ಎಲ್ಲೆಡೆಯ ಸಾಧಕರು, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸೇವೆಯ ಸುವರ್ಣಾವಕಾಶ !
‘ಸನಾತನದ ರಾಮನಾಥಿ ಆಶ್ರಮದ ಪರಿಸರದಲ್ಲಿ ವಿವಿಧ ಔಷಧಿ ವನಸ್ಪತಿಗಳು, ಹಣ್ಣುಗಳು, ಹೂವುಗಳು ಮುಂತಾದವುಗಳ ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆಯನ್ನು ಮಾಡಲಾಗಿದೆ. ಈ ಗಿಡಗಳನ್ನು ಮಂಗಗಳಿಂದ ರಕ್ಷಿಸುವುದು, ಗಿಡಗಳ ಸಂರಕ್ಷಣೆ ಮಾಡುವುದು, ಔಷಧಿ ವನಸ್ಪತಿಗಳ ಸಸಿಗಳನ್ನು ತಯಾರು ಮಾಡುವುದು, ಹೊಸ ಹೂವುಗಳ ಗಿಡಗಳ ತೋಟಗಾರಿಕೆ ಈ ಸೇವೆಗಳಿಗಾಗಿ ಸಾಧಕರ ಆವಶ್ಯಕತೆ ಇದೆ. ಹಾಗೆಯೇ ಈ ರೀತಿಯ ಗಿಡಗಳ ತೋಟಗಾರಿಕೆ ಸೇವೆಯನ್ನು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ವಿವಿಧ ಸ್ಥಳಗಳಲ್ಲಿ ಆರಂಭಿಸಲಾಗುತ್ತಿದೆ.
ಕೃಷಿ ಕೆಲಸವನ್ನು ಮಾಡಲು ಇಚ್ಛಿಸುವ, ಶಾರೀರಿಕ ಸೇವೆಯನ್ನು ಮಾಡಬಹುದಾದ, ಕೃಷಿಯನ್ನು ಮಾಡುವ ಅನುಭವವಿರುವ ಮತ್ತು ಅನುಭವವಿರದಿದ್ದರೂ ಈ ರೀತಿಯ ಸೇವೆಯನ್ನು ಕಲಿಯಲು ಇಚ್ಛಿಸುವ ಸಾಧಕರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು. ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿದ್ದು ಈ ಸೇವೆಯನ್ನು ಕಲಿತು ತಮ್ಮ ಹೊಲದಲ್ಲಿ ಅಥವಾ ಹಿತ್ತಲಲ್ಲಿರುವ ತೋಟದಲ್ಲಿ ಈ ರೀತಿಯ ಸೇವೆಯನ್ನು ನಿಯಮಿತವಾಗಿ ಮಾಡಲು ಇಚ್ಛಿಸುವ ಸಾಧಕರೂ ಈ ಸೇವೆಯನ್ನು ಕಲಿಯಲು ಹೆಸರುಗಳನ್ನು ನೋಂದಾಯಿಸಬಹುದು. ಆಸಕ್ತ ಸಾಧಕರು ಜಿಲ್ಲಾಸೇವಕರ ಮಾಧ್ಯಮದಿಂದ ಇಲ್ಲಿ ನೀಡಿರುವ ಕೋಷ್ಟಕ ಕ್ಕನುಸಾರ ತಮ್ಮ ಮಾಹಿತಿಯನ್ನು ಕಳುಹಿಸಬೇಕು.
ಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಶ್ರೀ. ವಿಷ್ಣು ಜಾಧವ, C/o ‘ಸನಾತನದ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401
ಇದರಲ್ಲಿ ಏನಾದರೂ ಸಂದೇಹವಿದ್ದರೆ ಶ್ರೀ. ವಿಷ್ಣು ಜಾಧವ ಇವರನ್ನು ೮೨೦೮೫೧೪೭೯೧ ಈ ಕ್ರಮಾಂಕದಲ್ಲಿ ಸಂಪರ್ಕಿಸಬೇಕು.
– (ಶ್ರೀಸತ್‌ಶಕ್ತಿ) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೬.೨೦೨೧)