‘ಪ್ರತಿಯೊಂದು ವಿಷಯಕ್ಕೆ ವಿಶಿಷ್ಟ ದೇವತೆಗಳ ಅಧಿಷ್ಠಾನವಿರುತ್ತದೆ, ಉದಾ. ವಿದ್ಯಾಭ್ಯಾಸಕ್ಕೆ ಗಣಪತಿ ಮತ್ತು ಸರಸ್ವತಿ, ಧನಕ್ಕಾಗಿ ಶ್ರೀಲಕ್ಷ್ಮೀ, ಆರೋಗ್ಯಕ್ಕಾಗಿ ಧನ್ವಂತರಿ. ಆ ವಿಷಯದ ಸಂದರ್ಭದಲ್ಲಿ ಕೃತಿ ಮಾಡುವಾಗ ಮೊದಲಿಗೆ ಆ ವಿಷಯದ ಅಧಿಷ್ಠಾತ್ರೀ ದೇವತೆಗೆ ಪ್ರಾರ್ಥನೆ ಮಾಡಿದರೆ, ಆ ದೇವತೆಯ ತತ್ತ್ವ ಕಾರ್ಯನಿರತವಾಗಿ ಆ ಕೃತಿ ವೇಗವಾಗಿ ಮತ್ತು ಪರಿಪೂರ್ಣವಾಗಲು ಸಹಾಯವಾಗುತ್ತದೆ. ಆ ಕೃತಿಯಲ್ಲಿ ಅಡೆತಡೆಗಳು ಬಂದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ. ಅದರ ಜೊತೆಯಲ್ಲಿ ಯಾವುದೇ ಕೃತಿ ಮಾಡುವಾಗ ತನ್ನ ಸಾಧನೆ ಆಗಲು ಕುಲದೇವತೆಗೆ ಸಹ ಪ್ರಾರ್ಥನೆ ಮಾಡಬೇಕು’.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ