ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

ಸಾಧಕರಿಗೆ ಸೂಚನೆ 

ಸದ್ಗುರು (ಡಾ.) ಮುಕುಲ ಗಾಡಗೀಳ

೧. ದತ್ತನ ನಾಮಜಪ ಮಾಡುವುದು : ‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (ಸೆಪ್ಟೆಂಬರ್ ೨೧ ರಿಂದ ಅಕ್ಟೋಬರ್ ೬ ೨೦೨೧) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ | ಈ ನಾಮ ಜಪವನ್ನು ಕಡಿಮೆಪಕ್ಷ ೧ ಗಂಟೆ ಮಾಡಬೇಕು. ಯಾವ ಸಾಧಕರು ತಮಗಾಗುತ್ತಿರುವ ಕೆಟ್ಟ  ಶಕ್ತಿಗಳ ತೊಂದರೆ ದೂರವಾಗಲು ಆಧ್ಯಾತ್ಮಿಕ ಉಪಾಯ ಮಾಡುತ್ತಾರೋ, ಅವರು ತಮ್ಮ ಉಪಾಯದ ನಾಮಜಪಗಳನ್ನು ಮಾಡಿ ಹೆಚ್ಚುವರಿ ೧ ಗಂಟೆ ದತ್ತನ ನಾಮಜಪವನ್ನು ಮಾಡಬೇಕು. ದತ್ತನ ನಾಮಜಪವನ್ನು ಮಾಡುವಾಗ ಕೈಯ ಐದೂ ಬೆರಳುಗಳ ತುದಿಗಳನ್ನು ಜೋಡಿಸಿ ಅನಾಹತಚಕ್ರ ಮತ್ತು ಮಣಿಪುರಚಕ್ರಗಳ ಸ್ಥಾನದಲ್ಲಿ ನ್ಯಾಸ ಮಾಡಬೇಕು. ಯಾವ ಸಾಧಕರು ಉಪಾಯ ಮಾಡುವುದಿಲ್ಲ ಅವರು ವೈಯಕ್ತಿಕ ತಯಾರಿ ವೇಳೆ, ಸ್ನಾನ, ಸ್ವಚ್ಛತೆ-ಸೇವೆ ಮುಂತಾದ ವೇಳೆ ದತ್ತನ ಜಪವನ್ನು ಕಡಿಮೆಪಕ್ಷ ೧ ಗಂಟೆ ಆಗುವಂತೆ ನೋಡಬೇಕು; ಆದರೆ ತೊಂದರೆಯ ಅರಿವಾದರೆ ಅವರೂ ಸಹ ಕುಳಿತು ಮತ್ತು ಮುದ್ರೆ ಮಾಡಿ ದತ್ತನ ನಾಮಜಪ ಮಾಡಬೇಕು.

. ಪಿತೃಪಕ್ಷದ ಕಾಲಾವಧಿಯಲ್ಲಿ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು ದತ್ತನಿಗೆ ದಿನದಲ್ಲಿ ನಡುನಡುವೆ ಪ್ರಾರ್ಥನೆ ಮಾಡಬೇಕು.

. ಸಾಧ್ಯವಿರುವ ಸಾಧಕರು ಪಿತೃಪಕ್ಷದಲ್ಲಿ ಶ್ರಾದ್ಧವಿಧಿಯನ್ನು ಅವಶ್ಯ ಮಾಡಬೇಕು.

ಹೀಗೆ ಮಾಡುವುದರಿಂದ ಪೂರ್ವಜರ ತೊಂದರೆ ದೂರವಾಗಿ ಸಾಧನೆಗಾಗಿ ಅವರ ಆಶೀರ್ವಾದವೂ ಲಭಿಸುವುದು.

– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೯.೨೦೨೦)