ಗುರುಕಾರ್ಯಕ್ಕಾಗಿ ಅರ್ಪಣೆ ರೂಪದಲ್ಲಿ ದೊರೆತ ಧನವನ್ನು ಅಪವ್ಯಯ ಮಾಡುವವರ ಮಾಹಿತಿ ತಿಳಿಸಿ

ಸಾಧಕರಿಗೆ ಸೂಚನೆ ಮತ್ತು ವಾಚಕರು ಹಾಗೂ ಹಿತಚಿಂತಕರಿಗೆ ವಿನಂತಿ

ಅನೇಕ ಹಿತಚಿಂತಕರು ಸನಾತನದ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ಆಯಾ ಸಮಯದಲ್ಲಿ ಧನ ಅಥವಾ ವಸ್ತು ಸ್ವರೂಪದಲ್ಲಿ ಅರ್ಪಣೆ ನೀಡುತ್ತಿರುತ್ತಾರೆ. ಈ ಅರ್ಪಣೆಯನ್ನು ಯೋಗ್ಯ ಸ್ಥಳಕ್ಕೆ ತಲುಪಿಸುವುದು ಪ್ರತಿಯೊಬ್ಬ ಸಾಧಕನ ಕರ್ತವ್ಯವಾಗಿರುತ್ತದೆ. ಒಂದೆಡೆ ಮಾತ್ರ ಈ ಅರ್ಪಣೆಯ ಅಪವ್ಯಯವಾಗಿರುವುದು ಗಮನಕ್ಕೆ ಬಂದಿದೆ. ಸನಾತನದೊಂದಿಗೆ ಇತ್ತೀಚೆಗೆ ಜೋಡಣೆಯಾದ ಒಬ್ಬ ಕಾರ್ಯಕರ್ತನಿಗೆ ಓರ್ವ ಧರ್ಮಪ್ರೇಮಿಯು ಸಂಸ್ಥೆಗಾಗಿ ಧನ ಸ್ವರೂಪದಲ್ಲಿ ಅರ್ಪಣೆ ನೀಡಿದ್ದರು; ಆದರೆ ಆ ಕಾರ್ಯಕರ್ತನು ಈ ಅರ್ಪಣೆಯನ್ನು ಸನಾತನದ ಜವಾಬ್ದಾರ ಸಾಧಕರಲ್ಲಿ ಜಮೆ ಮಾಡದೇ ಪರಸ್ಪರ ತನಗಾಗಿ ಖರ್ಚು ಮಾಡಿದನು ಹಾಗೂ ಧರ್ಮಪ್ರೇಮಿಗೆ ಪಾವತಿಯನ್ನೂ ನೀಡಲಿಲ್ಲ. ಈ ಕಾರ್ಯಕರ್ತನಲ್ಲಿ ನೀಡಿದ ಅರ್ಪಣೆಯ ಬಗ್ಗೆ ಸಂಬಂಧಿತ ಧರ್ಮಪ್ರೇಮಿಯು ಸನಾತನದ ಜವಾಬ್ದಾರ ಸಾಧಕರಿಗೆ ತಿಳಿಸಿದಾಗ ಈ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಅನಂತರ ಸಂಸ್ಥೆಯು ಸಂಬಂಧಿತ ಕಾರ್ಯಕರ್ತನಿಂದ ಈ ಹಣವನ್ನು ವಸೂಲು ಮಾಡಿತು ಮತ್ತು ಧರ್ಮಪ್ರೇಮಿಗೂ ಅರ್ಪಣೆಯ ಪಾವತಿ ನೀಡಿತು. ತಮ್ಮಲ್ಲಿ ಯಾರಿಗಾದರೂ ಇಂತಹ ಅನುಭವ ಬಂದಿದ್ದಲ್ಲಿ ಅಥವಾ ಯಾರಾದರೂ ಸನಾತನ ಸಂಸ್ಥೆಯ ಹೆಸರಿನಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕೆ ಪಡೆದ ಧನವನ್ನು ಅಪವ್ಯಯ ಮಾಡಿ ಅರ್ಪಣೆದಾರರಿಗೆ ವಂಚಿಸುತ್ತಿರುವುದು ಗಮನಕ್ಕೆ ಬಂದಿದ್ದಲ್ಲಿ ಸಂಬಂಧಿತರು ಕೂಡಲೇ ಸಂಸ್ಥೆಯ ಜವಾಬ್ದಾರ ಸಾಧಕರಿಗೆ ತಿಳಿಸಬೇಕೆಂದು ವಿನಂತಿ ! – ಶ್ರೀ. ವಿರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೨೬.೬.೨೦೨೧)