ಜ್ಯೋತಿಷಿಯು ಈಶ್ವರನ ಸಂದೇಶವಾಹಕನಾಗಿದ್ದು ಅವನು ‘ನಾವು ದೈವೀ ಕಾರ್ಯವನ್ನು ಮಾಡುತ್ತಿದ್ದೇವೆ’, ಎಂಬ ಭಾವವನ್ನಿಡಬೇಕು ! ಪೂ. ಡಾ. ಓಂ ಉಲಗನಾಥನ್, ಜೀವನಾಡಿಪಟ್ಟಿ ವಾಚಕರು

ತ್ರಿಚಿ (ತಮಿಳನಾಡು)ಯಲ್ಲಿ ನೆರವೇರಿತು ಜ್ಯೋತಿಷ್ಯ ಮತ್ತು ವಾಸ್ತು ಅಧಿವೇಶನ !

ಅಧಿವೇಶನದ ಸಮಯದಲ್ಲಿ ಶ್ರೀಚಿತ್‌ಶಕ್ತಿ ( ಸೌ.) ಅಂಜಲಿ ಗಾಡಗೀಳ ಇವರಿಗೆ ಕಾರ್ಯಕ್ರಮದ ಪತ್ರಿಕೆಯನ್ನು ತೋರಿಸುತ್ತಿರುವ ಶ್ರೀ. ಎ.ಎನ್. ರಾಜಶೇಖರ್ ಮತ್ತು ಅವರ ಪಕ್ಕದಲ್ಲಿ ಪೂ. ಡಾ. ಓಂ ಉಲಗನಾಥನ್ ಇವರಿಗೆ ಕಾರ್ಯಕ್ರಮದ ಪತ್ರಿಕೆಯನ್ನು ತೋರಿಸುತ್ತಿರುವ ಶ್ರೀ. ಸಂಥನಾ ಕೃಷ್ಣನ್

ತ್ರಿಚಿ (ತಮಿಳನಾಡು) – ಜ್ಯೋತಿಷಿಯು ಈಶ್ವರನ ಸಂದೇಶವಾಹಕನಾಗಿದ್ದಾನೆ. ಆದ್ದರಿಂದ ಅವನಲ್ಲಿ ಅಭಿಮಾನ ಬೇಡ. ಓರ್ವ ಜ್ಯೋತಿಷಿಯು ಇನ್ನೋರ್ವ ಜ್ಯೋತಿಷಿಯನ್ನು ಅವಮಾನಿಸಬಾರದು, ಅವನಿಗೆ ಹೆಸರಿಡಬಾರದು. ಹೀಗೆ ಮಾಡುವುದು ಪಾಪವಾಗಿದೆ. ಯಾವನಾದರೊಬ್ಬ ಜ್ಯೋತಿಷಿಯು, ತನಗೆ ಗೊತ್ತಿಲ್ಲದ ವಿಷಯದ ಬಗ್ಗೆ ‘ನಾನು ನನ್ನ ಗುರುಗಳಿಗೆ ಕೇಳಿ ಹೇಳುತ್ತೇನೆ’, ಹೀಗೆ ಹೇಳುವುದು ಅಪೇಕ್ಷಿತವಿದೆ.

ಜ್ಯೋತಿಷಿಯ ನಡುವಳಿಕೆ ಮತ್ತು ಕೃತಿಗಳು ಧರ್ಮಶಾಸ್ತ್ರಕ್ಕೆ ಅನುಸರಿಸಿ ಇರಬೇಕು. ‘ತನ್ನಿಂದಾಗುವ ತಪ್ಪು ಕೃತಿ ಅಥವಾ ನಡುವಳಿಕೆಯಿಂದಾಗಿ ಋಷಿಗಳಿಂದ ನಿರ್ಮಿತ ಜ್ಯೋತಿಷ್ಯ ಶಾಸ್ತ್ರದ ಅವಮಾನವಾಗುತ್ತದೆ, ಎಂಬುದನ್ನು ಗಮನದಲ್ಲಿಡಬೇಕು. ಜ್ಯೋತಿಷ್ಯ ಮತ್ತು ಜ್ಯೋತಿಷ್ಯಶಾಸ್ತ್ರವನ್ನು ಸಾಮಾನ್ಯವಾಗಿ ಕಡಿಮೆ ಅಂದಾಜು ಮಾಡಲಾಗುತ್ತದೆ.. ಇದನ್ನು ನಿರ್ಲಕ್ಷಿಸಿ ‘ನಾವು ದೈವಿ ಕಾರ್ಯವನ್ನು ಮಾಡುತ್ತಿದ್ದೇವೆ’, ಎಂಬ ಭಾವವನ್ನಿಡಬೇಕು ಮತ್ತು ಮುನ್ನಡೆಯಬೇಕು. ಪ್ರತಿ ೩ -೪ ತಿಂಗಳುಗಳಲ್ಲಿ ಈ ರೀತಿಯ ಅಧಿವೇಶನದ ಆಯೋಜನೆ ಮಾಡಬೇಕು. ಎಲ್ಲಾ ಜ್ಯೋತಿಷಿಗಳು ಒಟ್ಟುಗೂಡಿದರೆ ನಮಗೆ ಪರಸ್ಪರರಿಂದ ಕಲಿಯಲು ಸಿಗುತ್ತದೆ ಮತ್ತು ಅದರಿಂದ ಸಂಘಟಿತಭಾವ ನಿರ್ಮಾಣವಾಗುತ್ತದೆ. ಅಧಿವೇಶನದಲ್ಲಿ ಜ್ಯೋತಿಷಿಗಳು ವಿವಿಧ ವಿಷಯಗಳ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಪ್ರಶ್ನೆಗಳನ್ನು ಕೇಳಬೇಕು, ಅದರಿಂದ ನಮಗೆ ಜ್ಞಾನ ಸಿಗುತ್ತದೆ. ‘ಭಗವಂತನು ಮನುಷ್ಯನಿಗೆ ಜ್ಯೋತಿಷ್ಯಶಾಸ್ತ್ರವನ್ನು ಏಕೆ ನೀಡಿರಬಹುದು ? ಎಂಬ ಪ್ರಶ್ನೆಯನ್ನು ಕೇಳಿ ನಾವು ಮೂಲ ವಿಷಯದವರೆಗೆ ಹೋಗಬೇಕು, ಎಂದು ಸಪ್ತರ್ಷಿ ಜೀವನಡಿಪಟ್ಟಿ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಇವರು ತಮ್ಮ ಮಾರ್ಗದರ್ಶನದಲ್ಲಿ ಹೇಳಿದರು.


ಸಂಪೂರ್ಣ ಜಗತ್ತಿನಲ್ಲಿ ರಾಮರಾಜ್ಯವನ್ನು ನಿರ್ಮಿಸಲು ಜ್ಯೋತಿಷಿಗಳು ಶಾಸ್ತ್ರಕ್ಕನುಸಾರ ಪರಿಹಾರಗಳನ್ನು ಸೂಚಿಸಬೇಕು ! – ಶ್ರೀಚಿತ್‌ಶಕ್ತಿ ( ಸೌ.) ಅಂಜಲಿ ಮುಕುಲ ಗಾಡಿಗೀಳ, ಸನಾತನ ಸಂಸ್ಥೆ


ಪೂ. ಡಾ. ಓಂ ಉಲಗಲಾಥನ್‌ಜಿ ಇವರು ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಬರುವ ಸಂದೇಶವನ್ನು ನಮಗೆ ಯಾವಾಗಲೂ ಹೇಳುತ್ತಿರುತ್ತಾರೆ. ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನದ ಮೂಲಕ ವಿನಾಶಕಾಲದ ಬಗ್ಗೆಯೂ ಅವರು ನಮ್ಮನ್ನು ಎಚ್ಚರಿಸುತ್ತಿರುತ್ತಾರೆ. ಸದ್ಯ ಇಡೀ ಜಗತ್ತಿನಲ್ಲಿ ವಿನಾಶಕಾಲವು ಆವರಿಸಿಕೊಂಡಿದೆ. ಅದರಿಂದ ರಕ್ಷಿಸಿಕೊಳ್ಳಲು ಮತ್ತು ಇಡೀ ಜಗತ್ತಿನಲ್ಲಿ ರಾಮರಾಜ್ಯವನ್ನು ನಿರ್ಮಿಸಲು ಜ್ಯೋತಿಷಿಗಳು ನಮಗೆ ಮಾರ್ಗದರ್ಶನ ಮಾಡಬೇಕು. ಇದರ ಜೊತೆಗೆ ರಾಷ್ಟ್ರದ ಭವಿಷ್ಯವೇನು ? ಎಂಬುದನ್ನೂ ನಮಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿಸಬೇಕು, ಇದರಿಂದ ತೀವ್ರ ಸಾಧನೆ ಮಾಡಿ ಭಾರತಸಹಿತ ಇಡೀ ಜಗತ್ತಿನಲ್ಲಿ ಶಾಂತಿಯನ್ನು ನಿರ್ಮಿಸಬಹುದು.

ತ್ರಿಚಿ (ತಮಿಳನಾಡು)ಯಲ್ಲಿ ೧೧ ಆಗಸ್ಟ್ ೨೦೨೪ ರಂದು ಆಯೋಜಿಸಲಾದ ‘ಜ್ಯೋತಿಷ್ಯ ಮತ್ತು ವಾಸ್ತು ಅಧಿವೇಶನ’ದ ಉದ್ಘಾಟನೆಯ ಸಮಯದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಈ ಅಧಿವೇಶನದ ಉದ್ಘಾಟನೆಯನ್ನು ಪೂ. ಡಾ. ಓಂ ಉಲಗನಾಥನ್, ತ್ರಿಚಿಯ ಅರಮ್‌ಮಿಗು ಅಡಿಗಲ್ ಸ್ವಾಮೀಜಿ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಮಾಡಿದರು.

ಶ್ರೀ. ಎ.ಎನ್. ರಾಜಶೇಖರ್ ಇವರು ಈ ಅಧಿವೇಶನದ ಆಯೋಜಕರಾಗಿದ್ದು ಶ್ರೀ. ಸಂಥನಾ ಕೃಷ್ಣನ್ ಇವರು ಅವರ ಸಹಆಯೋಜಕರಾಗಿದ್ದಾರೆ. ಈ ಅಧಿವೇಶನದಲ್ಲಿ ೧೦೦ ಕ್ಕಿಂತಲೂ ಹೆಚ್ಚು ಜ್ಯೋತಿಷಿಗಳು ಭಾಗವಹಿಸಿದ್ದರು.