ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

ಚಿರಂತನ ಆನಂದಪ್ರಾಪ್ತಿಗಾಗಿ ಸಾಧನೆ ಮಾಡದೇ ಬೇರೆ ಪರ್ಯಾಯವಿಲ್ಲ !

‘ದೇವರ ಮೇಲೆ ಮತ್ತು ಸಾಧನೆಯ ಮೇಲೆ ವಿಶ್ವಾಸವಿಲ್ಲದಿದ್ದರೂ ಪ್ರತಿಯೊಬ್ಬರಿಗೂ ಚಿರಂತನ ಆನಂದ ಬೇಕಾಗಿರುತ್ತದೆ. ಅದು ಕೇವಲ ಸಾಧನೆಯಿಂದ ಸಿಗುತ್ತದೆ’. ಇದು ಒಂದು ಸಲವಾದರೂ ಗಮನಕ್ಕೆ ಬಂದರೆ ಸಾಧನೆ ಮಾಡದೇ ಬೇರೆ ಪರ್ಯಾಯವಿಲ್ಲದಿರುವುದರಿಂದ ಮಾನವನು ಸಾಧನೆಯ ಕಡೆಗೆ ಹೊರಳುತ್ತಾನೆ’.

‘ಸಾಧನೆಯಿಂದ ‘ದೇವರು ಬೇಕೆಂದು’, ಅನಿಸಲಾರಂಭಿಸಿದರೆ ‘ಪೃಥ್ವಿಯ ಮೇಲಿನ ಏನಾದರೂ ಬೇಕು’ ಎಂದು ಅನಿಸುವುದಿಲ್ಲ. ಇದರಿಂದ ಯಾರ ಬಗ್ಗೆಯೂ ಅಸೂಯೆ, ಮತ್ಸರ ಅಥವಾ ದ್ವೇಷವೆನಿಸುವುದಿಲ್ಲ, ಹಾಗೆಯೇ ಇತರರೊಂದಿಗೆ ವೈಮನಸ್ಸು, ಜಗಳ ಯಾವುದು ಆಗುವುದಿಲ್ಲ’.

‘ದೇವರು ಎಲ್ಲೆಡೆ ಇದ್ದಾನೆ, ‘ಪ್ರತಿಯೊಬ್ಬರಲ್ಲಿ ಇದ್ದಾನೆ’, ಇದು ಹಿಂದೂ ಧರ್ಮದ ಬೋಧನೆಯಾಗಿರುವುದರಿಂದ ಹಿಂದೂಗಳಿಗೆ ಇತರ ಧರ್ಮೀಯರ ದ್ವೇಷವನ್ನು ಮಾಡಲು ಕಲಿಸವುದಿಲ್ಲ’.

‘ದೇವರ ಕೃಪೆಯನ್ನು ಅನುಭವಿಸಿದ ನಂತರ ಸಮಾಜದಲ್ಲಿ ಯಾರಾದರೂ ಹೊಗಳಿದರೆ ಅದರ ಬೆಲೆ ಶೂನ್ಯವೆನಿಸುತ್ತದೆ’.

‘ಎಲ್ಲಿ ಇತರ ಗ್ರಹಗಳ ಮೇಲೆ ಹೋಗುವ ಯಾನವನ್ನು ಕಂಡು ಹಿಡಿದಾಗ ವಿಜ್ಞಾನವನ್ನು ಹೊಗಳುವ ಬುದ್ಧಿಜೀವಿಗಳು ಮತ್ತು ಎಲ್ಲಿ ಸೂಕ್ಷ್ಮದೇಹದಿಂದ ವಿಶ್ವ ಮಾತ್ರವಲ್ಲದೇ ಸಪ್ತಲೋಕ ಮತ್ತು ಸಪ್ತಪಾತಾಳಗಳಿಗೆ ಕ್ಷಣಾರ್ಧದಲ್ಲಿ ಸೂಕ್ಷ್ಮದಿಂದ ಹೋಗಬಲ್ಲ ಋಷಿ-ಮುನಿಗಳು’.

‘ಬುದ್ಧಿಜೀವಿಗಳಿಗೆ ‘ತಮಗೆ ಎಲ್ಲವೂ ತಿಳಿಯುತ್ತದೆ’, ಎಂಬ ಅಹಂಭಾವವಿರುತ್ತದೆ; ಹಾಗಾಗಿ ಅವರಿಗೆ ಯಾವುದೇ ವಿಷಯದ ಬಗ್ಗೆ ಪೂರ್ಣ ಜ್ಞಾನವಿರುವುದಿಲ್ಲ; ಆದರೆ ಸಂತರಿಗೆ ಅಹಂಭಾವ ಇರುವುದಿಲ್ಲ. ಅದುದರಿಂದ ಅವರಿಗೆ ಶಬ್ದಾತೀತವಾದ ಅನೇಕ ವಿಷಯಗಳ ಜ್ಞಾನವಿರುತ್ತದೆ’.

‘ದೇವರು ಭೂಮಿ, ನೀರು, ಗಾಳಿ ಮುಂತಾದ ಎಲ್ಲವನ್ನು ಉಚಿತವಾಗಿ ನೀಡುತ್ತಾನೆ, ಆದರೂ ಮಾನವನಿಗೆ ಮಾನವನಿಂದ ಪ್ರತಿಯೊಂದನ್ನು ಹಣ ಕೊಟ್ಟು ಖರೀದಿಸಬೇಕಾಗುತ್ತದೆ’.

– ಪರಾತ್ಪರ ಗುರು ಡಾ. ಆಠವಲೆ