ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಜಯಂತ ಆಠವಲೆ

ಧರ್ಮ ಶಬ್ದದ ಅರ್ಥ

‘ಕೆಟ್ಟ ಶಕ್ತಿಗಳಿಂದ ಜಗತ್ತಿನ ರಕ್ಷಣೆಯನ್ನು ಮಾಡುವುದು ಮತ್ತು  ಮಾನವನಿಗೆ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯೊಂದಿಗೆ ಮೋಕ್ಷಪ್ರಾಪ್ತಿಯನ್ನು ಮಾಡಿ ಕೊಡುವ ತತ್ತ್ವವೆಂದರೆ ಧರ್ಮ ! ಹೆಚ್ಚಿನ ವಿದೇಶಿ ಭಾಷೆಗಳಲ್ಲಿ ‘ಧರ್ಮ’ ಶಬ್ದಕ್ಕೆ ಸಮಾನಾರ್ಥ ಶಬ್ದವು ಇಲ್ಲ !  ಹಾಗಿರುವುದರಿಂದ ಅವರಿಗೆ ಧರ್ಮಾಚರಣೆಯು ಕಠಿಣವಾಗುತ್ತದೆ’.

‘ಇಡೀ ಜಗತ್ತಿನ ಸ್ಥಿತಿ ಮತ್ತು ವ್ಯವಸ್ಥೆಯನ್ನು ಉತ್ತಮವಾಗಿಡುವುದು ಪ್ರತಿಯೊಬ್ಬ ಪ್ರಾಣಿಮಾತ್ರರ ಐಹಿಕ ಉನ್ನತಿ ಅಂದರೆ ಅಭ್ಯುದಯ ಮತ್ತು ಪಾರಲೌಕಿಕ ಉನ್ನತಿ ಅಂದರೆ ಮೋಕ್ಷ ಸಿಗುವುದು ಈ ಮೂರು ವಿಷಯಗಳನ್ನು ಸಾಧ್ಯಗೊಳಿಸುವುದಕ್ಕೆ ‘ಧರ್ಮ’ ಎಂದು ಹೇಳುತ್ತಾರೆ’.

‘ಅನಕ್ಷರಸ್ಥನು ‘ಎಲ್ಲಾ ಭಾಷೆಯ ಅಕ್ಷರಗಳು ಒಂದೇ ರೀತಿಯಾಗಿದೆ’, ಎಂದು ಹೇಳಿದರೆ ಹೇಳುವವನ ಅಜ್ಞಾನವನ್ನು ತೋರಿಸುತ್ತದೆ ಹಾಗೆಯೇ ‘ಸರ್ವಧರ್ಮಸಮಭಾವ’ ಎಂದು ಹೇಳುವವರು ತಮ್ಮ ಅಜ್ಞಾನವನ್ನು ತೋರಿಸುತ್ತಾರೆ. ‘ಎಲ್ಲಾ ಔಷಧಿಗಳು, ಎಲ್ಲಾ ಕಾನೂನುಗಳು, ಒಂದೇ ಆಗಿವೆ’ ಎಂದು ಹೇಳುವಂತೆ ‘ಸರ್ವಧರ್ಮಸಮಭಾವ’ದ ಹೇಳಿಕೆಯಾಗಿದೆ’.

‘ಹಿಂದೂ ಧರ್ಮದಲ್ಲಿ ಹೇಳಿರುವಂತಹ ಆಳವಾದ ಜ್ಞಾನವು ಇತರ ಒಂದಾದರೂ ಪಂಥದಲ್ಲಿ ಇದೆಯೇ ? ವಿಜ್ಞಾನಕ್ಕಾದರೂ ಇದರ ಅರಿವಿದೆಯೇ ?’

‘ಸತ್ಯಯುಗದಲ್ಲಿ ದಿನಪತ್ರಿಕೆ, ದೂರದರ್ಶನ, ಜಾಲತಾಣ ಮುಂತಾದವುಗಳ ಆವಶ್ಯಕತೆಯೇ ಇರಲಿಲ್ಲ. ಏಕೆಂದರೆ ಕೆಟ್ಟ ಸುದ್ದಿಗಳು ಇರುತ್ತಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇರುತ್ತಿದ್ದುದರಿಂದ ಆನಂದದಿಂದ ಇದ್ದರು’.

ಹಿಂದೆ ಲಂಚವನ್ನು ಪಡೆಯುವವರನ್ನು ಹುಡುಕಬೇಕಿತ್ತು, ಈಗ ಲಂಚವನ್ನು ತೆಗೆದುಕೊಳ್ಳದಿರುವವರನ್ನು ಹುಡುಕಬೇಕಾಗುತ್ತದೆ !

‘ಎಲ್ಲಿ ಯಂತ್ರದ ಮೂಲಕ ಸಂಶೋಧನೆ ಮಾಡಿ ಬದಲಾಗುವ ಫಲಿತಾಂಶವನ್ನು ಹೇಳುವ ವಿಜ್ಞಾನಿಗಳು ಮತ್ತು ಎಲ್ಲಿ ಲಕ್ಷಗಟ್ಟಲೆ ವರ್ಷಗಳ ಹಿಂದೆ ಯಂತ್ರವಿಲ್ಲದೆ ಮತ್ತು ಸಂಶೋಧನೆಯಿಲ್ಲದೆ ಅಂತಿಮ ಸತ್ಯವನ್ನು ಹೇಳುವ ಋಷಿಗಳು !’

– (ಪರಾತ್ಪರ ಗುರು) ಡಾ. ಆಠವಲೆ