ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯ ಅಂದರೆ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ !

ಹಿಂದೂಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣ ಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ. ಅದರ ಅಂತರ್ಗತ ವ್ಯಕ್ತಿತ್ವ ವಿಕಸನ, ಅಧ್ಯಾತ್ಮ ಮತ್ತು ಧರ್ಮಶಿಕ್ಷಣ ಇತ್ಯಾದಿಗಳ ಕುರಿತು ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಹಿಂದೂ ಜನಜಾಗೃತಿ ಸಮಿತಿಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿ ಧರ್ಮ ಕಾರ್ಯಕ್ಕಾಗಿ ವಿನಿಯೋಗಿಸಲಿದೆ.

ಸನಾತನದ ಸರ್ವಾಂಗಸ್ಪರ್ಶಿ ೫ ಸಾವಿರದಷ್ಟು ಸಂಖ್ಯೆಯ ಗ್ರಂಥಸಂಪತ್ತು ಎಲ್ಲ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಕಾಶಿಸಲು ಈ ಗ್ರಂಥಗಳ ರಚನೆಯ ವ್ಯಾಪಕ ಸೇವೆಯಲ್ಲಿ ಪಾಲ್ಗೊಳ್ಳಿ !

ಪ್ರಸ್ತುತ ಪಟ್ಟಿಯನ್ನು ಓದಿ ತಮ್ಮಲ್ಲಿನ ಯಾರಿಗಾದರೂ ಯಾವುದಾದರೊಂದು ಅಥವಾ ಕೆಲವು ವಿಷಯಗಳ ಸಂದರ್ಭದಲ್ಲಿ ಅಧ್ಯಯನ(ಜ್ಞಾನ)ವಿದ್ದರೆ ಇಂತಹ ಗ್ರಂಥಗಳ ಪ್ರಾಥಮಿಕ ಸಂಕಲನಕ್ಕಾಗಿ ತಾವು  ಖಂಡಿತವಾಗಿಯೂ ಸಮಯವನ್ನು ಕೊಡಬಹುದು, ಹಾಗೆಯೇ ತಮ್ಮ ಪರಿಚಿತರಲ್ಲಿ ಈ ವಿಷಯಗಳ ಬಗ್ಗೆ ತಿಳಿದವರಿದ್ದರೆ, ಅವರನ್ನೂ ಈ ಗ್ರಂಥಗಳ ಸೇವೆಯಲ್ಲಿ ಸಹಭಾಗಿಯಾಗಲು ತಾವು ಕರೆ ನೀಡಬಹುದು.

ಸಾಧಕರೇ, ಪ್ರತಿಕ್ಷಣವನ್ನು ಸಾಧನೆಗಾಗಿಯೇ ಉಪಯೋಗಿಸಿ ಸಾಧನೆಯ ಫಲಶೃತಿಯನ್ನು ಹೆಚ್ಚಿಸಿ ಮತ್ತು ಆಧ್ಯಾತ್ಮಿಕ ಉನ್ನತಿಯ ಧ್ಯೇಯವನ್ನು ಶೀಘ್ರದಲ್ಲಿ ಸಾಧ್ಯಮಾಡಿಕೊಳ್ಳಿರಿ !

‘ಪರಾತ್ಪರ ಗುರು ಡಾ. ಆಠವಲೆ ಯವರ ಕೃಪೆಯಿಂದ ಎಲ್ಲ ಸಾಧಕರಿಗೆ ಸದ್ಯದ ಭೀಕರ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡಿ ಜೀವನ್ಮುಕ್ತ ವಾಗುವ ಅಮೂಲ್ಯ ಅವಕಾಶವು ಲಭಿಸಿದೆ. ಆಧ್ಯಾತ್ಮಿಕ ಉನ್ನತಿಯ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸುವ ಧ್ಯೇಯವನ್ನು ಗಮನದಲ್ಲಿಟ್ಟು ‘ತಮ್ಮ ಪ್ರತಿಯೊಂದು ಕ್ಷಣವನ್ನು ವ್ಯಷ್ಟಿ-ಸಮಷ್ಟಿ ಸಾಧನೆಗಾಗಿ ಕೊಡುತ್ತಿದ್ದೇವಲ್ಲ,

ಸನಾತನದ ರಾಮನಾಥಿ ಆಶ್ರಮ, ಹಾಗೆಯೇ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೋಟಗಾರಿಕೆ ಸೇವೆಯನ್ನು ಮಾಡಲು ಮನುಷ್ಯಬಲದ ಅವಶ್ಯಕತೆ !

‘ಸನಾತನದ ರಾಮನಾಥಿ ಆಶ್ರಮದ ಪರಿಸರದಲ್ಲಿ ವಿವಿಧ ಔಷಧಿ ವನಸ್ಪತಿಗಳು, ಹಣ್ಣುಗಳು, ಹೂವುಗಳು ಮುಂತಾದವುಗಳ ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆಯನ್ನು ಮಾಡಲಾಗಿದೆ. ಈ ಗಿಡಗಳನ್ನು ಮಂಗಗಳಿಂದ ರಕ್ಷಿಸುವುದು, ಗಿಡಗಳ ಸಂರಕ್ಷಣೆ ಮಾಡುವುದು, ಔಷಧಿ ವನಸ್ಪತಿಗಳ ಸಸಿಗಳನ್ನು ತಯಾರು ಮಾಡುವುದು, ಹೊಸ ಹೂವುಗಳ ಗಿಡಗಳ ತೋಟಗಾರಿಕೆ ಈ ಸೇವೆಗಳಿಗಾಗಿ ಸಾಧಕರ ಆವಶ್ಯಕತೆ ಇದೆ.

ಸಾಧಕರೇ, ‘ಕೊರೊನಾ’ ಮಹಾಮಾರಿಯ ಕಾಲವಾಧಿಯಲ್ಲಿ, ಹಾಗೆಯೇ ಮುಂಬರುವ ಭೀಕರ ಆಪತ್ಕಾಲದಲ್ಲಿ ಮೃತವ್ಯಕ್ತಿಯ ಮೇಲೆ ಅಗ್ನಿಸಂಸ್ಕಾರ ಮಾಡುವ ಸಂದರ್ಭದಲ್ಲಿ ಮುಂದಿನ ಅಂಶಗಳನ್ನು ಗಮನದಲ್ಲಿಡಿ !

‘ವ್ಯಕ್ತಿ ಮೃತನಾದ ಬಳಿಕ ಧರ್ಮಶಾಸ್ತ್ರಕ್ಕನುಸಾರ ಸ್ಮಶಾನದಲ್ಲಿ ಅವನ ಶವದ ಮೇಲೆ ಮಂತ್ರೋಚ್ಚಾರಪೂರ್ವಕ ಅಗ್ನಿಸಂಸ್ಕಾರವಾಗುವುದು ಆವಶ್ಯಕವಾಗಿರುತ್ತದೆ. ಸದ್ಯ ‘ಕೊರೊನಾ’ ಮಹಾಮಾರಿಯ ಜಾಗತಿಕ ಸಂಕಟದಿಂದಾಗಿ ದೊಡ್ಡ ಪ್ರಮಾಣದಲ್ಲಿ ಜನರು ಮರಣಹೊಂದುತ್ತಿದ್ದಾರೆ.

‘ನಿರ್ವಿಚಾರ’ ನಾಮಜಪವು ಎಲ್ಲ ಮಟ್ಟದ ಸಾಧಕರಿಗಾಗಿ ಏಕಿದೆ ?

‘ನಿರ್ವಿಚಾರ’ ಈ ನಾಮಜಪವು ‘ನಿರ್ಗುಣ’ ಸ್ಥಿತಿಗೆ ಕರೆದೊಯ್ಯುತ್ತದೆ. ಆದುದರಿಂದ ಕುಲದೇವತೆಯ ನಾಮಜಪವನ್ನು ಮಾಡುವ ಸಾಧಕರಿಗೆ ಅಥವಾ ಶೇ. ೬೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ಈ ನಾಮಜಪವನ್ನು ಮಾಡುವುದು ಕಠಿಣವಾಗಬಹುದು. ಇದಕ್ಕಾಗಿ ಅವರು ತಮ್ಮ ಯಾವಾಗಲೂ ಮಾಡುವ ಜಪದೊಂದಿಗೆ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು.

‘ಕೊರೋನಾ’ದ ಹೆಚ್ಚುತ್ತಿರುವ ಸೋಂಕಿನಿಂದ ಮೃತ್ಯುಭಯವು ನಿರ್ಮಾಣವಾದರೆ ಆ ಕುರಿತು ಶಾರೀರಿಕ, ಮಾನಸಿಕ, ಮತ್ತು ನಾಮಜಪಾದಿ ಉಪಾಯಗಳನ್ನು ಮಾಡಿ ಅದನ್ನು ದೂರ ಮಾಡಿರಿ !

‘ಪ್ರಸ್ತುತ ಭಾರತ ಸಹಿತ ಇತರ ಕೆಲವು ದೇಶಗಳಲ್ಲಿ ‘ಕೊರೋನಾ’ ಈ ಸಾಂಕ್ರಾಮಿಕ ವಿಷಾಣುಗಳ ಸೋಂಕಾಗಿದೆ. ಇದರಿಂದ ಎಲ್ಲೆಡೆಯ ಜನಜೀವನವು ಹದಗೆಟ್ಟು ಜನಸಾಮಾನ್ಯರಲ್ಲಿ ಭಯದ ವಾತಾವರಣವು ಸೃಷ್ಟಿಯಾಗಿದೆ. ಸಮಾಜದಲ್ಲಿ ಅನೇಕರ ಮನಸ್ಸಿನಲ್ಲಿ ಮೃತ್ಯುಭಯವು ಸೃಷ್ಟಿಯಾಗಿದೆ.

ಕೊರೋನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ಪ್ರತಿರೋಧಕ್ಷಮತೆ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಶಕ್ತಿ ಸಿಗಲು ‘ಶ್ರೀ ದುರ್ಗಾದೇವಿ, ಶ್ರೀ ದತ್ತ ಮತ್ತು ಶಿವ’ ಈ ದೇವತೆಗಳ ಒಟ್ಟಿಗಿನ ನಾಮಜಪವನ್ನು ಧ್ವನಿವರ್ಧಕದಲ್ಲಿ ಎಲ್ಲೆಡೆ ಹಾಕಲು ಆಯೋಜನೆ ಮಾಡಿ !

‘ನಾಮಜಪವು ಕೇವಲ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರದೇ ಅದು ವಿವಿಧ ರೋಗಗಳ ನಿರ್ಮೂಲನೆಗಾಗಿಯೂ ಲಾಭದಾಯಕವಾಗಿರುತ್ತದೆ, ಎಂಬುದು ಸಾಬೀತಾಗಿದೆ. ಪ್ರಸ್ತುತ ಕೊರೋನಾ ಮಹಾಮಾರಿಯ ಕಾಲಾವಧಿಯಲ್ಲಿ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಸಮಾಜದಲ್ಲಿ ಯೋಗಾಸನಗಳು, ಪ್ರಾಣಾಯಾಮ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಪ್ರಯತ್ನಗಳು ಆಗುತ್ತಿವೆ.