‘ನಿರ್ವಿಚಾರ’ ನಾಮಜಪವು ಎಲ್ಲ ಮಟ್ಟದ ಸಾಧಕರಿಗಾಗಿ ಏಕಿದೆ ?

‘ನಿರ್ವಿಚಾರ’ ಈ ನಾಮಜಪವು ‘ನಿರ್ಗುಣ’ ಸ್ಥಿತಿಗೆ ಕರೆದೊಯ್ಯುತ್ತದೆ. ಆದುದರಿಂದ ಕುಲದೇವತೆಯ ನಾಮಜಪವನ್ನು ಮಾಡುವ ಸಾಧಕರಿಗೆ ಅಥವಾ ಶೇ. ೬೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ಈ ನಾಮಜಪವನ್ನು ಮಾಡುವುದು ಕಠಿಣವಾಗಬಹುದು. ಇದಕ್ಕಾಗಿ ಅವರು ತಮ್ಮ ಯಾವಾಗಲೂ ಮಾಡುವ ಜಪದೊಂದಿಗೆ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು.

‘ಕೊರೋನಾ’ದ ಹೆಚ್ಚುತ್ತಿರುವ ಸೋಂಕಿನಿಂದ ಮೃತ್ಯುಭಯವು ನಿರ್ಮಾಣವಾದರೆ ಆ ಕುರಿತು ಶಾರೀರಿಕ, ಮಾನಸಿಕ, ಮತ್ತು ನಾಮಜಪಾದಿ ಉಪಾಯಗಳನ್ನು ಮಾಡಿ ಅದನ್ನು ದೂರ ಮಾಡಿರಿ !

‘ಪ್ರಸ್ತುತ ಭಾರತ ಸಹಿತ ಇತರ ಕೆಲವು ದೇಶಗಳಲ್ಲಿ ‘ಕೊರೋನಾ’ ಈ ಸಾಂಕ್ರಾಮಿಕ ವಿಷಾಣುಗಳ ಸೋಂಕಾಗಿದೆ. ಇದರಿಂದ ಎಲ್ಲೆಡೆಯ ಜನಜೀವನವು ಹದಗೆಟ್ಟು ಜನಸಾಮಾನ್ಯರಲ್ಲಿ ಭಯದ ವಾತಾವರಣವು ಸೃಷ್ಟಿಯಾಗಿದೆ. ಸಮಾಜದಲ್ಲಿ ಅನೇಕರ ಮನಸ್ಸಿನಲ್ಲಿ ಮೃತ್ಯುಭಯವು ಸೃಷ್ಟಿಯಾಗಿದೆ.

ಕೊರೋನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ಪ್ರತಿರೋಧಕ್ಷಮತೆ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಶಕ್ತಿ ಸಿಗಲು ‘ಶ್ರೀ ದುರ್ಗಾದೇವಿ, ಶ್ರೀ ದತ್ತ ಮತ್ತು ಶಿವ’ ಈ ದೇವತೆಗಳ ಒಟ್ಟಿಗಿನ ನಾಮಜಪವನ್ನು ಧ್ವನಿವರ್ಧಕದಲ್ಲಿ ಎಲ್ಲೆಡೆ ಹಾಕಲು ಆಯೋಜನೆ ಮಾಡಿ !

‘ನಾಮಜಪವು ಕೇವಲ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರದೇ ಅದು ವಿವಿಧ ರೋಗಗಳ ನಿರ್ಮೂಲನೆಗಾಗಿಯೂ ಲಾಭದಾಯಕವಾಗಿರುತ್ತದೆ, ಎಂಬುದು ಸಾಬೀತಾಗಿದೆ. ಪ್ರಸ್ತುತ ಕೊರೋನಾ ಮಹಾಮಾರಿಯ ಕಾಲಾವಧಿಯಲ್ಲಿ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಸಮಾಜದಲ್ಲಿ ಯೋಗಾಸನಗಳು, ಪ್ರಾಣಾಯಾಮ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಪ್ರಯತ್ನಗಳು ಆಗುತ್ತಿವೆ.