* ‘ಸ್ವಾರ್ಥಕ್ಕಾಗಿ ಬೇಡಿಕೆಗಳನ್ನು ಮಾಡುವವರಲ್ಲ, ತ್ಯಾಗ ಮಾಡುವವರೇ ಹಿಂದೂ ರಾಷ್ಟ್ರವನ್ನು ತರುವರು’
* ‘ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಹಣ ಸಿಗುತ್ತದೆ ಎಂದು ಎಲ್ಲರೂ ಆನಂದದಿಂದ ಹೆಚ್ಚು ಸಮಯ (ಓವರ್ ಟೈಮ್) ಕೆಲಸವನ್ನು ಮಾಡುತ್ತಾರೆ; ಆದರೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ೧ ಗಂಟೆ ಸೇವೆಯನ್ನು ಮಾಡಲು ಯಾರೂ ಸಿದ್ಧರಿರುವುದಿಲ್ಲ.’
* ‘ಓರ್ವ ಅಬ್ಜಾಧೀಶನ ಮಗನು ಅವನ ಎಲ್ಲ ಸಂಪತ್ತನ್ನು ಹಾಳು ಮಾಡುವಂತೆ ಹಿಂದೂಗಳ ಹಿಂದಿನ ಪೀಳಿಗೆಗಳು ಎಲ್ಲ ಧರ್ಮ ಸಂಪತ್ತನ್ನು ಮಣ್ಣುಪಾಲು ಮಾಡಿವೆ.’
* ‘ಪಾಶ್ಚಾತ್ಯರಿಗೆ ಸಂಶೋಧನೆಗಾಗಿ ಯಂತ್ರಗಳು ಬೇಕಾಗುತ್ತವೆ. ಋಷಿಗಳಿಗೆ ಮತ್ತು ಸಂತರಿಗೆ ಯಂತ್ರಗಳು ಬೇಕಾಗುವುದಿಲ್ಲ, ಅವರಿಗೆ ಯಂತ್ರಗಳಿಗಿಂತ ಅನೇಕ ಪಟ್ಟು ಹೆಚ್ಚು ಮಾಹಿತಿ ಸಿಗುತ್ತದೆ’.
* ‘ಪ್ರಾಥಮಿಕ ಶಾಲೆಯ ಹುಡುಗನು ಪದವ್ಯೋತ್ತರ ಶಿಕ್ಷಣ ಪಡೆದ ಅಥವಾ ಡಾಕ್ಟರೇಟ್ ಪದವಿಯನ್ನು ಪಡೆದವರೊಂದಿಗೆ ವಾದವಿವಾದ ಮಾಡಿದಂತೆ ಬುದ್ಧಿಜೀವಿಗಳು ಅಧ್ಯಾತ್ಮದ ಅಧಿಕಾರಿ ವ್ಯಕ್ತಿಗಳ ಜೊತೆಗೆ ವಾದ ಮಾಡುತ್ತಾರೆ !’
* ‘ವ್ಯವಹಾರದಲ್ಲಿಯ ತಂದೆ-ತಾಯಿಯರೇ, ಮಾಯೆಯಲ್ಲಿಯ ಮಕ್ಕಳಿಗಿಂತ ಸಾಧಕ ಮಕ್ಕಳು ಹೆಚ್ಚು ಉಪಯುಕ್ತರಾಗಿರುತ್ತಾರೆ ಇದನ್ನು ಗಮನದಲ್ಲಿಡಿ’
* ‘ನಾನು ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಯತ್ನವನ್ನು ಕರ್ಮ ಫಲದ ಅಪೇಕ್ಷೆಯನ್ನು ಇಟ್ಟುಕೊಳ್ಳದೇ ಕರ್ಮಯೋಗದಂತೆ ಮಾಡುತ್ತೇನೆ. ನಾನು ಕರ್ಮಫಲದ ಕಡೆಗೆ ಜ್ಞಾನಯೋಗಕ್ಕನುಸಾರ ಸಾಕ್ಷಿಭಾವದಿಂದ ನೋಡುತ್ತೇನೆ ಮತ್ತು ಭಕ್ತಿಯೋಗದಂತೆ ‘ಎಲ್ಲವೂ ಈಶ್ವರೇಚ್ಛೆಯಿಂದ ಆಗುತ್ತದೆ’, ಎಂಬುದು ತಿಳಿದಿರುವುದರಿಂದ ಕರ್ಮಫಲನ್ಯಾಯದ ವಿಚಾರ ಮಾಡುವುದಿಲ್ಲ; ಹಾಗಾಗಿ ನಾನು ಸದಾ ಆನಂದದಲ್ಲಿರುತ್ತೇನೆ’.
* ‘ಎಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಏನಾಗುವುದು, ಎಂಬುದರ ಅಂದಾಜನ್ನು ಬುದ್ಧಿಯನ್ನು ಉಪಯೋಗಿಸಿ ಹೇಳುವ ಪಾಶ್ಚಾತ್ಯರು ಮತ್ತು ಎಲ್ಲಿ ಯುಗಾನುಯುಗಗಳ ಬಗ್ಗೆ ಹೇಳುವ ಜ್ಯೋತಿಷ್ಯಶಾಸ್ತ್ರ’.
– (ಪರಾತ್ಪರ ಗುರು) ಡಾ. ಆಠವಲೆ