಯಸ್ಸನ್ನು ನಮೂದಿಸಬೇಕು. ಅಲ್ಲದೇ ಬರೆದು ಕಳುಹಿಸುವವರ ಪೂರ್ಣ ಹೆಸರು, ಸಂಬಂಧ, ಊರು ಇತ್ಯಾದಿ ಎಲ್ಲ ಪೂರ್ಣ ಮಾಹಿತಿಯೊಂದಿಗೆ ಲೇಖನವನ್ನು ಕಳುಹಿಸಬೇಕು. ಸಂಕಲನ ವಿಭಾಗಕ್ಕೆ ಅಪೂರ್ಣ ಮಾಹಿತಿಯೊಂದಿಗೆ ಕಳುಹಿಸಿದರೆ, ಎಲ್ಲ ವಿವರಗಳನ್ನು ಪೂರ್ಣಗೊಳಿಸುವಲ್ಲಿ ಸಮನ್ವಯಕ ಸಾಧಕರು ಹೆಚ್ಚು ಸಮಯ ನೀಡಬೇಕಾಗುತ್ತದೆ.

೨. ಯಾವ ಲೇಖನಗಳನ್ನು ಕಳುಹಿಸಬಾರದು ?

. ಸಾಧಕರು ಮನಸ್ಸಿನ ಸ್ತರದಲ್ಲಿನ ಸವಿಸ್ತಾರ ವಿಚಾರಪ್ರಕ್ರಿಯೆಗಳನ್ನು ಬರೆದು ಕಳುಹಿಸಬಾರದು. ಅವುಗಳನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿಯೂ ಹೇಳಬಹುದು.

. ಸಾಧಕರು ಒಂದೇ ಸಮಯದಲ್ಲಿ ೫-೬ ಕವಿತೆಗಳನ್ನು ಬರೆದುಕಳುಹಿಸಬಾರದು. ಕೆಲವೊಮ್ಮೆ ಕವಿತೆಗಳಲ್ಲಿನ ಕೆಲವು ಸಾಲುಗಳು ಅಪೂರ್ಣವಾಗಿರುತ್ತವೆ. ಅವುಗಳ ಅರ್ಥವನ್ನು ತಿಳಿದುಕೊಂಡು ಸಂಕಲನ ಮಾಡಲು ಕಠಿಣವಾಗುತ್ತದೆ ಮತ್ತು ಹೆಚ್ಚು ಸಮಯವನ್ನು ಕೊಡಬೇಕಾಗುತ್ತದೆ. ಅನೇಕ ಸಾಧಕರು ತುಂಬಾ ದೊಡ್ಡ ಕವಿತೆಗಳನ್ನು ಕಳುಹಿಸುತ್ತಾರೆ. ಇದರಿಂದ ಕವಿತೆಯಲ್ಲಿನ ಅನಾವಶ್ಯಕ ಭಾಗ ತೆಗೆದು ಸರಿಪಡಿಸಲು ಸಾಧಕರು ಸಮಯ ನೀಡಬೇಕಾಗುತ್ತದೆ.

ಲೇಖನಗಳನ್ನು ಕಳುಹಿಸುವ ಎಲ್ಲ ಸಾಧಕರು ಲೇಖನದ ಕೆಳಗೆ ತಮ್ಮ ಹೆಸರು, ವಯಸ್ಸು, ಊರು, ದಿನಾಂಕ ಮತ್ತು ಸಂಪರ್ಕ ಕ್ರಮಾಂಕಗಳನ್ನು ಬರೆಯಬೇಕು. ಲೇಖನದಲ್ಲಿ ಕೆಲವು ಸಂದರ್ಭಗಳನ್ನು ನೀಡಿದ್ದರೆ, ಅದು ಯೋಗ್ಯವಾಗಿರುವುದನ್ನು ದೃಢಪಡಿಸಿಕೊಂಡಿರಬೇಕು. ಅಲ್ಲದೇ ‘ಸನಾತನ ಪ್ರಭಾತದ ಲೇಖನದ ಸಂದರ್ಭದಲ್ಲಿ ನೀಡಿದ್ದರೆ, ಸಾಧ್ಯವಾದಷ್ಟು ಆ ಸಂಚಿಕೆಯ ದಿನಾಂಕ ಸಹ ನಮೂದಿಸಬೇಕು. ಇಲ್ಲದಿದ್ದರೆ ಇಂತಹ ಮಾಹಿತಿಯನ್ನು ಹುಡುಕಲು ಸಂಕಲನ ಸೇವೆಯಲ್ಲಿರುವ ಸಾಧಕರ ಸಮಯವು ವ್ಯರ್ಥಹೋಗುತ್ತದೆ.

ಜಿಲ್ಲಾ ಸೇವಕರಿಗೆ ಸೂಚನೆ

ತಮ್ಮ ಜಿಲ್ಲೆಯ ಎಲ್ಲ ಸಾಧಕರು ‘ಮೇಲಿನ ಎಲ್ಲ ಸೂಚನೆಗಳನ್ನು ಓದಿದ್ದಾರಲ್ಲ ?, ಎಂದು ದಯವಿಟ್ಟು ಖಚಿತ ಪಡಿಸಿ ಕೊಳ್ಳಬೇಕು ಮತ್ತು ಅದರಂತೆ ಲೇಖನಗಳನ್ನು ಕಳುಹಿಸಲು ಸಾಧಕರನ್ನು ಪ್ರವೃತ್ತ ಮಾಡಬೇಕು !

– ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ.