ಆಯುರ್ವೇದ ವಿಷಯದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ  !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಶರೀರಮಾದ್ಯಂ ಖಲು ಧರ್ಮಸಾಧನಮ್‌ !’ ಎಂದರೆ ‘ಶರೀರವು ಧರ್ಮಾಚರಣೆಯ ಮೊದಲ ಸಾಧನವಾಗಿದೆ. ಶರೀರವು ಆರೋಗ್ಯವಾಗಿದ್ದರೆ ಸಾಧನೆಯಲ್ಲಿ ಶಾರೀರಿಕ ಅಡಚಣೆಗಳು ಬರುವುದಿಲ್ಲ. ಶರೀರವನ್ನು ಸಾತ್ತ್ವಿಕ ವಾಗಿಸಿದರೆ ಸಾಧನೆಯಲ್ಲಿ ಶೀಘ್ರವಾಗಿ ಪ್ರಗತಿ ಯಾಗುತ್ತದೆ. ‘ಶರೀರವನ್ನು ಹೇಗೆ ಸಾತ್ತ್ವಿಕವಾಗಿಡುವುದು ?’, ಇದನ್ನು ಅಲೋಪಥಿಯಲ್ಲ, ಆಯುರ್ವೇದ ಕಲಿಸುತ್ತದೆ.

ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಂದು ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ‘ಆಯುರ್ವೇದ’ ಈ ವಿಷಯವನ್ನು ಬಾಲ್ಯದಿಂದಲೇ ಕಲಿಸಲಾಗುವುದು. ಆದ್ದರಿಂದ ನಾಗರಿಕರಲ್ಲಿ ಬಾಲ್ಯದಿಂದಲೂ ಆರೋಗ್ಯದ ಕುರಿತಾದ ಮಾಹಿತಿ ತಿಳಿಯುವುದು ಮತ್ತು ಅವರು ರೋಗರುಜಿನೆಗಳಿಂದ ದೂರ ಉಳಿಯುವರು.’

ರೋಗ ಬಂದ ನಂತರ ವ್ಯಾಯಾಮ ಮಾಡುವುದಕ್ಕಿಂತ ರೋಗವಾಗದಿರಲು ವ್ಯಾಯಾಮ ಮಾಡಬೇಕು !

‘ವೃದ್ಧಾಪ್ಯದಲ್ಲಿ ಕೀಲು ನೋವು, ಸೊಂಟ ನೋವು, ಬೆನ್ನು ನೋವು ಮುಂತಾದ ನೋವುಗಳಾದರೆ, ಆಧುನಿಕ ವೈದ್ಯರು (ಡಾಕ್ಟರ್) ವ್ಯಾಯಾಮ, ಯೋಗಾಸನಗಳು ಮುಂತಾದವುಗಳನ್ನು ಮಾಡಲು ಹೇಳುತ್ತಾರೆ. ಇಲ್ಲಿ ಗಮನಿಸಬೇಕಾಗಿರುವ ಮಹತ್ವದ ವಿಷಯವೆಂದರೆ ರೋಗ ಆದ ನಂತರ ವ್ಯಾಯಾಮ ಮಾಡುವ ಬದಲು ರೋಗವಾಗಬಾರದೆಂದು ವ್ಯಾಯಾಮ ಮಾಡುವುದು ಹೆಚ್ಚು ಲಾಭದಾಯಕವಾಗಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ