ಎಲ್ಲಿ ‘ಮನೋಲಯ ಮತ್ತು ಬುದ್ಧಿಲಯ ಹೇಗೆ ಮಾಡಬೇಕು ?, ಎಂದು ಕಲಿಸುವ ಹಿಂದೂ ಧರ್ಮ ಮತ್ತು ಎಲ್ಲಿ ಬುದ್ಧಿಯನ್ನೇ ಎಲ್ಲಕ್ಕಿಂತ ಶ್ರೇಷ್ಠ ಎಂದು ತಿಳಿಯುವ ಬುದ್ಧಿಜೀವಿಗಳು !
‘ಹಿಂದೂ ಧರ್ಮದಲ್ಲಿ ‘ಪ್ರತಿಯೊಬ್ಬ ವ್ಯಕ್ತಿಯ ಉದ್ಧಾರವಾಗಬೇಕು’, ಎಂಬ ಉದ್ದೇಶದಿಂದ ನಿಯಮ ಮತ್ತು ಆಚರಣೆಗಳನ್ನು ಹೇಳಲಾಗಿರುತ್ತವೆ. ಈ ಎಲ್ಲ ಶಾಸ್ತ್ರಗಳನ್ನು ಯಾವ ವ್ಯಕ್ತಿಗಳು ಹೇಳಿಲ್ಲ ಅದನ್ನು ವಿವಿಧ ಗ್ರಂಥಗಳಲ್ಲಿ ಕೊಡಲಾಗಿವೆ. ಯಾವುದೇ ಆಚರಣೆಯನ್ನು ‘ಧರ್ಮಶಾಸ್ತ್ರಪ್ರಮಾಣಿತ’ವಾಗಿದ್ದರೆ ಮಾತ್ರ ಅದಕ್ಕೆ ಹಿಂದೂ ಧರ್ಮದಲ್ಲಿ ಮನ್ನಣೆ ನೀಡಲಾಗಿದೆ. ನಿತ್ಯ ಜೀವನದಲ್ಲಿಯ ಒಂದು ಉದಾಹರಣೆ ಎಂದರೆ ‘ದಕ್ಷಿಣ ದಿಕ್ಕಿಗೆ ಕಾಲು ಚಾಚಿ ಮಲಗಬಾರದು. ಇದನ್ನು ಯಾವುದೇ ವ್ಯಕ್ತಿಯು ಹೇಳಿರುವುದಿಲ್ಲ; ಆದರೆ ಇಂದಿಗೂ ಬಹುತೇಕ ಎಲ್ಲ ಹಿಂದೂಗಳು ಈ ನಿಯಮವನ್ನು ಪಾಲಿಸುತ್ತಾರೆ. ಧರ್ಮಶಾಸ್ತ್ರದಲ್ಲಿ ಹೇಳಿರುವ ಇಂತಹ ಆಚರಣೆಗಳಿಂದ ಮನುಷ್ಯನ ಮನೋಲಯ ಮತ್ತು ಬುದ್ಧಿಲಯವಾಗುತ್ತದೆ. ಅದರಿಂದಲೇ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗಿ ಅವನು ಜೀವನ್ಮುಕ್ತನಾಗುತ್ತಾನೆ.
ಸದ್ಯದ ಬುದ್ಧಿಜೀವಿಗಳು ‘ಸಂಕುಚಿತ ಬುದ್ಧಿ’ಯನ್ನೇ ಎಲ್ಲಕ್ಕಿಂತ ಶ್ರೇಷ್ಠ ಎಂದು ತಿಳಿಯುತ್ತಿದ್ದಾರೆ. ಆದುದರಿಂದ ವಿವಿಧ ಬುದ್ಧಿಗೆ ಮೀರಿದ ಘಟನೆಗಳಲ್ಲಿ ಅದು ‘ಏಕೆ ಮತ್ತು ಹೇಗೆ ?’, ಎಂಬ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಜೀವನದಾದ್ಯಂತ ಅದರಲ್ಲಿಯೇ ಸಿಲುಕಿ ಬೀಳುತ್ತಾರೆ.
– (ಪರಾತ್ಪರ ಗುರು) ಡಾ. ಆಠವಲೆ (೧೩.೧೦.೨೦೨೧)
ಪ್ರಕೃತಿಗನುಸಾರ ಸಾಧನೆಯ ಸಂದರ್ಭದಲ್ಲಿರುವ ವ್ಯಕ್ತಿಯ ಪರಸ್ಪರ ವಿರೋಧಿ ವಿಚಾರ
ವಿಚಾರ ೧. ‘ಆರೋಗ್ಯ ಸುಧಾರಿಸಿದರೆ ನಮಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ವಿಚಾರ ೨. ಸಾಧನೆ ಮಾಡಿದರೆ ನಮ್ಮ ಆರೋಗ್ಯ ಸುಧಾರಿಸುತ್ತದೆ
– ಪರಾತ್ಪರ ಗುರು ಡಾ. ಆಠವಲೆ (೧೬.೯.೨೦೨೧)