೩. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ಅಲೌಕಿಕ ಆಧ್ಯಾತ್ಮಿಕ ವೈಶಿಷ್ಟ್ಯಗಳು
೩ ಅ. ಆಧ್ಯಾತ್ಮಿಕ ತೊಂದರೆಗಳ ಮೇಲೆ ಜಯ ಸಾಧಿಸುವುದು : ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಜಾತಕದಲ್ಲಿ ರವಿ ಮತ್ತು ಶನಿ ಈ ಗ್ರಹಗಳ ಅಶುಭಯೋಗವಿದೆ. ಹಾಗೆಯೇ ‘ಸರ್ವಪಿತ್ರಿ ಅಮಾವಾಸ್ಯೆ ತಿಥಿಯಂದು ಅವರ ಜನ್ಮವಾಗಿದೆ. ಇದರಿಂದ ಅವರಿಗೆ ಪ್ರಾರಂಭದಲ್ಲಿ ತೀವ್ರ ಸ್ವರೂಪದ ಆಧ್ಯಾತ್ಮಿಕ ತೊಂದರೆಯಿತ್ತು. ಆದರೆ ಸಮಷ್ಟಿ ಸಾಧನೆಯ ಧ್ಯಾಸದೊಂದಿಗೆ ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯನ್ನು ನಿರಂತರವಾಗಿ ಮಾಡಿದ್ದರಿಂದ ಅವರ ಆಧ್ಯಾತ್ಮಿಕ ತೊಂದರೆ ಅತ್ಯಲ್ಪ ಕಾಲಾವಧಿಯಲ್ಲಿ ಸಂಪೂರ್ಣ ದೂರವಾಯಿತು. ಈ ವಿಷಯದಲ್ಲಿ ಅವರು ಹೇಳುತ್ತಾರೆ, “ನಾನು ಪ್ರತಿಯೊಂದು ಕ್ಷಣವೂ ‘ಸೇವೆಗಾಗಿ ಹೇಗೆ ಪ್ರಯತ್ನಿಸಬೇಕು? ಪ್ರತಿಯೊಂದು ಕ್ಷಣ ಸೇವೆಯಲ್ಲಿ ಹೇಗೆ ಇರಲಿ?’ ಎಂದು ಪ್ರಯತ್ನಿಸ ತೊಡಗಿದೆನು. ಯಾವಾಗ ಪ್ರತಿಯೊಂದು ಕ್ಷಣವನ್ನೂ ಸೇವೆಯಲ್ಲಿ ವ್ಯಯಿಸತೊಡಗಿದೆನೋ, ಆಗ ತೊಂದರೆಗಳ ಪ್ರಮಾಣ ತನ್ನಿಂತಾನೇ ಕಡಿಮೆಯಾಗಲು ಪ್ರಾರಂಭವಾಯಿತು. ಭಾವಜಾಗೃತಿಯ ಪ್ರಯತ್ನ ಮತ್ತು ಅಖಂಡ ಸೇವೆಯಲ್ಲಿರುವುದು, ಇದರಿಂದ ನನ್ನ ತೊಂದರೆ ಕಡಿಮೆಯಾಯಿತು’.
೩ ಆ. ಅವಿಶ್ರಾಂತ ಮತ್ತು ಸಂಪೂರ್ಣ ಸಮರ್ಪಣೆಯೊಂದಿಗೆ ಗುರುಕಾರ್ಯವನ್ನು ಮಾಡುವುದು : ಗುರುಕಾರ್ಯವೆಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಉಸಿರಾಗಿದೆ. ಕೇವಲ ಕೆಲವೇ ಗಂಟೆಗಳ ಕಾಲ ವಿಶ್ರಾಂತಿ ತೆಗೆದುಕೊಂಡು ಅವರು ಹಗಲು ರಾತ್ರಿ ಗುರುಕಾರ್ಯದಲ್ಲಿ ನಿರತರಾಗಿರುತ್ತಾರೆ. ಈ ವಿಷಯದಲ್ಲಿ ಅವರು ಮುಂದಿನಂತೆ ಹೇಳುತ್ತಾರೆ. “ಹಗಲು ರಾತ್ರಿ ಎಷ್ಟೇ ಸೇವೆ ಮಾಡಿದರೂ, ‘ಇನ್ನೂ ಎಷ್ಟೊಂದು ಮಾಡುವುದು ಉಳಿದಿದೆ’ ಎಂದು ಅನಿಸುತ್ತದೆ. ‘ವಿಶ್ರಾಂತಿಗಾಗಿ ರಾತ್ರಿ ಕಣ್ಣುಗಳನ್ನು ಮುಚ್ಚಲೇ ಬಾರದು, ಕೇವಲ ಸೇವೆಯನ್ನೇ ಮಾಡುತ್ತಿರಬೇಕು’, ಎಂದೆನಿಸುತ್ತದೆ. ಆದುದರಿಂದ ಊಟ- ನಿದ್ರೆಯ ನೆನಪೂ ಬರುವುದಿಲ್ಲ. ಮಾಡುವವನು ದೇವರೇ ಆಗಿದ್ದಾನೆ. ಈಗ ಮಾಡುತ್ತಿರುವ ಸೇವೆ ಏನೇನೂ ಅಲ್ಲ. ‘ನಮಗೆ ಇನ್ನೂ ಬಹಳಷ್ಟು ಮಾಡುವುದಿದೆ’, ಎಂದೆನಿಸುತ್ತದೆ. ‘
೩ ಇ. ಪ್ರೀತಿ : ‘ಇತರರ ಆಧ್ಯಾತ್ಮಿಕ ಉನ್ನತಿ ಶೀಘ್ರವಾಗಿ ಆಗಬೇಕು’ ಎಂದು ಅವರಿಗೆ ಅತ್ಯಧಿಕ ತಳಮಳವಿದೆ. ಈ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳುತ್ತಾರೆ, ‘ವಾತ್ಸಲ್ಯಭಾವದಿಂದ ತುಂಬಿ ತುಳುಕುತ್ತಿರುವ ಶ್ರೀ ಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳ ಇವರು ಸಾಧಕರ ಮೇಲೆ ತಾಯಿಯ ಮಮತೆಯಂತೆ ಮಾಡುತ್ತಿರುವ ಪ್ರೇಮ ಮತ್ತು ಸಾಧನೆಯಲ್ಲಿ ಪ್ರಗತಿ ಹೊಂದಲು ಮಾಡುತ್ತಿರುವ ಅಪಾರ ಸಹಾಯವನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯವಾಗಿದೆ. ಅವರಲ್ಲಿ ’ಪ್ರೀತಿ’ ಇದು ಶಾಶ್ವತವಾದ ಸ್ಥಾಯಿ ಭಾವವಾಗಿದೆ. ಈ ಕಾರಣದಿಂದ ’ಕುಟುಂಬವನ್ನು ತ್ಯಜಿಸಿರುವ ಸಾಧಕರಿಗೆ ನನ್ನ ನಂತರ ಯಾರು ನೋಡಿಕೊಳ್ಳುತ್ತಾರೆ?’ ಮತ್ತು ’ಅವರ ಪ್ರಗತಿಯನ್ನು ಯಾರು ಮಾಡಿಸಿಕೊಳ್ಳುತ್ತಾರೆ?’ಎನ್ನುವ ಚಿಂತೆಯಿಂದ ಅವರು, ನನ್ನನ್ನು ಮುಕ್ತಗೊಳಿಸಿದ್ದಾರೆ.
೩ ಇ. ‘ಶ್ರೀ ಮಹಾಲಕ್ಷ್ಮಿತತ್ತ್ವ ಜಾಗೃತವಾಗುವುದು : ಶ್ರೀಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳ ಇವರ ಜಾತಕದಲ್ಲಿ ದಶಮ ಸ್ಥಾನದಲ್ಲಿ ಗುರು ಮತ್ತು ಶುಕ್ರ ಈ ಗ್ರಹಗಳ ಮಘಾ ನಕ್ಷತ್ರದಲ್ಲಿ ಸಂಯೋಗವಿದೆ. ಈ ಯೋಗವು ‘ಶ್ರೀ ಮಹಾಲಕ್ಷ್ಮೀ ತತ್ವದ ದರ್ಶಕವಾಗಿದೆ. ದಶಮ(ಕರ್ಮ) ಸ್ಥಾನದಲ್ಲಿರುವ ಗ್ರಹವು ಪ್ರಕರ್ಷದಿಂದ ಫಲವನ್ನು ನೀಡುತ್ತವೆ. ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮಾಧ್ಯಮದಿಂದ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿ ‘ ಶ್ರೀ ಮಹಾಲಕ್ಷ್ಮೀ ತತ್ತ್ವ’ ಇದೆ ಎಂದು ಹೇಳಿದ್ದಾರೆ. ಶ್ರೀ ಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳ ಇವರಲ್ಲಿ ದೇವೀತತ್ವ ಜನ್ಮತಃ ಬೀಜರೂಪದಲ್ಲಿತ್ತು; ಕಾಲಾನುರೂಪದಲ್ಲಿ ಅದು ಪ್ರಕಟವಾಗತೊಡಗಿತು. ಸಪ್ತರ್ಷಿಗಳು ಹೇಳಿರುವಂತೆ ‘ಹಿಂದೂ ರಾಷ್ಟ್ರದ’ ಸ್ಥಾಪನೆಗಾಗಿ ಶ್ರೀ ಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳರಿಂದ ಸೂಕ್ಷ್ಮ ಸ್ತರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯ ನಡೆಯುತ್ತಿದೆ.
ಕೃತಜ್ಞತೆ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಜಾತಕದ ವಿಶ್ಲೇಷಣೆ ಮಾಡುವ ಅವಕಾಶ ಸಿಕ್ಕಿದ ಬಗ್ಗೆ ಕೋಟಿ ಕೋಟಿ ಕೃತಜ್ಞತೆಗಳು.’
– ಶ್ರೀ. ಯಶವಂತ ಕಣಗಲೇಕರ (ಜ್ಯೋತಿಷ್ಯ ವಿಶಾರದ) ಮತ್ತು ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೪.೨೦೨೩)