ತಮ್ಮ ಮೃತ್ಯುಪತ್ರವನ್ನು (ಇಚ್ಛಾಪತ್ರವನ್ನು) ಸಿದ್ಧಪಡಿಸಿರಿ ಮತ್ತು ಅದರಿಂದಾಗುವ ಲಾಭವನ್ನು ಗಮನದಲ್ಲಿರಿಸಿ ಸಂಭಾವ್ಯ ಅಡಚಣೆಗಳನ್ನು ತಡೆಗಟ್ಟಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಮಾನವ ಜೀವನ ಕ್ಷಣಿಕವಾಗಿದೆ ಹಾಗೂ ಸದ್ಯದ ವಾತಾವರಣವೂ ತುಂಬಾ ಅಸುರಕ್ಷಿತವಾಗಿದೆ. ಹೆಚ್ಚಿನ ಆಡಳಿತ ವ್ಯವಸ್ಥೆಗಳು ಕೂಡ ನಿಷ್ಕ್ರಿಯವಿದ್ದು ಸಂಭವನೀಯ ಆಪತ್ಕಾಲ ಅತೀ ಸಮೀಪಕ್ಕೆ ಬಂದಿದೆ. ಇವೆಲ್ಲ ಘಟಕಗಳ ವಿಚಾರ ಮಾಡಿದಾಗ ‘ನಾವು ಜೀವಮಾನವಿಡೀ ಕಷ್ಟ ಪಟ್ಟು ಸಂಗ್ರಹಿಸಿದ ಸಂಪತ್ತನ್ನು (ಸ್ಥಿರ, ಚಲ (ಧನ, ಶೆಯರ್ಸ್, ಚಿನ್ನ,ಬೆಳ್ಳಿ ಇತ್ಯಾದಿ) ತನ್ನ ನಂತರ ಯಾರು ಹಾಗೂ ಹೇಗೆ ಹಂಚಿಕೊಳ್ಳಬೇಕು ?, ಎನ್ನುವುದರ ನಿರ್ಣಯವನ್ನು ತಾವೆ ಇಚ್ಛಾಪತ್ರದ ಮೂಲಕ (ಮೃತ್ಯುಪತ್ರದ ಮೂಲಕ) ಸ್ವತಃ ಸ್ಪಷ್ಟಪಡಿಸಿದರೆ ‘ಮುಂದೆ ಆ ಸಂಪತ್ತು ಏನಾಗುವುದೋ ?, ಎನ್ನುವುದರ ಚಿಂತೆ ನಮಗಿರುವುದಿಲ್ಲ.

೧. ಇಚ್ಛಾಪತ್ರವನ್ನು ಸಿದ್ಧಪಡಿಸಿ ಇಡುವುದರಿಂದಾಗುವ ಲಾಭ

ಅ. ತಮ್ಮ ಆಸ್ತಿಪಾಸ್ತಿಯಿಂದಾಗಿ ಸಂಬಂಧಿಕರಲ್ಲಿ ಉಂಟಾಗುವ ವಿವಾದ ಮತ್ತು ಅದರಿಂದಾಗುವ ತೊಂದರೆಗಳನ್ನು ತಪ್ಪಿಸಬಹುದು.

. ‘ಸ್ವತಃ ಕಷ್ಟಪಟ್ಟು ಗಳಿಸಿದ ಸಂಪತ್ತು ಯೋಗ್ಯವಾದ ವ್ಯಕ್ತಿಯ ಕೈಗೆ ಹೋಗುವುದು, ಎಂಬ ಸಮಾಧಾನ ಲಭಿಸುತ್ತದೆ.

. ತಮ್ಮ ವಾರಸುದಾರರು ಇದ್ದರೆ ಅಥವಾ ಇಲ್ಲದಿದ್ದರೆ ‘ಯಾವುದೇ ಕಾರಣದಿಂದ ಎಲ್ಲ ಸಂಬಂಧವನ್ನು ಮುರಿದಿರುವಂತಹ ಸಂಬಂಧಿಕರೂ ಮರಣದ ನಂತರ ಸಂಪತ್ತನ್ನು ಕಬಳಿಸುವ ಅಪಾಯವನ್ನು ಇಚ್ಛಾಪತ್ರವನ್ನು ಮಾಡಿ ಇಡುವುದರಿಂದ ತಪ್ಪಿಸಬಹುದು.

ನ್ಯಾಯವಾದಿ ನೀಲೇಶ ಸಾಂಗೋಲಕರ

ಈ. ಇಚ್ಛಾಪತ್ರ ಮಾಡದಿದ್ದರೆ, ದಾರಿ ತಪ್ಪಿರುವ ತಮ್ಮ ಮಕ್ಕಳಲ್ಲಿ ಯಾರಾದರೂ ಅಥವಾ ಸಂಬಂಧಿಕರು ತಮ್ಮ ಮರಣದ ನಂತರ ಆಸ್ತಿಯಲ್ಲಿ ಪಾಲು ಕೇಳಬಹುದು ಹಾಗೂ ಅದಕ್ಕಾಗಿ ತಮ್ಮ ಆಪ್ತೇಷ್ಟರು ಕೋರ್ಟ್ ಕಚೇರಿಗೆ ಅನಾವಶ್ಯಕ ಖರ್ಚು ಮಾಡುವ ಮತ್ತು ಅಲೆದಾಡುವ ಕಷ್ಟ ಅನುಭವಿಸಬೇಕಾಗುತ್ತದೆ.

. ನೇರಸಂಬಂಧಿಕರು ಇಲ್ಲದಿದ್ದರೆ, ‘ತಮ್ಮ ನಂತರ ತಮ್ಮ ಆಸ್ತಿಯನ್ನು ಯಾರಿಗೆ ಕೊಡಬೇಕು ?, ಎಂಬುದರ ನಿರ್ಣಯ ವನ್ನು ಮೃತ್ಯುಪತ್ರದ ಮೂಲಕ ನಾವು ಸ್ಪಷ್ಟಪಡಿಸಬಹುದು.

ಊ. ಮೃತ್ಯುಪತ್ರವನ್ನು ಮಾಡಿ ಇತರರಿಗೆ ತಮ್ಮ ಆಸ್ತಿಯಲ್ಲಿನ ಪಾಲನ್ನು ಕೊಟ್ಟರೆ ಅವರಿಗೆ ಕೊಟ್ಟಿರುವ ಆಸ್ತಿಗೆ ಸಂಬಂಧಿಸಿದ ಆದಾಯ ತೆರಿಗೆ ಕಡಿಮೆಯಾಗುತ್ತದೆ.

. ಅನೇಕರಿಗೆ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಧನರೂಪದಲ್ಲಿ ದಾನ ಮಾಡುವ ಇಚ್ಛೆ ಇರುತ್ತದೆ. ಅವರು ಇಚ್ಛಾಪತ್ರದ ಮೂಲಕ ತಮ್ಮ ಆಸ್ತಿಯ ಸ್ವಲ್ಪ ಭಾಗವನ್ನು ಇಂತಹ ಕಾರ್ಯಕ್ಕಾಗಿ ದಾನರೂಪದಲ್ಲಿ ನೀಡಬಹುದು. ಹೀಗೆ ಮಾಡುವುದರಿಂದ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕೆ ತಾವು ಕೈ ಜೋಡಿಸಿದಂತಾಗುತ್ತದೆ.

೨. ಮೃತ್ಯುಪತ್ರವು ಕಾನೂನುಬದ್ಧವಾಗಿ ಆಗಲು ಏನು ಮಾಡಬೇಕು !

ಅ. ಮೃತ್ಯುಪತ್ರವು ಲಿಖಿತ ಸ್ವರೂಪದಲ್ಲಿ (ಹಸ್ತಲಿಖಿತ ಅಥವಾ ಬೆರಳಚ್ಚು) ಇರಲಿ.

. ಮೃತ್ಯುಪತ್ರದ ಮೇಲೆ ಮೃತ್ಯುಪತ್ರವನ್ನು ತಯಾರಿಸಲು ಇಚ್ಛಿಸುವ ವ್ಯಕ್ತಿಯು ವಯೋವೃದ್ಧರಾಗಿದ್ದಲ್ಲಿ ಆ ವ್ಯಕ್ತಿಯ ಸಹಿ ಇರುವುದು ಆವಶ್ಯಕವಾಗಿದೆ. ಅದೇರೀತಿ ಮೃತ್ಯುಪತ್ರದ ಮೇಲೆ ಇಬ್ಬರು ಸಾಕ್ಷಿದಾರರು ಸಹಿ ಮಾಡಿರಬೇಕು.

. ಮೃತ್ಯುಪತ್ರವನ್ನು ತಯಾರಿಸುವ ವಯೋವೃದ್ಧರಿದ್ದರೆ ಅವರು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಮೃತ್ಯುಪತ್ರವನ್ನು ತಯಾರಿಸಲು ಸಕ್ಷಮವಾಗಿದ್ದಾರೆ ಎಂದು ತೋರಿಸಲು ವೈದ್ಯಕೀಯ ಪ್ರಮಾಣಪತ್ರ ಅಗತ್ಯ.

ಈ. ಮೃತ್ಯುಪತ್ರವನ್ನು ಉಪನೋಂದಣಾಧಿಕಾರಿಯ ಕಛೇರಿಯಲ್ಲಿ ನೋಂದಾಯಿಸುವುದರಿಂದ ಮೃತ್ಯುಪತ್ರದ ಸತ್ಯತೆ ಬಗ್ಗೆ ನಿಶ್ಚಿಂತ ವಾಗಿರಬಹುದು.

೩. ಮೃತ್ಯುಪತ್ರದ ಸುರಕ್ಷತೆಯ ದೃಷ್ಟಿಯಿಂದ ಉಪಯುಕ್ತ ಅಂಶಗಳು

ಅ. ಮೃತ್ಯುಪತ್ರದ ಮೂಲ ಪ್ರತಿ ಉಪನೋಂದಣಾಧಿಕಾರಿಯ ಕಛೇರಿಯಲ್ಲಿ ಸುರಕ್ಷತೆಗಾಗಿ ಜಮೆ (legal custody) ಮಾಡಬಹುದು.

ಆ. ತನಗೆ ಸುರಕ್ಷಿತವೆನಿಸುವ ಮತ್ತು ವಿಶ್ವಾಸವುಳ್ಳ ವ್ಯಕ್ತಿಯ ಬಳಿ ಮೃತ್ಯುಪತ್ರವನ್ನಿಡಬಹುದು (ಗೋವಾ ರಾಜ್ಯದಲ್ಲಿ ಮೃತ್ಯುಪತ್ರ ಅನಿವಾರ್ಯವಾಗಿದೆ.)

೪. ತಾವು ಜೀವಂತವಿರುವಾಗ ಮೃತ್ಯುಪತ್ರದಲ್ಲಿ ಬೇಕಾದ ಹಾಗೆ ಬದಲಾವಣೆ ಮಾಡಬಹುದು.

ಈ ಮೇಲಿನ ವಿಷಯವನ್ನು ಗಮನಿಸಿ ಎಲ್ಲರೂ ತಮ್ಮ ಮೃತ್ಯುಪತ್ರವನ್ನು ಶೀಘ್ರಗತಿಯಲ್ಲಿ ಸಿದ್ಧಪಡಿಸಬೇಕು.

– ನ್ಯಾಯವಾದಿ ನೀಲೇಶ ಸಾಂಗೋಲಕರ, ವಕೀಲ ಸಂಘಟಕ, ಹಿಂದೂ ವಿಧಿಜ್ಞ ಪರಿಷತ್ತು (೨೬.೬.೨೦೨೧)

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ನಮೃ ವಿನಂತಿ !

ತಾವು ಜೀವಂತವಿರುವಾಗಲೇ ಮೃತ್ಯುಪತ್ರವನ್ನು ತಯಾರಿಸಿ ತಮ್ಮ ಸಂಪತ್ತು ‘ಸತ್ಪಾತ್ರೆ ದಾನ ಆಗುವ ಹಾಗೆ ಪ್ರಯತ್ನಿಸಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ನಾವು ಜೀವಮಾನವಿಡೀ ಕಷ್ಟಪಟ್ಟು ಸಂಪಾದಿಸಿದ ಹಣವು ನಮ್ಮ ಮರಣದ ನಂತರ ‘ಯೋಗ್ಯ ವ್ಯಕ್ತಿಯ ಕೈಗೆ ಹಾಗೂ ಯೋಗ್ಯ ಕಾರಣಕ್ಕಾಗಿ ವಿನಿಯೋಗವಾಗಿ ಅದು ‘ಸತ್ಪಾತ್ರೆ ದಾನ ಆಗಬೇಕು, ಎನ್ನುವ ಇಚ್ಛೆ ಪ್ರತಿಯೊಬ್ಬರಿಗೂ ಇರುತ್ತದೆ. ನಮ್ಮ ಹಣ ಅಯೋಗ್ಯ ವ್ಯಕ್ತಿಯ ಕೈಗೆ ಹೋದರೆ ಮತ್ತು ಅವನು ಅದನ್ನು ಅಯೋಗ್ಯ ರೀತಿಯಲ್ಲಿ ಉಪಯೋಗಿಸಿದರೆ ಧರ್ಮಶಾಸ್ತ್ರಕ್ಕನುಸಾರ ಅದರಿಂದ ಕೊಡು-ಕೊಳ್ಳುವ ಲೆಕ್ಕಾಚಾರ ನಿರ್ಮಾಣವಾಗುತ್ತದೆ ಮತ್ತು ಅದನ್ನು ತೀರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಾವು ಜೀವಂತವಿರುವಾಗಲೇ ಮೃತ್ಯುಪತ್ರವನ್ನು ತಯಾರಿಸಿಡುವುದು ಆವಶ್ಯಕವಾಗಿದೆ. ಆದ್ದರಿಂದ ಈ ಹಣವು ಯೋಗ್ಯ ವ್ಯಕ್ತಿ, ಸಂತರ ಕಾರ್ಯ ಹಾಗೂ ಧರ್ಮಕಾರ್ಯ (ರಾಷ್ಟ್ರ ಮತ್ತು ಧರ್ಮ ಕಾರ್ಯ) ಕ್ಕಾಗಿ ವಿನಿಯೋಗವಾಗಬಹುದು. ಹೀಗೆ ಮಾಡುವುದು ಒಂದು ರೀತಿ ರಾಷ್ಟ್ರ ಮತ್ತು ಧರ್ಮದ ಸೇವೆಯೇ ಆಗುತ್ತದೆ. ಆದ್ದರಿಂದ ‘ಸತ್ಪಾತ್ರೆ ದಾನವಾಗಿ ಅದರ ಲಾಭವೂ ಆಗುತ್ತದೆ.

‘ಮೃತ್ಯುಪತ್ರವನ್ನು ಮಾಡಿದರೆ ಮರಣ ಬರುತ್ತದೆ, ಎನ್ನುವ ಅಪನಂಬಿಕೆಯು ಸಮಾಜದಲ್ಲಿ ಕಂಡುಬರುತ್ತಿದೆಯಾದರೂ, ನಾವು ಜೀವಂತವಿರುವಾಗಲೇ ನಮ್ಮ ಮೃತ್ಯುಪತ್ರವನ್ನು ತಯಾರಿಸಿ ನಮ್ಮ ಸಂಪಾದನೆಗೆ ಯೋಗ್ಯ ರೀತಿಯಲ್ಲಿ ವ್ಯವಸ್ಥೆ ಮಾಡುವುದರಿಂದ ನಾವು ನಿಶ್ಚಿಂತರಾಗುತ್ತೇವೆ. ಆಪತ್ಕಾಲ ಆರಂಭವಾಗಿರುವುದರಿಂದ ಎಲ್ಲರೂ ತಮ್ಮ ಮೃತ್ಯುಪತ್ರವನ್ನು ಶೀಘ್ರಗತಿಯಲ್ಲಿ ತಯಾರಿಸಬೇಕು ಹಾಗೂ ಅದನ್ನು ಮಾಡುವ ಬಗ್ಗೆ ಪರಸ್ಪರರಿಗೆ ನೆನಪಿಸಬೇಕು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೬.೬.೨೦೨೧)

ಮೃತ್ಯುಪತ್ರದ ನಕಲನ್ನು (ಝೆರಾಕ್ಸ್) ಸುರಕ್ಷಿತವಾಗಿ ಇಡಬೇಕು !

ಮೃತ್ಯುಪತ್ರದ ನಕಲನ್ನು ತೆಗೆದಿಟ್ಟು ಅದು ಅಯೋಗ್ಯ ವ್ಯಕ್ತಿಯ ಕೈಸೇರಿದರೆ ಅದರಲ್ಲಿ ಮಂಡಿಸಿರುವ ವಿಷಯದಿಂದ  ಪರಸ್ಪರರಲ್ಲಿ ವೈಮನಸ್ಸು ನಿರ್ಮಾಣವಾಗಬಹುದು.  ಆದ್ದರಿಂದ ಮೃತ್ಯುಪತ್ರದ ನಕಲನ್ನು ತೆಗೆದಿದ್ದರೆ ಅದನ್ನು ಸುರಕ್ಷಿತ ಸ್ಥಳದಲ್ಲಿಡಬೇಕು.