ಸಂಪ್ರದಾಯ ಸಾಧನೆಯಲ್ಲಿ ಸಿಲುಕಿಕೊಳ್ಳದೇ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿರಿ !
‘ಯಾರಾದರೊಬ್ಬ ಆಧುನಿಕ ವೈದ್ಯನಿಗೆ (ಡಾಕ್ಟರರಿಗೆ) ಒಂದೇ ಔಷಧವು ಗೊತ್ತಿದ್ದರೆ ಆ ಔಷಧಿಯಿಂದ ಎಲ್ಲ ರೋಗಿಗಳು ಗುಣಮುಖವಾಗುವುದಿಲ್ಲ; ಏಕೆಂದರೆ ಕೆಲವು ರೋಗಿಗಳಿಗೆ ಅವರ ಕಾಯಿಲೆಗಳಿಗನುಸಾರ ಬೇರೆ ಔಷಧಿಗಳ ಅವಶ್ಯಕವಿರುತ್ತದೆ. ಸಾಧನೆಯು ಹೀಗೆಯೇ ಇರುತ್ತದೆ. ಎಲ್ಲರಿಗೂ ಒಂದೇ ಸಾಧನಾಮಾರ್ಗವು ಉಪಯೋಗವಾಗುವುದಿಲ್ಲ. ಪ್ರಾರಬ್ಧ, ಹಿಂದಿನ ಜನ್ಮದ ಸಾಧನೆ, ಸಾಧನೆ ಮಾಡುವ ಕ್ಷಮತೆ ಇವುಗಳಂತಹ ವಿವಿಧ ಅಂಶಗಳಿಗನುಸಾರ ಪ್ರತಿಯೊಬ್ಬರ ಸಾಧನೆ ಮಾರ್ಗವು ನಿಶ್ಚಿತವಾಗಿರುತ್ತದೆ. ಬಹುತೇಕ ಸಂಪ್ರದಾಯದವರಿಗೆ ಒಂದೇ ಸಾಧನಾಮಾರ್ಗವು ಗೊತ್ತಿರುವುದರಿಂದ ಅವರು ತಮ್ಮ ಬಳಿಗೆ ಬರುವ ಪ್ರತಿಯೊಬ್ಬನಿಗೆ ಒಂದೇ ಸಾಧನೆಯನ್ನು ಹೇಳುತ್ತಾರೆ. ಇದರಿಂದಾಗಿ ಕಾಲಾಂತರದಿಂದ ಆ ಸಾಧನೆಯ ಪದ್ಧತಿಯಿಂದ ಪರಿವರ್ತನೆ ಆಗದಿರುವುದರಿಂದ ಅನೇಕ ಜನರು ಸಾಧನೆ ಮಾಡುವುದನ್ನು ಬಿಟ್ಟುಕೊಡುತ್ತಾರೆ ಅಥವಾ ಅವರು ಹೇಳಿದ ಸಾಧನೆಯನ್ನು ಮಾಡುತ್ತಿದ್ದರೂ, ಅವರ ಸಾಧನೆಯಲ್ಲಿ ಪ್ರಗತಿ ಆಗುವುದಿಲ್ಲ. ಇದನ್ನು ತಪ್ಪಿಸಲು ಎಲ್ಲ ಸಂಪ್ರದಾಯದವರು ‘ಎಷ್ಟು ವ್ಯಕ್ತಿಗಳೋ, ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನಾಮಾರ್ಗಗಳು’, ಈ ನಿಯಮವನ್ನು ಗಮನದಲ್ಲಿಡಬೇಕು. ಅವರ ಬಳಿಗೆ ಬರುವ ಜಿಜ್ಞಾಸುಗಳಿಗೆ ಅವನಿಗೆ ಅಗತ್ಯವಿರುವ ಸಾಧನೆಯನ್ನು ಕಲಿಸಬೇಕು. ಸನಾತನದ ಸಾವಿರಾರು ಸಾಧಕರಲ್ಲಿ ಯಾರೇ ಇಬ್ಬರ ಸಾಧನೆಯು ಒಂದೇ ರೀತಿ ಇಲ್ಲದಿರುವುದು ಇದಕ್ಕೆ ಒಂದು ಕಾರಣವಾಗಿದೆ’.- (ಪರಾತ್ಪರ ಗುರು) ಡಾ. ಆಠವಲೆ (೭.೯.೨೦೨೧)
ಸನಾತನ ಸಂಸ್ಥೆಯಲ್ಲಿ ಸಾಧಕರ ಸಾಧನೆಯ ಎಲ್ಲ ರೀತಿಯಿಂದ ಕಾಳಜಿಯನ್ನು ತೆಗೆದುಕೊಳ್ಳುತ್ತಿರುವ ಒಂದು ಉದಾಹರಣೆ !
‘ಯಾರು ಪೂರ್ಣವೇಳೆ ಸಾಧನೆ ಮಾಡುವ ಸಾಧಕರ ಮನೆಯಲ್ಲಿ ವೃದ್ಧ ತಂದೆ-ತಾಯಿಗಳಿರುತ್ತಾರೋ, ಅವರು ತಮ್ಮ ತಂದೆ-ತಾಯಿಗಳ ಬಗ್ಗೆ ಇರುವ ಕರ್ತವ್ಯವನ್ನು ನಿಭಾಯಿಸುತ್ತಿರುವಾಗ ಆಶ್ರಮದಲ್ಲಿ ಸೇವೆಗಾಗಿ ಬರಲು ಸಾಧ್ಯವಾಗುವುದಿಲ್ಲ. ಆದುದರಿಂದ ಅವರ ಸಾಧನೆಯ ಮೇಲೆ ಪರಿಣಾಮವಾಗುತ್ತದೆ. ಇಂತಹ ಸಮಯದಲ್ಲಿ ‘ಸಾಧಕರ ಸಾಧನೆ ಮತ್ತು ಸೇವೆಯಲ್ಲಿ ಅಡಚಣೆಯಾಗಬಾರದೆಂದು’, ಅವರ ವೃದ್ಧ ತಂದೆ-ತಾಯಿಗಳಿಗೆ ಆಶ್ರಮದಲ್ಲಿರಲು ಹೇಳಲಾಗುತ್ತದೆ. ಇದರಿಂದಾಗಿ ಸಾಧಕರ ಮತ್ತು ಅವರ ವೃದ್ಧ ತಂದೆ-ತಾಯಿಗಳ ಬಗ್ಗೆ ನಿಶ್ಚಿಂತರಾಗುತ್ತಾರೆ. ಸಾಧಕರಿಗೆ ಸೇವೆ ಮತ್ತು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದುದರಿಂದ ಅವರ ಸಾಧನೆಯಾಗಿ ಅವರು ಸಾಧನೆಯಲ್ಲಿ ಮುಂದೆ ಹೋಗುತ್ತಾರೆ’.- (ಪರಾತ್ಪರ ಗುರು) ಡಾ. ಆಠವಲೆ (೭.೯.೨೦೨೧)
‘ಸಾಧಕರಿಗೆ ಮಾಯೆಯಲ್ಲಿ ಮುಳುಗಿದ ವ್ಯಕ್ತಿಯ ಸಹವಾಸದಲ್ಲಿರಲು ಇಷ್ಟವಾಗುವುದಿಲ್ಲ, ಹಾಗೆಯೇ ದೇವರಿಗೆ ಸಾಧನೆ ಮಾಡದಿರುವ ವ್ಯಕ್ತಿಯ ಜೊತೆಗಿರಲು ಇಷ್ಟವಾಗುವುದಿಲ್ಲ’.
– (ಪರಾತ್ಪರ ಗುರು) ಡಾ. ಆಠವಲೆ (೧೦.೧೦.೨೦೨೧)