ಸನಾತನದ ಸಾಧಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳ ಭಾವ ಮತ್ತು ಆತ್ಮೀಯತೆಯನ್ನು ದುರುಪಯೋಗಿಸಿಕೊಂಡು ಹಣ ಸಂಗ್ರಹಿಸುವ ತಥಾಕಥಿತ ಸ್ವಾಮಿಗಳಿಂದ ಜಾಗರೂಕರಾಗಿರಿ !

ಒಬ್ಬ ಸ್ವಾಮಿಯವರು ಕೆಲವು ತಿಂಗಳುಗಳ ಹಿಂದೆ ಸನಾತನದ ಆಶ್ರಮಕ್ಕೆ ಬಂದಿದ್ದರು. ಆ ವಿಷಯವು ಸನಾತನ ಪ್ರಭಾತದಲ್ಲಿ ಮುದ್ರಣವಾದ ನಂತರ ಆ ಕ್ಷೇತ್ರದ ಸನಾತನದ ಕೆಲವು ಸಾಧಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಅವರ ದರ್ಶನಕ್ಕಾಗಿ ಹೋಗಿದ್ದರು. ಆ ಪರಿಚಯವನ್ನು ಉಪಯೋಗಿಸಿ ಸ್ವಾಮಿಗಳು ಸಾಧಕರು ಹಿತಚಿಂತಕರು ಮತ್ತು ಧರ್ಮಪ್ರೇಮಿಗಳೊಂದಿಗೆ ಆತ್ಮೀಯತೆಯನ್ನು ಸಾಧಿಸಿದರು ಮತ್ತು ಈಗ ಅವರು ತಮ್ಮ ಘನತೆಯನ್ನು ಹೆಚ್ಚಿಸಲು ಹಾಗೂ ಆರ್ಥಿಕ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಪ್ರಸಂಗಗಳು ಅಲ್ಲಲ್ಲಿ ನಡೆಯುತ್ತಿವೆ. ಆ ಸ್ವಾಮಿಗಳ ವಿಷಯದಲ್ಲಿ ಗಮನಕ್ಕೆ ಬಂದ ಕೆಲವು ಘಟನೆಗಳು –

. ದರ್ಶನಕ್ಕೆಂದು ಹೋದ ಸನಾತನದ ಸಾಧಕರ ಪರಿಚಯವನ್ನು ಉಪಯೋಗಿಸಿ ಈ ಸ್ವಾಮಿಯವರು ಅಲ್ಲಲ್ಲಿ ಸಭೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಈ ಸಭೆಯಲ್ಲಿ ಆರೋಗ್ಯ ಮತ್ತು ಆಯುರ್ವೇದದ ಮಾಹಿತಿಯನ್ನು ನೀಡುತ್ತಾರೆ ಹಾಗೂ ಭಜನೆ ಮತ್ತು ಧ್ಯಾನ ಮಾಡಲು ಹೇಳುತ್ತಾರೆ. ನಾಮಜಪಿಸುವ ಅವಶ್ಯಕತೆಯಿಲ್ಲ. ‘ನಾಮಜಪವಾಗದಿದ್ದರೆ  ನೀವು ಶಾಂತವಾಗಿ ಕುಳಿತುಕೊಳ್ಳಿ ಎಂದು ಸಭೆಗೆ ಬಂದ ಜಿಜ್ಞಾಸುಗಳೆದುರು ಹೇಳುತ್ತಾರೆ.

. ಅವರ ಬಳಿ ಹೋದ ಸಾಧಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ‘ಸನಾತನವು ಹೇಳಿದಂತೆಯೇ ಸಾಧನೆ ಮಾಡಬೇಕೆಂದೇನೂ ಇಲ್ಲ ಎಂದು ಹೇಳಿ ಸನಾತನದ ಸಾಧನಾಮಾರ್ಗದ ವಿಷಯದಲ್ಲಿ ನಕಾರಾತ್ಮಕತೆಯನ್ನು ಮೂಡಿಸುವಂತಹ ಹೇಳಿಕೆಗಳನ್ನು ನೀಡುತ್ತಾರೆ.

೩. ಓರ್ವ  ಹಿತಚಿಂತಕರಿಗೆ ‘ನೀವು ಬಾಡಿಗೆ ಮನೆಯಲ್ಲಿ ಎಷ್ಟು ಸಮಯ ಇರುತ್ತೀರಿ. ನೀವೇ ಮನೆ ಮಾಡಬಹುದಲ್ಲ ಎಂದು ಹೇಳುವುದು, ಓರ್ವ ಸಾಧಕರ ಮನೆಯಲ್ಲಿ ಅವರ ಅಡಚಣೆಗೆ ಉಪಾಯವೆಂದು ಮನೆಯಲ್ಲಿ ತೆಂಗಿನಕಾಯಿಯ ದೃಷ್ಟಿ ನಿವಾಳಿಸಿ ಅದನ್ನು ಮನೆಯೊಳಗೆ ಒಡೆಯುವುದು ಇಂತಹವುಗಳನ್ನು ಮಾಡುತ್ತಿದ್ದಾರೆ.

. ಸಂಪರ್ಕಕ್ಕೆ ಬಂದ ಸಾಧಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳನ್ನು ಹೊರರಾಜ್ಯದಲ್ಲಿರುವ ಆಶ್ರಮ, ದೇವಸ್ಥಾನಗಳ ದರ್ಶನ ಪ್ರವಾಸಕ್ಕೆಂದು ಕರೆದುಕೊಂಡು ಹೋಗುತ್ತಾರೆ.

. ಒಬ್ಬ ಸಾಧಕನ ಅಂಗಡಿಗೆ ಬೆಂಕಿ ತಗಲಿತ್ತು. ಆ ಪ್ರಸಂಗವನ್ನು ಉಪಯೋಗಿಸಿ ‘ಬೆಂಕಿ ತಗಲುವ ಘಟನೆಯ ಕಾಲಾವಧಿಯನ್ನು ನಾನು ಮುಂದೆ ತಳ್ಳಿದ್ದೆನು. ಈ ಬೆಂಕಿಯಲ್ಲಿ ೩ ಜನರ ಮೃತ್ಯುವಾಗುವುದರಲ್ಲಿತ್ತು. ಆದರೆ ನಾನು ಅದನ್ನು ತಡೆಗಟ್ಟಿದೆ ಎಂದು ಸಹ ಅವರು ಹೇಳಿದ್ದರು.

. ದೇವಸ್ಥಾನ ಸರಕಾರೀಕರಣದ ವಿರುದ್ಧ ಕಾರ್ಯ ಮಾಡುವ ಕಾರ್ಯಕರ್ತರಿಗೆ ‘ದೇವಸ್ಥಾನಗಳು ಸರಕಾರದ ವಶದಲ್ಲಿರುವುದು ಒಳ್ಳೆಯ ಸಂಗತಿಯಾಗಿದೆ ಎಂಬಂತಹ ರೀತಿಯಲ್ಲಿ ಕಾರ್ಯಕರ್ತರ ಮನಸ್ಸಿನಲ್ಲಿ ವಿಕಲ್ಪ ಬರುವಂತಹ ಹೇಳಿಕೆಗಳನ್ನು ಅವರು ನೀಡುತ್ತಿದ್ದಾರೆ.

. ಈ ಸ್ವಾಮಿಯವರು ಆಶ್ರಮವನ್ನು ಕಟ್ಟಲು ಸಾಧಕರಿಂದ ಜಮೀನನ್ನು ಅರ್ಪಣೆಯ ಸ್ವರೂಪದಲ್ಲಿ ತೆಗೆದುಕೊಳ್ಳುತ್ತಿದ್ದಾರೆ.

. ಅವರ ಸಂಪರ್ಕಕ್ಕೆ ಬರುವ ಸಾಧಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳ ವಾಟ್ಸ್‌ಆಪ್ ಗ್ರೂಪ್ ಮಾಡಿಕೊಂಡು ಹೆಚ್ಚು ಹೆಚ್ಚು ಜನರನ್ನು ಒಟ್ಟುಗೂಡಿಸಲು ಮತ್ತು ತಮ್ಮ ಅನುಯಾಯಿಗಳನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ.

ಸನಾತನದ ಪರಿಚಯವನ್ನು ದುರುಪಯೋಗಿಸಿಕೊಂಡು ತಮ್ಮ ಘನತೆಯನ್ನು ಎತ್ತರಿಸಲು ಪ್ರಯತ್ನಿಸುವುದು ಮತ್ತು ಅದರಿಂದ ಆರ್ಥಿಕ ಲಾಭವನ್ನು ಪಡೆಯುವುದು ಈ ಸ್ವಾಮಿಗಳ ಕಾರ್ಯ ಪದ್ಧತಿಯಾಗಿದೆ. ಹಾಗಾಗಿ ಈ ರೀತಿಯಲ್ಲಿ ಯಾರಾದರೂ ಸನಾತನದ ಸಾಧಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳ ಪರಿಚಯವನ್ನು ದುರುಪಯೋಗಿಸಿಕೊಳ್ಳುತ್ತಿದ್ದರೆ ಅವರ ಸಂಪರ್ಕದಲ್ಲಿರಬಾರದು. ಅದೇ ರೀತಿ ಈ ಸ್ವಾಮಿಯವರ ವಿಷಯದಲ್ಲಿ ಏನಾದರೂ ಅನುಭವವಿದ್ದಲ್ಲಿ ಅದನ್ನು ಕೆಳಗೆ ಕೊಟ್ಟಿರುವ ವಿಳಾಸಕ್ಕೆ ತಿಳಿಸಬೇಕು. ಇದರಿಂದ ಅವರ ಮೇಲೆ ಕಾನೂನುರೀತ್ಯಾ ಕ್ರಮಕೈಗೊಳ್ಳಲು ಸುಲಭವಾಗುವುದು.

ಸೌ. ಭಾಗ್ಯಶ್ರೀ ಸಾವಂತ,

ಸಂಚಾರಿವಾಣಿ ಸಂಖ್ಯೆ. 7058885610

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o  ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್ – 403401