೨೦೧೪ ರಲ್ಲಿ ಸಪ್ಟೆಂಬರ ೧೮ ರಂದು ಖಂಡಗ್ರಾಸ ಚಂದ್ರಗ್ರಹಣ ಇತ್ತು ಹಾಗೂ ಅಕ್ಟೋಬರ ೨ ರಂದು ಕಂಕಣಾಕೃತಿ ಸೂರ್ಯಗ್ರಹಣವಿದೆ. ಈ ಎರಡೂ ಗ್ರಹಣಗಳು ಭಾರತದಲ್ಲಿ ಕಾಣಿಸುವುದಿಲ್ಲ; ಆದರೆ ಅವುಗಳ ಪರಿಣಾಮ ಪೃಥ್ವಿಯ ಮೇಲೆ ಆಗಲಿಕ್ಕಿದೆ. ಆ ದೃಷ್ಟಿಯಲ್ಲಿ ನಾವು ಗ್ರಹಣ, ೧೫ ದಿನಗಳ ಅಂತರದಲ್ಲಿ ಬರುವ ಗ್ರಹಣಗಳು ಮತ್ತು ಪಿತೃಪಕ್ಷದಲ್ಲಿ ಬರುವ ಗ್ರಹಣ, ಈ ವಿಷಯದಲ್ಲಿ ನಾವು ತಿಳಿದುಕೊಳ್ಳಲಿಕ್ಕಿದ್ದೇವೆ.
೧. ಗ್ರಹಣ
‘ಮೂಲತಃ ‘ಗ್ರಹಣ’ ತಗಲುವುದು ಎಂಬ ಘಟನೆಯು ತಮಪ್ರಧಾನವಾಗಿದೆ. ಈ ಅವಧಿಯಲ್ಲಿ ನವಗ್ರಹಗಳಲ್ಲಿ ರಾಹು ಮತ್ತು ಕೇತು ಇವು ಸಕ್ರಿಯವಾಗಿ ಅವುಗಳು ಸೂರ್ಯ ಅಥವಾ ಚಂದ್ರನನ್ನು ಆವರಿಸುತ್ತವೆ. ಅದರಿಂದ ಸೂರ್ಯ ಮತ್ತು ಚಂದ್ರನಿಂದ ತೊಂದರೆದಾಯಕ ಸ್ಪಂದನಗಳು ಸಂಪೂರ್ಣ ಸೌರಮಂಡಲದಲ್ಲಿ ಪ್ರಕ್ಷೇಪಣೆಯಾಗಿ ಸೌರಮಂಡಲದ ವಾತಾವರಣ ರಜ-ತಮಾತ್ಮಕ ಲಹರಿಗಳಿಂದ ಆವರಿಸಿಕೊಳ್ಳುತ್ತದೆ. ಆದ್ದರಿಂದ ಗ್ರಹಣಕಾಲದ ಸ್ಥೂಲ ಹಾಗೂ ಸೂಕ್ಷ್ಮ ಪರಿಣಾಮ ಭೂಲೋಕದಲ್ಲಿ ಅಂದರೆ ಪೃಥ್ವಿಂiಲ್ಲಿಯೂ ಆಗುತ್ತದೆ.
೨. ೧೫ ದಿನಗಳ ಅಂತರದಲ್ಲಿ ಗ್ರಹಣಗಳು ಬರುವುದು
ಪೃಥ್ವಿಗೆ ಹಗಲಿರುಳು ಸೂರ್ಯ ಮತ್ತು ಚಂದ್ರರಿಂದ ಆಧ್ಯಾತ್ಮಿಕ ಊರ್ಜೆ ಸಿಗುತ್ತಾ ಇರುತ್ತದೆ. ೧೫ ದಿನಗಳ ಅವಧಿಯಲ್ಲಿ ಸೂರ್ಯ ಮತ್ತು ಚಂದ್ರಗ್ರಹಣ ಬಂದರೆ, ಪೃಥ್ವಿಗೆ ಮೊದಲಿನ ಸ್ಥಿತಿಗೆ ಬರಲು ಕಾಲಾವಕಾಶ ಸಾಕಾಗುವುದಿಲ್ಲ. ಇದರಿಂದ ಪೃಥ್ವಿಯ ಸುತ್ತಲಿನ ವಾಯುಮಂಡಲವು ಒಂದು ತಿಂಗಳ ವರೆಗೆ ಮಲಿನವಾಗಿರುತ್ತದೆ. ಆದ್ದರಿಂದ ಪೃಥ್ವಿಯಲ್ಲಿ ವಿವಿಧ ದುಷ್ಪರಿಣಾಮಗಳಾಗುತ್ತವೆ.
೨ ಅ. ಗ್ರಹಣದಿಂದಾಗುವ ದುಷ್ಪರಿಣಾಮಗಳು : ಸಮುದ್ರ ಉಕ್ಕಿ ಬರುವುದರಿಂದ ಸಮುದ್ರ ಪ್ರವಾಸ ಮಾಡುವುದು ಅಪಾಯಕಾರಿಯಾಗಬಹುದು. ಅದೇ ರೀತಿ ಬಿರುಗಾಳಿ, ಉಷ್ಮಾಘಾತ, (ಉಷ್ಣತೆ ಹೆಚ್ಚಾಗುವುದು) ಅರಣ್ಯದಲ್ಲಿ ಬೆಂಕಿ ತಗಲುವುದು, ಅತೀವೃಷ್ಟಿ ಅಥವಾ ಅನಾವೃಷ್ಟಿ, ಭೂಕಂಪ, ನೆರೆಹಾವಳಿ, ಸುನಾಮೀಯಂತಹ ನೈಸರ್ಗಿಕ ಆಪತ್ತುಗಳು ಸಂಭವಿಸಬಹುದು. ಅದೇ ರೀತಿ ಪೃಥ್ವಿಯ ಮೇಲಿನ ವಾತಾವರಣ ಉತ್ಸಾಹದಾಯಕವಾಗಿರದೆ ಜಡ ಹಾಗೂ ನಿರುತ್ಸಾಹಿಯಾಗಿರುತ್ತದೆ. ಅದೇ ರೀತಿ ಪೃಥ್ವಿಯಲ್ಲಿ ಅನಿಷ್ಟ ಶಕ್ತಿಗಳ ಸಂಚಾರ ಹೆಚ್ಚಾಗುವುದರಿಂದ ಮನುಷ್ಯರಲ್ಲಿ ಹೊಡೆದಾಟ, ಗಲಭೆ, ಬೆಂಕಿಹಚ್ಚುವುದು, ಯುದ್ಧವಾಗುವುದು ಇತ್ಯಾದಿ ಮಾನವ ನಿರ್ಮಿತ ಆಪತ್ತುಗಳು ಹೆಚ್ಚಾಗಬಹುದು. ಅದೇ ರೀತಿ ಕೆಲವು ಸ್ಥಳಗಳಲ್ಲಿ ರಾಜಕೀಯ ದೃಷ್ಟಿಯಲ್ಲಿ ಅಧಿಕಾರ ಬುಡಮೇಲಾಗಿ ಅರಾಜಕತೆ ಹರಡಬಹುದು
೨ ಆ. ಗ್ರಹಣಗಳ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಮಾಡಬೇಕಾದ ಉಪಾಯಗಳು
೨ ಆ ೧. ವಾಸ್ತುವಿಗೆ ಸಂಬಂಧಿಸಿದ ಉಪಾಯ : ಮನೆಯಲ್ಲಿ ಅಷ್ಟದೇವತೆಗಳ ನಾಮಪಟ್ಟಿಗಳ ವಾಸ್ತು ಛಾವಣಿ ನಿರ್ಮಿಸುವುದು; ದೇವರಕೋಣೆಯಲ್ಲಿ ಎಣ್ಣೆ ಅಥವಾ ತುಪ್ಪದ ದೀಪ ಹಚ್ಚಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಊದುಬತ್ತಿ ಹಚ್ಚುವುದು; ಮತ್ತು ದೂಪ ಹಾಕುವುದು; ವಾಸ್ತುವಿನಲ್ಲಿ ಗೋಮೂತ್ರ ಸಿಂಪಡಿಸುವುದು, ವಾಸ್ತುವು ಕೆಟ್ಟ ಶಕ್ತಿಗಳ ತೊಂದರೆಯಿಂದ ರಕ್ಷಿಸಲ್ಪಟ್ಟು ವಾಸ್ತುವಿನ ಸುತ್ತಲೂ ದೈವೀ ಚೈತನ್ಯ ನಿರ್ಮಾಣವಾಗಲು ಸೂರ್ಯಗ್ರಹಣದ ಸಮಯದಲ್ಲಿ ? ಮತ್ತು ಚಂದ್ರಗ್ರಹಣದ ಸಮಯದಲ್ಲಿ ‘ಮಹಾಶೂನ್ಯ’ ಈ ನಾಮಜಪವನ್ನು ಹಾಕಿಡುವುದು ಮತ್ತು ಕೇಳುವುದು; ಇತ್ಯಾದಿ ಉಪಾಯ ಮಾಡಬಹುದು.
೨ ಆ ೨. ವ್ಯಕ್ತಿಗೆ ಸಂಬಂಧಿಸಿದ ಉಪಾಯ : ಈ ಅವಧಿಯಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮಲಗುವ ಮೊದಲು ಉಪ್ಪು ನೀರಿನಲ್ಲಿ ೧೫ ನಿಮಿಷ ಕಾಲಿಟ್ಟು ಉಪಾಯ ಮಾಡುವುದು, ವಾಸ್ತುವಿಗೆ ಸಂಬಂಧಿಸಿದ ಉಪಾಯದ ಹಾಗೆಯೆ ? ಅಥವಾ ‘ಮಹಾಶೂನ್ಯ’ ಈ ನಾಮಜಪವನ್ನು ಆದಷ್ಟು ಹೆಚ್ಚು ಮಾಡುವುದು, ತನ್ನ ಸುತ್ತಲೂ ಸಂರಕ್ಷಣಕವಚ ನಿರ್ಮಾಣವಾಗಲು ಭಗವಾನ ಶ್ರೀಕೃಷ್ಣ ಅಥವಾ ಉಪಾಸ್ಯ ದೇವತೆ/ಆರಾಧ್ಯ ದೇವತೆಗೆ ಪ್ರತಿ ೧೫ ನಿಮಿಷಕ್ಕೊಮ್ಮೆ ಪ್ರಾರ್ಥನೆ ಮಾಡುವುದು, ಇಂತಹ ಆಧ್ಯಾತ್ಮಿಕ ಸ್ತರದ ಉಪಾಯ ಮಾಡಬಹುದು.
೩. ಪಿತೃಪಕ್ಷದಲ್ಲಿ ಸೂರ್ಯಗ್ರಹಣ ಬರುವುದರಿಂದ ಆಗುವ ದುಷ್ಪರಿಣಾಮಗಳು
ಹುಣ್ಣಿಮೆಯು ಚಂದ್ರನಿಗೆ ಮತ್ತು ಅಮಾವಾಸ್ಯೆಯು ಪಿತೃರಿಗೆ ಸಂಬಂಧಿಸಿದೆ. ಪಿತೃರ ಸ್ಪಂದನಗಳು ಮೂಲತಃ ರಜಪ್ರಧಾನವಾಗಿರುತ್ತವೆ. ಆದ್ದರಿಂದ ಪಿತೃಪಕ್ಷದಲ್ಲಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಎರಡೂ ಬಂದಿರುವುದರಿಂದ ಭುವಲೋಕದಲ್ಲಿ ವಾಸಿಸುವ ಪಿತೃರಿಗೆ ಗ್ರಹಣದಿಂದ ವಿಪರೀತ ಪರಿಣಾಮವಾಗುತ್ತದೆ. ಅವರು ರಾಹು ಮತ್ತು ಕೇತು ಈ ಬಲಿಷ್ಟ ರಾಕ್ಷಸರ ನಿಯಂತ್ರಣದಲ್ಲಿರುವುದರಿಂದ ಪೃಥ್ವಿಯ ಮಾನವರಿಗೆ ಈ ಒಂದು ತಿಂಗಳು ಅತೃಪ್ತ ಪಿತೃರಿಂದಾಗುವ ತೊಂದರೆ ಶೇ. ೩೦ ರಷ್ಟು ಹೆಚ್ಚಾಗಲಿಕ್ಕಿದೆ. ಅದರಿಂದ ಪೃಥ್ವಿಯಲ್ಲಿ ವಾಸಿಸುವ ಸಾಮಾನ್ಯ ಮಾನವರ ಮೇಲೆ ಪರಿಣಾಮವಾಗಿ ಮಾನವನಿಗೆ ಈ ಮುಂದಿನ ವಿವಿಧ ಪ್ರಕಾರದ ತೊಂದರೆಗಳಾಗಬಹುದು.
೩ ಅ. ಶಾರೀರಿಕ ತೊಂದರೆ : ಹಗಲಿನಲ್ಲಿ ನಿದ್ರೆ ಬರುವುದು, ರಾತ್ರಿ ನಿದ್ರೆ ಕಡಿಮೆಯಾಗುವುದು, ಕೆಟ್ಟ ಕನಸು ಬೀಳುವುದು, ಹಸಿವಾಗದಿರುವುದು ಅಥವಾ ಅತೀ ಹೆಚ್ಚು ಹಸಿವಾಗುವುದು, ತಲೆನೋವು, ಶುಭಕಾರ್ಯದಲ್ಲಿ ವಿಘ್ನಗಳು ಬರುವುದು, ಅಪಘಾತಗಳ ಪ್ರಮಾಣ ಹೆಚ್ಚಾಗುವುದು ಇತ್ಯಾದಿ.
೩ ಆ. ಮಾನಸಿಕ ತೊಂದರೆ : ಮನಸ್ಸಿಗೆ ಕಿರಿಕಿರಿಯಾಗುವುದು, ಮನೆಯಲ್ಲಿ ಚಿಕ್ಕಪುಟ್ಟ ಕಾರಣಗಳಿಂದ ವಾದವಿವಾದ, ಜಗಳವಾಗುವುದು, ನಿರಾಶೆಯುಂಟಾಗಿ ಆತ್ಮಹತ್ಯೆಯ ವಿಚಾರ ಬರುವುದು ಇತ್ಯಾದಿ.
೩ ಇ. ಬೌದ್ಧಿಕ ತೊಂದರೆ : ಬುದ್ಧಿಯ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣ ಬರುವುದರಿಂದ ಏನೂ ಹೊಳೆಯದಿರುವುದು, ವಿಷಯ ಅರ್ಥವಾಗದಿರುವುದು, ಸ್ಮರಣಶಕ್ತಿ ಕಡಿಮೆಯಾಗುವುದು, ಗ್ರಹಿಸುವ ಕ್ಷಮತೆ ಕಡಿಮೆಯಾಗುವುದು, ಆತ್ಮವಿಶ್ವಾಸ ಕಡಿಮೆಯಾಗುವುದರಿಂದ ಯೋಗ್ಯವಾದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದಿರುವುದು ಇತ್ಯಾದಿ.
೩ ಈ. ಆಧ್ಯಾತ್ಮಿಕ ತೊಂದರೆ : ಪೃಥ್ವಿಯ ಮೇಲಿನ ಪ್ರತಿಯೊಂದು ಕುಟುಂಬದಲ್ಲಿ ಅತೃಪ್ತ ಪಿತೃರ ಸಂಚಾರವಾಗಿ ಸಾಮಾನ್ಯ ಮಾನವನಿಗೆ ಪಿತೃರಿಂದಾಗುವ ತೊಂದರೆ ಶೇ. ೩೦ ರಷ್ಟು ಹೆಚ್ಚಾಗಲಿಕ್ಕಿದೆ.
೩ ಉ. ಪಿತೃಪಕ್ಷದಲ್ಲಿನ ಗ್ರಹಣಗಳ ದುಷ್ಪರಿಣಾಮವನ್ನು ತಪ್ಪಿಸಲು ಮಾಡಬೇಕಾದ ಉಪಾಯ : ಪ್ರತಿಯೊಬ್ಬರೂ ? ಈ ನಾಮಜಪ ಅರ್ಧ ಗಂಟೆ, ‘ಮಹಾಶೂನ್ಯ’ ಈ ಜಪ ಅರ್ಧ ಗಂಟೆ ಮತ್ತು ‘ಶ್ರೀ ಗುರುದೇವ ದತ್ತ |’ ಈ ನಾಮಜಪ ಅರ್ಧ ಗಂಟೆ – ಸಪ್ಟೆಂಬರ ೧೮ ರಿಂದ ಅಕ್ಟೋಬರ ೨ ರ ವರೆಗೆ ಪ್ರತಿದಿನ ಮಾಡಬೇಕು. ಅದೇ ರೀತಿ ತೊಂದರೆ ಹೆಚ್ಚಾಗಿರುವುದು ಅರಿವಾದರೆ, ಉಪ್ಪು, ಕರ್ಪೂರ, ಸ್ಫಟಿಕ, ಲಿಂಬು ಅಥವಾ ಶ್ರೀಫಲದಿಂದ (ಯಾವುದು ಉಪಲಬ್ಧವಿದೆ ಅದರಿಂದ) ಆ ವ್ಯಕ್ತಿಯ ದೃಷ್ಟಿ ತೆಗೆಯಬೇಕು (ಬೆಳಿಗ್ಗೆ ಮತ್ತು ಸಾಯಂಕಾಲ).’
– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫, ವಯಸ್ಸು ೪೧ ವರ್ಷ), ಸನಾತನ ಆಶ್ರಮ, ರಾಮನಾಥಿ ಗೋವಾ. (ಜ್ಞಾನ ಪ್ರಾಪ್ತಿಯಾದ ಸಮಯ ಮತ್ತು ಬೆರಳಚ್ಚು ಮಾಡಿದ ಸಮಯ ೧೭.೯.೨೦೨೪ ಮಧ್ಯಾಹ್ನ ೪.೫೫ ರಿಂದ ೫.೨೫)
ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |