ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮಹತ್ವ !

‘ಈಶ್ವರನಲ್ಲಿ ಸ್ವಭಾವದೋಷ ಮತ್ತು ಅಹಂ ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಾವೂ ಸಹ ಅವುಗಳನ್ನು ನಿರ್ಮೂಲನೆ ಮಾಡುವುದು ಅವಶ್ಯಕವಾಗಿದೆ.’

ಅಧ್ಯಾತ್ಮದ ಅದ್ವಿತೀಯತೆ !

ಅಧ್ಯಾತ್ಮದಲ್ಲಿ ಜ್ಞಾನ ಪಡೆಯಲು ಬುದ್ಧಿಯಿಂದ ಅಧ್ಯಯನವನ್ನು ಮಾಡಬೇಕಾಗಿಲ್ಲ. ತದ್ವಿರುದ್ಧವಾಗಿ, ಬುದ್ಧಿಲಯವಾದ ನಂತರ ಒಂದಲ್ಲ; ಎಲ್ಲಾ ವಿಷಯಗಳ ಜ್ಞಾನವು ತಕ್ಷಣ ಪ್ರಾಪ್ತವಾಗುತ್ತದೆ.

ವೇದ-ಉಪನಿಷತ್ತುಗಳು ಇತ್ಯಾದಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಗ್ರಂಥಗಳ ಮಹತ್ವ

‘ಯುದ್ಧವು ಒಂದು ತಾತ್ಕಾಲಿಕ ವಾರ್ತೆಯಾಗಿರುತ್ತದೆ. ಮುಂದಿನ ೫೦-೬೦ ವರ್ಷಗಳಲ್ಲಿಯೇ ಯುದ್ಧದ ಇತಿಹಾಸವನ್ನು ಮರೆಯಲಾಗುತ್ತದೆ, ಉದಾ. ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳು ಹಾಗೂ ಅದಕ್ಕೂ ಮೊದಲಿನ ಎಲ್ಲಾ ಯುದ್ಧಗಳು. ತದ್ವಿರುದ್ಧ ಅಧ್ಯಾತ್ಮಕ್ಕೆ ಸಂಬಂಧಿಸಿದ ವೇದ-ಉಪನಿಷತ್ತುಗಳು ಇತ್ಯಾದಿ ಗ್ರಂಥಗಳು ಚಿರಕಾಲ ಉಳಿದಿವೆ.’

ಯೌವ್ವನದಲ್ಲಿಯೇ ಸಾಧನೆ ಮಾಡುವುದರ ಮಹತ್ವ !

‘ವೃದ್ಧಾಪ್ಯ ಎಂದರೇನು ?’ ಎಂಬುದು ವೃದ್ಧರಾದ ಮೇಲೆಯೇ ಅನುಭವಕ್ಕೆ ಬರುತ್ತದೆ. ಈ ಅನುಭವ ಬಂದ ಮೇಲೆ ‘ವೃದ್ಧಾಪ್ಯ ನೀಡುವ ಪುನರ್ಜನ್ಮ ಬೇಡ’, ಎಂದು ಅನಿಸ ತೊಡಗುತ್ತದೆ. ಆದರೆ ಆಗ ಸಾಧನೆ ಮಾಡಿ ಪುನರ್ಜನ್ಮವನ್ನು ತಪ್ಪಿಸಿಕೊಳ್ಳುವ ಸಮಯ ಮೀರಿ ಹೋಗಿರುತ್ತದೆ. ಹಾಗಾಗಿ ಯೌವ್ವನದಲ್ಲಿಯೇ ಸಾಧನೆ ಮಾಡಿರಿ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.