ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ದೈವೀ ಬಾಲಕರು ಮತ್ತು ಯುವ ಸಾಧಕರ ಪೋಷಕರಿಗೆ ಸೂಚನೆ !

ರಾಮನಾಥಿ ಆಶ್ರಮದ ಸಂಕಲನ ವಿಭಾಗಕ್ಕೆ ಅನೇಕ ಜಿಲ್ಲೆಗಳ ಪಾಲಕರಿಂದ ತಮ್ಮ ಮಕ್ಕಳ ಕುರಿತು ಲೇಖನಗಳು ಮುದ್ರಿಸಲು ಬರುತ್ತದೆ. ಅನೇಕ ಸಲ ಸೂಚನೆಯನ್ನು ನೀಡಿಯೂ, ಅವರ ಲೇಖನಗಳಲ್ಲಿ ಬಹಳಷ್ಟು ಮಾಹಿತಿಗಳು ಅಪೂರ್ಣವಿರುತ್ತದೆ. ಉದಾ. ಬಾಲಕರ ಪೂರ್ಣ ಹೆಸರು, ವಯಸ್ಸು, ಊರಿನ ಹೆಸರು ಮತ್ತು ಜಿಲ್ಲೆಯ ಹೆಸರು ಇರುವುದಿಲ್ಲ. ಇದರಿಂದ ಈ ಮಾಹಿತಿಗಳನ್ನು ಕ್ರೋಢೀಕರಿಸುವಲ್ಲಿ ಸಂಬಂಧಿಸಿದ ಸಾಧಕರ ಬಹಳಷ್ಟು ಸಮಯ ನೀಡಬೇಕಾಗುತ್ತದೆ. ಆದುದರಿಂದ ಪೋಷಕರು ದಯವಿಟ್ಟು ಮುಂದೆ ತಿಳಿಸಿರುವ ಅಂಶಗಳಿಗನುಸಾರ ಸಂಕಲನ ವಿಭಾಗಕ್ಕೆ ಮಾಹಿತಿಯನ್ನು ಕಳುಹಿಸಬೇಕು.

೧. ಮಾಹಿತಿ ಕಳುಹಿಸುವ ಪರಿಶೀಲನಾ ಪಟ್ಟಿ

ಅ. ಬಾಲಕ ಅಥವಾ ಬಾಲಕಿಯ ಸಂಪೂರ್ಣ ಹೆಸರು, ಊರು, ಜಿಲ್ಲೆ ಮತ್ತು ರಾಜ್ಯ

ಆ. ಜನ್ಮ ದಿನಾಂಕ, ಜನ್ಮ ತಿಥಿ, ನಿಖರ ಜನ್ಮ ಸಮಯ, ಜನ್ಮಸ್ಥಳ (ಊರು, ತಾಲೂಕು ಮತ್ತು ಜಿಲ್ಲೆ)

ಇ. ಲೇಖನ ಕಳುಹಿಸುವ ಪೋಷಕರ ಹೆಸರು, ಮಗುವಿನೊಂದಿಗೆ ಅವರ ಸಂಬಂಧ, ಲೇಖನದ ದಿನಾಂಕ ಮತ್ತು ಪೋಷಕರ ಸಂಚಾರವಾಣಿ ಕ್ರಮಾಂಕ ಬರೆದಿರಬೇಕು.

ಈ. ಲೇಖನಗಳನ್ನು ಕಳುಹಿಸುವಾಗ ಈ ಹಿಂದೆ ಆಧ್ಯಾತ್ಮಿಕ ಮಟ್ಟವನ್ನು ತೆಗೆದಿದ್ದರೆ ಪೋಷಕರು ಅದನ್ನು ಮತ್ತು ಅದರ ವರ್ಷವನ್ನು ಲೇಖನದಲ್ಲಿ ನಮೂದಿಸಬೇಕು.

೨. ದೈವೀ ಬಾಲಕರ ಲೇಖನದಲ್ಲಿ ಯಾವ ಅಂಶಗಳು ಇರಬೇಕು ?

ಅ. ಗುಣವೈಶಿಷ್ಟ್ಯಗಳನ್ನು ಕಳುಹಿಸುವಾಗ ಪೋಷಕರು ಮಗುವಿನ ಆಯಾ ಸಮಯದ ವಯಸ್ಸಿನ, ಉದಾ. ವಯಸ್ಸು ೧ ರಿಂದ ೬ ತಿಂಗಳು, ೬ ತಿಂಗಳಿನಿಂದ ೧ ವರ್ಷ ಈ ರೀತಿ ತಪ್ಪದೇ ಉಲ್ಲೇಖಿಸಬೇಕು.

. ಮಗುವಿನ ಗುಣವೈಶಿಷ್ಟ್ಯಗಳ ವಿಷಯಗಳ ಬಗ್ಗೆ (ಮೊದಲು ಬರೆದು ಕೊಟ್ಟಿದ್ದರೆ ಆ ವೈಶಿಷ್ಟ್ಯಗಳಲ್ಲಿ ಏನಾದರೂ ಬದಲಾವಣೆ ಕಂಡು ಬರುತ್ತಿದೆಯೇ ? ಮತ್ತು ಹೊಸದಾದ ಗುಣವೈಶಿಷ್ಟ್ಯಗಳ ವಿಷಯದಲ್ಲಿ) ಸ್ಪಷ್ಟವಾಗಿ (ಪ್ರಸಂಗ ಸಮೇತ) ಬರೆಯಬೇಕು.

. ಬಾಲಸಾಧಕರು ಈಗ ವ್ಯಷ್ಟಿ ಸಾಧನೆಯೆಂದು ಏನೆಲ್ಲ ಮಾಡುತ್ತಿದ್ದಾರೆ ? ಹಾಗೆಯೇ ನಿಯಮಿತವಾಗಿ ಯಾವ ಸೇವೆಯನ್ನು ಮಾಡುತ್ತಾರೆ ?

ಈ. ಬಾಲಕರಿಗೆ ಬಂದಿರುವ ವೈಶಿಷ್ಟ್ಯಪೂರ್ಣ ಅನುಭೂತಿ

. ಧರ್ಮಾಚರಣೆ ಮಾಡುವುದು ಅಥವಾ ವಿಡಂಬನೆ ನಿಲ್ಲಿಸುವುದು ಮುಂತಾದ ವಿಷಯದಲ್ಲಿ ಕೃತಿಯ ಸ್ತರದಲ್ಲಿ ಮಾಡಿದ ಪ್ರಯತ್ನಗಳು

. ಬಾಲಕನಲ್ಲಿರುವ ಶ್ರದ್ಧೆ, ಭಾವ ಇತ್ಯಾದಿ ವ್ಯಕ್ತವಾಗುವಂತಹ ಪ್ರಸಂಗಗಳು

. ಸಂತರು ಬಾಲಕನ ವಿಷಯದಲ್ಲಿ ಏನಾದರೂ ಉದ್ಗಾರ ತೆಗೆದಿದ್ದರೆ ಅಥವಾ ಹೊಗಳಿಕೆ ವ್ಯಕ್ತಪಡಿಸಿದ್ದರೆ ಆ ವಿಷಯದಲ್ಲಿ ಸ್ವಲ್ಪದರಲ್ಲಿ ಮಾಹಿತಿ.

. ಅವರ ವಿಷಯದಲ್ಲಿ ಗಮನಕ್ಕೆ ಬಂದ ಇನ್ನಿತರ ಮಹತ್ವಪೂರ್ಣ ಅಂಶಗಳು

. ಬಾಲಕನಲ್ಲಿ ಗಮನಕ್ಕೆ ಬರುವ ಸ್ವಭಾವದೋಷ ಮತ್ತು ದೋಷವನ್ನು ದೂರಗೊಳಿಸಲು ಅವನು ಮಾಡುತ್ತಿರುವ ಪ್ರಯತ್ನ.

ಬಹಳಷ್ಟು ಪೋಷಕರು ಪ್ರತಿವರ್ಷ ಬಾಲಕನ ಹುಟ್ಟುಹಬ್ಬದಂದು ಲೇಖನವನ್ನು ಕಳಿಸುತ್ತಾರೆ. ಇಂತಹ ಲೇಖನಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ‘ಸನಾತನ ಪ್ರಭಾತ ಪತ್ರಿಕೆಯಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಲೇಖನವನ್ನು ಪ್ರಕಟಿಸಲು ಸ್ಥಳಾವಕಾಶದ ಕೊರತೆಯಾಗುತ್ತಿದೆ. ಆದುದರಿಂದ ಪ್ರತಿವರ್ಷ ಇಂತಹ ಲೇಖನವನ್ನು ಕಳುಹಿಸಬಾರದು. ವೈಶಿಷ್ಟ್ಯಪೂರ್ಣ ಲೇಖನಗಳಿದ್ದರೆ ೩-೪ ವರ್ಷಗಳಾದ ಬಳಿಕ ಕಳುಹಿಸಬೇಕು. ಯಾವ ಪೋಷಕರು ಇಲ್ಲಿಯವರೆಗೆ ಒಮ್ಮೆಯೂ ತಮ್ಮ ಮಗುವಿನ ಗುಣವೈಶಿಷ್ಟ್ಯಗಳನ್ನು ಸಂಕಲನ ವಿಭಾಗಕ್ಕೆ ಕಳುಹಿಸಿರುವುದಿಲ್ಲವೋ, ಅವರೂ ಕೂಡ ಮೇಲಿನ ಅಂಶಗಳನ್ನು ಅಭ್ಯಾಸ ಮಾಡಿ ಬಾಲಕನ ಅವಾಸ್ತವ ಲೇಖನವನ್ನು ಕಳುಹಿಸದೇ ವೈಶಿಷ್ಟ್ಯಪೂರ್ಣ ಲೇಖನವನ್ನು ಕಳುಹಿಸಬೇಕು. ಮಗುವಿನ ಹುಟ್ಟುಹಬ್ಬದಂದು ಗುಣವೈಶಿಷ್ಟ್ಯಗಳನ್ನು ಪ್ರಕಟಿಸಬೇಕಾಗಿದ್ದರೆ ಪೋಷಕರು ಕನಿಷ್ಟ ಪಕ್ಷ ೩ ವಾರ ಮೊದಲು ಗ್ರಂಥ ವಿಭಾಗಕ್ಕೆ ಲೇಖನವನ್ನು ಕಳುಹಿಸಬೇಕು.

೩. ಮಹತ್ವದ ಸೂಚನೆ

ಇದರೊಂದಿಗೆ ಬಾಲಕನ ೨-೩ ವಿಧದ ಅಂದರೆ, ದೃಷ್ಟಿ ನೇರವಾಗಿರುವ, ನಗುತ್ತಿರುವ ಮತ್ತು ಕೆಳಗಿನ ದವಡೆ ಕಾಣಿಸದ ಮುಖವಿರುವ ಮತ್ತು ಇತ್ತೀಚೆಗೆ ತೆಗೆದಿರುವ ಸಾತ್ತ್ವಿಕ ಛಾಯಾಚಿತ್ರಗಳನ್ನು ಕಳುಹಿಸಬೇಕು. ಅದು ಶಾಲೆಯ ಸಮವಸ್ತ್ರದಲ್ಲಿ ಅಥವಾ ಇತರ ಉಡುಪಿನಲ್ಲಿ ತೆಗೆಯದೇ ಸಾತ್ತ್ವಿಕ ಪೋಷಾಕಿನಲ್ಲಿ ತೆಗೆಯಬೇಕು. ಅದರ ಹಿಂಬದಿಗೆ ಸಾಮಾನ್ಯ ಇರಬೇಕು. ಬಾಲಕನ ಛಾಯಾಚಿತ್ರದೊಂದಿಗೆ ಲೇಖನವನ್ನು ಕಳುಹಿಸುವ ಪೋಷಕರು ಮತ್ತು ಸಂಬಂಧಿಕರು ಕೂಡ ತಮ್ಮ ಸಾತ್ತ್ವಿಕ ಛಾಯಾಚಿತ್ರಗಳನ್ನು ಕಳುಹಿಸಬೇಕು.

೪. ಮಾಹಿತಿ ಕಳುಹಿಸುವ ಗಣಕೀಯ ವಿಳಾಸ

ಪೋಷಕರು ತಮ್ಮ ಮಗುವಿನ ಛಾಯಾಚಿತ್ರಗಳನ್ನು ಮತ್ತು ಎಲ್ಲ ಮಾಹಿತಿಯನ್ನು ರಾಮನಾಥಿ ಆಶ್ರಮಕ್ಕೆ ಗಣಕೀಯ ವಿಳಾಸ [email protected] ಇದಕ್ಕೆ ಕಳುಹಿಸಬೇಕು. ಪೋಷಕರಿಗೆ ಸಾಧ್ಯವಿಲ್ಲದಿದ್ದರೆ ಈ ಮಾಹಿತಿಯನ್ನು ಜಿಲ್ಲೆಯ ಸಾಧಕರು/ ಜಿಲ್ಲಾ ಸೇವಕರು ಕಳುಹಿಸಬೇಕು.

ಅಂಚೆ ವಿಳಾಸ : ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ 403401.

– ಗ್ರಂಥ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೭.೨೦೨೧)