ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಹಿಂದೂ ರಾಷ್ಟ್ರ ಯಾರು ತರುವರು ? ಸ್ವಾರ್ಥಕ್ಕಾಗಿ ಬೇಡಿಕೆಯನ್ನು ಮಾಡುವವರಲ್ಲ, ತ್ಯಾಗ ಮಾಡುವವರೇ ಹಿಂದೂ ರಾಷ್ಟ್ರವನ್ನು ತರುವರು.
ಹಿಂದೂ ರಾಷ್ಟ್ರ ಯಾರು ತರುವರು ? ಸ್ವಾರ್ಥಕ್ಕಾಗಿ ಬೇಡಿಕೆಯನ್ನು ಮಾಡುವವರಲ್ಲ, ತ್ಯಾಗ ಮಾಡುವವರೇ ಹಿಂದೂ ರಾಷ್ಟ್ರವನ್ನು ತರುವರು.
ಸರ್ವಸಾಮಾನ್ಯ ವ್ಯಕ್ತಿಗಳು ಏನಾದರೂ ಮಾಡಿದಾಗ ಅದರ ಹಿಂದೆ ಏನಾದರೂ ಸಿಗಬೇಕು, ಎಂಬ ಉದ್ದೇಶ ಇರುತ್ತದೆ. ತದ್ವಿರುದ್ಧ ಸಾಧಕರು ಮಾಡುತ್ತಿರುವ ಪ್ರತಿಯೊಂದು ಕೃತಿಯ ಹಿಂದೆ ಸರ್ವಸ್ವದ ತ್ಯಾಗ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು ಎಂಬ ಉದ್ದೇಶ ಇರುತ್ತದೆ.
ಪಾಶ್ಚಾತ್ಯರಿಗೆ ಸಂಶೋಧನೆಗಾಗಿ ಯಂತ್ರವು ಬೇಕಾಗುತ್ತದೆ ಋಷಿಗಳಿಗೆ ಹಾಗೂ ಸಂತರಿಗೆ ಬೇಕಾಗುವುದಿಲ್ಲ. ಅವರಿಗೆ ಯಂತ್ರಕ್ಕಿಂತ ಅನಂತ ಪಟ್ಟು ಮಾಹಿತಿಯು ಸಿಗುತ್ತದೆ.
ಇದರ ಒಂದು ಸುಂದರ ಉದಾಹರಣೆಯೆಂದರೆ ಸೂರ್ಯನು ಉದಯಿಸಿದಾಗ ಎಲ್ಲರೂ ಏಳುತ್ತಾರೆ, ಹೂವುಗಳು ಅರಳುತ್ತವೆ.ಇದು ಕೇವಲ ಸೂರ್ಯನ ಅಸ್ತಿತ್ವದಿಂದಾಗುತ್ತದೆ. ಸೂರ್ಯನು ಯಾರಿಗೂ ‘ಏಳಿರಿ’ ಅಥವಾ ಹೂವುಗಳಿಗೆ ‘ಅರಳಿರಿ’ ಎಂದು ಹೇಳುವುದಿಲ್ಲ !’
ಎಲ್ಲಿ ಅರ್ಥ ಮತ್ತು ಕಾಮಗಳನ್ನು ಆಧರಿಸಿದ ಪಾಶ್ಚಾತ್ಯ ಸಂಸ್ಕೃತಿ ಮತ್ತು ಎಲ್ಲಿ ಧರ್ಮ ಮತ್ತು ಮೋಕ್ಷವನ್ನು ಆಧರಿಸಿರುವ ಹಿಂದೂ ಸಂಸ್ಕೃತಿ. ಹಿಂದೂಗಳು ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತಿರುವುದರಿಂದ ಅವರು ಸಹ ವೇಗವಾಗಿ ವಿನಾಶದ ಕಡೆಗೆ ಮಾರ್ಗ ಕ್ರಮಣ ಮಾಡುತ್ತಿದ್ದಾರೆ.
ಶರೀರದ ರಚನೆ, ಸ್ವಭಾವದಲ್ಲಿಯ ಗುಣ-ದೋಷ, ಕಲೆ, ಬುದ್ಧಿ, ಧನ ಇತ್ಯಾದಿ ಘಟಕಗಳು ೭೫೦ ಕೋಟಿಯಲ್ಲಿ ಇಬ್ಬರು ವ್ಯಕ್ತಿಯಲ್ಲಿಯೇ ಸಾಮ್ಯತೆ ಇರುವುದಿಲ್ಲ. ಹಾಗಿರುವಾಗ ಸಾಮ್ಯವಾದ ಈ ಪದಕ್ಕೆ ಏನಾದರೂ ಅರ್ಥವಿದೆಯೇ ?
ಹಿಂದೂ ರಾಷ್ಟ್ರದಲ್ಲಿ (ಸನಾತನ ಧರ್ಮರಾಜ್ಯದಲ್ಲಿ) ದಿನಪತ್ರಿಕೆಗಳು, ದೂರದರ್ಶನವಾಹಿನಿಗಳು, ಜಾಲತಾಣ ಮುಂತಾದವುಗಳನ್ನು ಕೇವಲ ಧರ್ಮ ಶಿಕ್ಷಣ ಮತ್ತು ಸಾಧನೆಯ ಸಂದರ್ಭದಲ್ಲಿ ಮಾತ್ರ ಉಪಯೋಗಿಸಲಾಗುವುದು.
ಪಾಶ್ಚಾತ್ಯ ಶಿಕ್ಷಣವು ಯಾವುದೇ ಸಮಸ್ಯೆಯ ಮೂಲ ಕಾರಣದವರೆಗೆ ಉದಾ. ಪ್ರಾರಬ್ಧ, ಕೆಟ್ಟ ಶಕ್ತಿ, ಕಾಲಮಹಾತ್ಮೆ ಇವುಗಳ ವರೆಗೆ ಹೋಗುವುದಿಲ್ಲ. ಕ್ಷಯರೋಗಿಗೆ ಕ್ಷಯರೋಗದ ಜಂತು ಸಾಯುವ ಔಷಧಿಯನ್ನು ನೀಡುವ ಬದಲು ಕೇವಲ ಕೆಮ್ಮಿನ ಔಷಧಿ ನೀಡುವಂತೆ ಅವರ ಉಪಚಾರವಿದೆ.
‘ಯುಗಾದಿ ಅಂದರೆ ಚೈತ್ರ ಶುಕ್ಲ ಪಕ್ಷ ಪಾಡ್ಯ, ಇದು ಹಿಂದೂಗಳ ವರ್ಷಾರಂಭವಾಗಿದೆ. ಈ ಯುಗಾದಿ ತಿಥಿಯು ಶಾಸ್ತ್ರಾನು ಸಾರ ಮೂರುವರೆ ಮುಹೂರ್ತಗಳ ಪೈಕಿ ಒಂದಾಗಿರುವುದರಿಂದ ಈ ದಿನ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ ಅಥವಾ ಕಾರ್ಯದ ಹೊಸಸಂಕಲ್ಪವನ್ನು ಮಾಡಲಾಗು ತ್ತದೆ.