
ಈಶ್ವರಪ್ರಾಪ್ತಿಗಾಗಿ ಭಾರತೀಯರ ಪ್ರಯತ್ನಗಳ ಅದ್ವಿತೀಯತೆ !
‘ಸಾವಿರಾರು ವರ್ಷಗಳಿಂದ ಭಾರತದ ಹಿಂದೂಗಳು ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣ ಮಾಡಿದ್ದಾರೆ. ಇತರ ದೇಶಗಳಂತೆ ಪೃಥ್ವಿಯಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸಿಲ್ಲ; ಏಕೆಂದರೆ ಅವರಿಗೆ ಅದರ ನಿರರ್ಥಕತೆಯು ತಿಳಿದಿತ್ತು.’ ಪಾಶ್ಚಿಮಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಪ್ರಪಾತಕ್ಕೆ ಬೀಳುತ್ತಿರುವ ಸಮಾಜ !
‘ಹಿಂದಿನ ಕಾಲದಲ್ಲಿ ಪೀಳಿಗೆಗಳ ನಡುವೆ ವೈಚಾರಿಕ ಅಂತರ (ಜನರೇಶನ್ ಗ್ಯಾಪ್) ಇರಲಿಲ್ಲ. ಪ್ರತಿಯೊಂದು ಪೀಳಿಗೆಯು ಮೊದಲನೆಯ ಪೀಳಿಗೆಯೊಂದಿಗೆ ಹೊಂದಿಕೊಳ್ಳುತ್ತಿತ್ತು. ಅಜ್ಜ, ಮುತ್ತಜ್ಜನಿಂದ ಹಿಡಿದು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಒಟ್ಟಾಗಿರುತ್ತಿದ್ದರು. ಹಿಂದೂಗಳು ಪಾಶ್ಚಿಮಾತ್ಯ ಸಂಸ್ಕೃತಿ ಅಂಗೀಕರಿಸಿದ್ದರಿಂದ ಎರಡು ಪೀಳಿಗೆಗಳಲ್ಲಿ ಅರ್ಥಾತ್ ತಾಯಿ-ತಂದೆ ಮತ್ತು ಮಗ-ಸೊಸೆಯರ ನಡುವೆಯೇ ಹೊಂದಾಣಿಕೆ ಇಲ್ಲ. ಈಗ ಪತಿ-ಪತ್ನಿಯರ ನಡುವೆಯೂ ಪರಸ್ಪರ ಹೊಂದಾಣಿಕೆ ಇಲ್ಲ. ಮದುವೆಯ ನಂತರ ಅಲ್ಪಾವಧಿಯೊಳಗೆ ವಿವಾಹ ವಿಚ್ಛೇದನೆಯಾಗುತ್ತದೆ.’
ವಿಜ್ಞಾನದ ಇತಿಮಿತಿ !
‘ಅಧ್ಯಾತ್ಮಶಾಸ್ತ್ರದಿಂದಾಗಿ ವಿಜ್ಞಾನವು ತಿಳಿಯುತ್ತದೆ; ಆದರೆ ವಿಜ್ಞಾನದಿಂದಾಗಿ ಅಧ್ಯಾತ್ಮವು ತಿಳಿಯುವುದಿಲ್ಲ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ