ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ರಾಜಕೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಯಾರಿಂದಾದರೂ ಹಣ ಅಥವಾ ಪದವಿ ದೊರೆಯುವುದಾದರೆ ತಕ್ಷಣ ಇನ್ನೊಂದು ಪಕ್ಷಕ್ಕೆ ಹೋಗಿಬಿಡುತ್ತಾರೆ. ಇದಕ್ಕೆ ವಿರುದ್ಧವಾಗಿ ಭಕ್ತನು ಭಗವಂತನ ಪಕ್ಷ ಬಿಟ್ಟು, ಭಗವಂತನ ಚರಣದಲ್ಲಿನ ತನ್ನ ಸ್ಥಾನವನ್ನು ಬಿಟ್ಟು ಇನ್ನೆಲ್ಲಿಗೂ ಹೋಗುವುದಿಲ್ಲ !’

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವಿಜ್ಞಾನವೆಂದರೆ ಶಿಶುವಿಹಾರದ ಶಿಕ್ಷಣ ಅಧ್ಯಾತ್ಮದ ಅಭ್ಯಾಸ ಹಾಗೂ ಸಾಧನೆ ಮಾಡಿದ ನಂತರ ವಿಜ್ಞಾನವು ಶಿಶು ವಿಹಾರದ ಶಿಕ್ಷಣದಂತೆ ಎಂದು ತಿಳಿಯುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಇಂತಹ ಹಿಂದೂಗಳು ಹಿಂದೂ ಧರ್ಮದಲ್ಲಿ ಬೇಡ ಹಿಂದೂಗಳು ಈಶ್ವರಪ್ರಾಪ್ತಿಗಾಗಿ ಅಲ್ಲ ಆರ್ಥಿಕ ಸುಖ- ಸೌಲಭ್ಯಗಳಿಗಾಗಿ ಮತಾಂತರವಾಗುತ್ತಾರೆ. ಅಂತಹವರು ಹಿಂದೂ ಧರ್ಮದಲ್ಲಿ ಇಲ್ಲದಿದ್ದರೆ ಒಳಿತು.

ಯಜ್ಞಸಂಸ್ಕ ತಿ ಕರ್ಮಕಾಂಡವೆಂದರೆ ಸರ್ವೋಚ್ಚ ಮಟ್ಟದ ವಿಜ್ಞಾನದ ಆಚೆಗಿನ ಪ್ರಯೋಗ !

ಹಿಂದೂ ಧರ್ಮದಲ್ಲಿನ ಜನ್ಮದಿಂದ ಮೃತ್ಯುವಿನ ತನಕ ಆಗುವ ವಿವಾಹ, ವಾಸ್ತುಶಾಂತಿ ಇತ್ಯಾದಿ ವಿಧಿ ಹಾಗೂ ಮೃತ್ಯುವಿನ ನಂತರ ಮಾಡಲ್ಪಡುವ ಶ್ರಾದ್ಧವಿಧಿ, ಇವೆಲ್ಲ ಈಶ್ವರಪ್ರಾಪ್ತಿಗಾಗಿ ಪೂರಕವಾಗಿರುವ ವಿಧಿಗಳಾಗಿವೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡುವಾಗ ನಾನು ಮಾಡುತ್ತೇನೆ, ಎಂಬ ಅಹಂ ಇಟ್ಟುಕೊಳ್ಳುವ ಆವಶ್ಯಕತೆಯಿಲ್ಲ. ಏಕೆಂದರೆ ಕಾಲಮಹಿಮೆಗನುಸಾರ ಆ ಕಾರ್ಯವು ಖಂಡಿತವಾಗಿ ಆಗಲಿದೆ. ಆದರೆ ಈ ಕಾರ್ಯದಲ್ಲಿ ಯಾರು ನಿಃಸ್ವಾರ್ಥವಾಗಿ ತನು-ಮನ-ಧನಗಳ ತ್ಯಾಗ ಮಾಡಿ ಸಹಭಾಗಿ ಆಗುವರೋ, ಅವರ ಸಾಧನೆಯಾಗಿ ಅವರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳರು ಹೇಳಿರುವ ಅಮೃತವಚನಗಳು

ಸಾಧನೆಗೆ ಪೋಷಕವಾದ ವಿಚಾರಗಳ ಬೀಜವನ್ನು ವ್ಯಕ್ತಿಯ ಮನಸ್ಸಿನಲ್ಲಿ ಬಿತ್ತಿದರೆ, ಅದು ಇಂದಲ್ಲ ನಾಳೆ ಸಾಧನೆಯ ಸುಂದರ ವೃಕ್ಷವಾಗಿ ಬೆಳೆಯುವುದು, ಈಗ ಯೋಗ್ಯ ಸಮಯಕ್ಕಾಗಿ ಕಾಯಲು ಸಮಯವಿಲ್ಲ. ಪ್ರತಿಕ್ಷಣ ಅಮೂಲ್ಯವಾಗಿದೆ. ವರ್ತಮಾನದಲ್ಲಿ ಸಿಕ್ಕಿದ ಅವಕಾಶವೆ ದೇವರು ಕೊಟ್ಟ ಯೋಗ್ಯ ಸಮಯವೆಂದು ತಿಳಿದು ಮುಂದೆ ಹೋಗಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸರ್ವಸಾಮಾನ್ಯ ವ್ಯಕ್ತಿಗಳು ಏನಾದರೂ ಮಾಡಿದಾಗ ಅದರ ಹಿಂದೆ ಏನಾದರೂ ಸಿಗಬೇಕು, ಎಂಬ ಉದ್ದೇಶ ಇರುತ್ತದೆ. ತದ್ವಿರುದ್ಧ ಸಾಧಕರು ಮಾಡುತ್ತಿರುವ ಪ್ರತಿಯೊಂದು ಕೃತಿಯ ಹಿಂದೆ ಸರ್ವಸ್ವದ ತ್ಯಾಗ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು ಎಂಬ ಉದ್ದೇಶ ಇರುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪಾಶ್ಚಾತ್ಯರಿಗೆ ಸಂಶೋಧನೆಗಾಗಿ ಯಂತ್ರವು ಬೇಕಾಗುತ್ತದೆ ಋಷಿಗಳಿಗೆ ಹಾಗೂ ಸಂತರಿಗೆ ಬೇಕಾಗುವುದಿಲ್ಲ. ಅವರಿಗೆ ಯಂತ್ರಕ್ಕಿಂತ ಅನಂತ ಪಟ್ಟು ಮಾಹಿತಿಯು ಸಿಗುತ್ತದೆ.