ಹಸ್ತರೇಖಾಶಾಸ್ತ್ರದ ಪ್ರಾಥಮಿಕ ಪರಿಚಯ

೧. ಹಸ್ತರೇಖಾಶಾಸ್ತ್ರದ ಕೆಲವು ಮೂಲತತ್ತ್ವಗಳು

ಹಸ್ತರೇಖಾತಜ್ಞೆ ಸುನಿತಾ ಶುಕ್ಲಾ

೧ ಅ. ವ್ಯಕ್ತಿಯ ಅಂಗೈ ಮೇಲಿನ ರೇಖೆಗಳೆಂದರೆ ವ್ಯಕ್ತಿಯ ಮೆದುಳಿನ ನಕಾಶೆ : ‘ವ್ಯಕ್ತಿಯ ಅಂಗೈ ಮೇಲಿನ ರೇಖೆಗಳೆಂದರೆ ವ್ಯಕ್ತಿಯ ಮೆದುಳಿನ ನಕಾಶೆಯಾಗಿರುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಸತತವಾಗಿ ೬ ತಿಂಗಳು ಒಂದೇ ವಿಚಾರ ಬರುತ್ತಿದ್ದರೆ, ಅಂಗೈಯ ವಿಶಿಷ್ಟ ಭಾಗದಲ್ಲಿ ಅದರ ರೇಖೆ ಸಿದ್ಧವಾಗುತ್ತದೆ. ಈ ರೇಖೆಗಳೆಂದರೆ ತಾತ್ಕಾಲಿಕ ಅಂಗೈಯ ಮೇಲಿರುವ ಮುಖ್ಯ ರೇಖೆಗಳ ವಿಸ್ತರಣೆಯಾಗಿರುತ್ತದೆ. ಜೀವದ ಜನ್ಮದ ನಂತರ ೩ ರಿಂದ ೪ ತಿಂಗಳ ನಂತರ ಅದರ ಅಂಗೈ ಮೇಲೆ ಪ್ರಾರಬ್ಧ-ಕರ್ಮಕ್ಕನುಸಾರ ಮುಖ್ಯ ರೇಖೆಗಳು ವಿಕಾಸಗೊಳ್ಳುತ್ತವೆ. ಜೀವದ ಪ್ರಸ್ತುತ ಕರ್ಮಕ್ಕನುಸಾರ ಈ ರೇಖೆಗಳ ವಿಕಾಸವಾಗುತ್ತದೆ ಹಾಗೂ ಅವು ಪ್ರಬಲವಾಗುತ್ತವೆ.

೧ ಆ. ವ್ಯಕ್ತಿಯ ಎಡಗೈಯಿಂದ ಅವನ ಪೂರ್ವಜನ್ಮದ ಸಂಸ್ಕಾರ, ಗುಣ-ದೋಷ, ಕೌಶಲ್ಯ, ಸಾಧನಾಪ್ರವಾಸ, ಆಧ್ಯಾತ್ಮಿಕ ಸ್ಥಿತಿ ಇತ್ಯಾದಿ ತಿಳಿಯುತ್ತದೆ : ವ್ಯಕ್ತಿಯ ಎಡಗೈಯೆಂದರೆ ಅವನ ಅಂತರ್ಮನಸ್ಸಿನ ಪ್ರತಿಬಿಂಬವಾಗಿದೆ. ವ್ಯಕ್ತಿಯ ಎಡಗೈಯ ಮೇಲಿನ ರೇಖೆಗಳಿಂದ ಅವನ ಪೂರ್ವಜನ್ಮ, ಸಂಚಿತಕರ್ಮ, ಕೊಡು-ಕೊಳ್ಳುವ ಲೆಕ್ಕಾಚಾರ, ಪೂರ್ವಜನ್ಮದ ಸಂಸ್ಕಾರ, ಸ್ಮೃತಿ, ಮನೋವೃತ್ತಿ, ಗುಣ-ದೋಷ, ಕ್ಷಮತೆ, ಕೌಶಲ್ಯ, ಸಾಧನಾಪ್ರಯಾಣ, ಮರಣ ಇತ್ಯಾದಿಗಳ ವಿಷಯ ತಿಳಿಯುತ್ತದೆ, ಅದೇ ರೀತಿ ವ್ಯಕ್ತಿಯ ಎಡಗೈಯಿಂದ ‘ಹಿಂದಿನ ಜನ್ಮದಲ್ಲಿ ಅವನಿಗೆ ಬ್ರಹ್ಮ, ವಿಷ್ಣು ಹಾಗೂ ಮಹೇಶ ಈ ತ್ರಿಮೂರ್ತಿಗಳಲ್ಲಿ ಯಾವ ದೇವರಿಂದ ಮಾರ್ಗದರ್ಶನ ಸಿಗುತ್ತಿತ್ತು ?, ಹಿಂದಿನ ಜನ್ಮದಲ್ಲಿ ತ್ರಿಮೂರ್ತಿಗಳ ಪೈಕಿ ಯಾವ ದೇವರ ಗುಣ ಅವನಲ್ಲಿತ್ತು ?, ಅವನ ಸಾಧನಾ ಮಾರ್ಗ ಯಾವುದಿತ್ತು ?, ಅವನ ಆಧ್ಯಾತ್ಮಿಕ ಸ್ಥಿತಿ ಹೇಗಿತ್ತು ?, ಅವನ ಸಾಧನಾಪ್ರಯಾಭ ಷಟ್ಚಕ್ರಗಳ ಪೈಕಿ ಯಾವ ಚಕ್ರದ ವರೆಗೆ ಆಗಿತ್ತು ?’, ಇತ್ಯಾದಿಗಳನ್ನು ತಿಳಿದುಕೊಳ್ಳಬಹುದು.

೧ ಇ. ವ್ಯಕ್ತಿಯ ಬಲಗೈಯಿಂದ ‘ಈ ಜನ್ಮದಲ್ಲಿ ಅವನು ಮನಸ್ಸು, ಬುದ್ಧಿ, ಕೌಶಲ್ಯ ಹಾಗೂ ಕ್ಷಮತೆಯನ್ನು ಹೇಗೆ ಉಪಯೋಗಿಸುತ್ತಾನೆ ?’, ಎಂಬುದು ತಿಳಿಯುತ್ತದೆ : ವ್ಯಕ್ತಿಯ ಬಲಗೈ ಬಾಹ್ಯ ಮನಸ್ಸಿಗೆ ಸಂಬಂಧಿಸಿದ, ಈ ಕೈಮೇಲಿನಿಂದ ಅವನ ವಿಚಾರ ಶೈಲಿ ಹೇಗಿದೆ ?, ಅವನು ತನ್ನ ದೌರ್ಬಲ್ಯವನ್ನು ಹೇಗೆ ಜಯಿಸುತ್ತಾನೆ ?, ಅವನು ಹಿಂದಿನ ಜನ್ಮಕ್ಕಿಂತ ಈ ಜನ್ಮದಲ್ಲಿ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾನೆಯೇ ?, ಅವನ ಪ್ರಗತಿ ಯೋಗ್ಯ ದಿಕ್ಕಿನಲ್ಲಿ ಆಗುತ್ತಿದೆಯೇ ?’, ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಬಹುದು.

೧ ಈ. ವ್ಯಕ್ತಿಯ ಕ್ರಿಯಮಾಣ-ಕರ್ಮಕ್ಕನುಸಾರ ಅವನ ಅಂಗೈ ಮೇಲಿನ ರೇಖೆಗಳಲ್ಲಿ ಬದಲಾವಣೆಯಾಗುತ್ತದೆ : ವ್ಯಕ್ತಿಯು ಯೋಗ್ಯ ಮಾರ್ಗದಿಂದ ಸಾಧನೆ ಮಾಡಿದರೆ ಅವನ ಪ್ರಾರಬ್ಧ ಸಹನೀಯವಾಗಬಹುದು. ವ್ಯಕ್ತಿಗೆ ಯೋಗ್ಯ ಸಾಧನಾಮಾರ್ಗ ಮತ್ತು ಮಾರ್ಗದರ್ಶನ ಲಭಿಸಿದರೆ ಹಾಗೂ ಅವನು ತಳಮಳದಿಂದ ಸಾಧನೆಯ ಪ್ರಯತ್ನ ಮಾಡಿದರೆ ಅವನಿಗೆ ಮೋಕ್ಷಪ್ರಾಪ್ತಿಯಾಗಬಹುದು. ಪ್ರತಿಯೊಂದು ಜೀವಕ್ಕೆ ತನ್ನ ಕ್ರಿಯಮಾಣವನ್ನು ಉಪಯೋಗಿಸಲು ಸಾಧ್ಯವಾಗಬಹುದು. ಜೀವದ ಪ್ರಯತ್ನ ಮತ್ತು ವಿಚಾರಕ್ಕನುಸಾರ ಅವನ ಅಂಗೈ ಮೇಲಿನ ರೇಖೆಗಳು ಬದಲಾಗುತ್ತವೆ. ವ್ಯಕ್ತಿಯ ವರ್ತಮಾನಕಾಲದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳಿಗನುಸಾರ ಅಂಗೈಯ ರೇಖೆಗಳು ಪ್ರಬಲ ಅಥವಾ ದುರ್ಬಲವಾಗುತ್ತವೆ.

೧ ಉ. ಈಶ್ವರನ ಕೃಪೆಯಾದರೆ ವ್ಯಕ್ತಿಯ ಅಂಗೈ ಮೇಲಿನ ರೇಖೆಗಳು ೬ ತಿಂಗಳಿಂದ ೨ ವರ್ಷಗಳ ಅವಧಿಯಲ್ಲಿ ಚೆನ್ನಾಗಿ ಬದಲಾವಣೆಯಾಗುತ್ತವೆ.

೨. ಅಂಗೈ ಮೇಲಿನ ಮಹತ್ವದ ರೇಖೆಗಳು ಮತ್ತು ಅವುಗಳ ವೈಶಿಷ್ಟ್ಯಗಳು

೨ ಅ. ಹೃದಯರೇಖೆ : ಈ ರೇಖೆಯಿಂದ ವ್ಯಕ್ತಿಯ ಸ್ವಭಾವ, ಮನೋವೃತ್ತಿ, ಸಂವೇದನಾಶೀಲತೆ, ಭಾವನಾಶೀಲತೆ, ಇಚ್ಛೆ, ಆಕಾಂಕ್ಷೆ, ಆಸಕ್ತಿ ಇತ್ಯಾದಿಗಳು ತಿಳಿಯುತ್ತವೆ. ‘ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ತ್ರಿಮೂರ್ತಿಗಳಲ್ಲಿ ಯಾವ ದೇವರ ಕೃಪೆ ವ್ಯಕ್ತಿಯ ಮೇಲಿದೆ ?’, ಎಂಬುದು ಗಮನಕ್ಕೆ ಬರುತ್ತದೆ. ವ್ಯಕ್ತಿಯ ಜೀವನ ‘ಧರ್ಮ’, ‘ಕರ್ಮ’ ಅಥವಾ ‘ಮೋಕ್ಷ’ ಇವುಗಳಲ್ಲಿ ಯಾವುದಕ್ಕಾಗಿ ಉಪಯೋಗವಾಗುವುದಿದೆ ಎಂಬುದು ತಿಳಿಯುತ್ತದೆ. ವ್ಯಕ್ತಿಯ ಸಂಗಾತಿಯ ಬಾಹ್ಯರೂಪ ಮತ್ತು ಅವರಲ್ಲಿನ ಪ್ರೇಮಸಂಬಂಧದ ವಿಷಯದ ಮಾಹಿತಿ ಸಿಗುತ್ತದೆ. ಈ ರೇಖೆಯ ಆರಂಭ ಮತ್ತು ಕೊನೆಯಿಂದ ‘ವ್ಯಕ್ತಿಯ ಬುದ್ಧಿವಂತಿಕೆ, ನ್ಯಾಯ, ಪ್ರಸಿದ್ಧಿ, ಅರ್ಥಾರ್ಜನೆ, ಇಚ್ಛೆ, ಸಂಘರ್ಷ ಅಥವಾ ಮಹತ್ವಾಕಾಂಕ್ಷೆ ಇವುಗಳಲ್ಲಿ ಯಾವ ವಿಷಯದ ಕಡೆಗೆ ವಾಲಿದೆ ?’, ಎಂಬುದು ತಿಳಿಯುತ್ತದೆ. ವ್ಯಕ್ತಿಯ ಹೃದಯಕ್ಕೆ ಸಂಬಂಧಿಸಿದ ರೋಗ ಅಥವಾ ಅವನ ಮರಣ ಹೃದ್ರೋಗದಿಂದ ಆಗುತ್ತದೆಯೇ ?’, ಎಂಬುದು ತಿಳಿಯುತ್ತದೆ.

ಟಿಪ್ಪಣಿ : ಈ ರೇಖೆಯ ಗುಣವೈಶಿಷ್ಟ್ಯಗಳು ಹಲವಾರು ಘಟಕಗಳ ಮೇಲೆ ಅವಲಂಬಿಸಿರುತ್ತದೆ. ಗುಣವೈಶಿಷ್ಟ್ಯ ಹೆಚ್ಚಿದ್ದರೆ ಲಾಭವಾಗುತ್ತದೆ; ಆದರೆ ರೇಖೆಯಲ್ಲಿ ಕೊರತೆಯಿದ್ದರೆ ಅಸಂತೋಷ, ತೊಂದರೆ ಮತ್ತು ಕಾಯಿಲೆಗಳು ಹೆಚ್ಚಾಗುತ್ತವೆ.

೨ ಆ. ಮಸ್ತಕ ರೇಖೆ : ಮಸ್ತಕ ರೇಖೆಯಿಂದ ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಚಾರ ಮಾಡುವ ಕ್ಷಮತೆ ಗಮನಕ್ಕೆ ಬರುತ್ತದೆ.

೨ ಆ ೧. ಮಸ್ತಕ ರೇಖೆ ಚೆನ್ನಾಗಿರುವುದು : ವ್ಯಕ್ತಿಯ ಅಂಗೈ ಮೇಲೆ ಮಸ್ತಕ ರೇಖೆ ಚೆನ್ನಾಗಿದ್ದರೆ, (ಅಂದರೆ ಅಖಂಡ ಹಾಗೂ ಎದ್ದು ಕಾಣಿಸುತ್ತಿದ್ದರೆ) ಅದರಿಂದ ವ್ಯಕ್ತಿಯ ಬೌದ್ಧಿಕ ಕ್ಷಮತೆ, ವಿಚಾರಪ್ರಕ್ರಿಯೆ, ಸೃಜನಶೀಲತೆ (Creativity), ಕೌಶಲ್ಯ, ವಿದ್ಯೆ, ಜ್ಞಾನ, ಕೃತಿಯಲ್ಲಿನ ಪರಿಪೂರ್ಣತೆ, ಅರ್ಥಾರ್ಜನೆಯ ಮೂಲ ಇತ್ಯಾದಿಗಳ ವಿಷಯ ತಿಳಿಯುತ್ತವೆ.

೨ ಆ ೨. ಮಸ್ತಕ ರೇಖೆ ಚೆನ್ನಾಗಿಲ್ಲದಿರುವುದು : ವ್ಯಕ್ತಿಯ ಅಂಗೈ ಮೇಲಿನ ಮಸ್ತಕ ರೇಖೆ ಚೆನ್ನಾಗಿಲ್ಲದಿದ್ದರೆ, (ಅಂದರೆ ತುಂಡಾಗಿದ್ದರೆ ಅಥವಾ ಅಸ್ಪಷ್ಟವಾಗಿದ್ದರೆ) ವ್ಯಕ್ತಿಯ ಜೀವನದಲ್ಲಿ ಭಾವನಾತ್ಮಕ ಏರಿಳಿತ, ಮಾನಸಿಕ ಆಘಾತ, ಮಾನಸಿಕ ಕಾಯಿಲೆ, ತೊಂದರೆ, ನಿರಾಶೆ, ಚಿಂತೆ, ಉದ್ವೇಗ, ಕ್ರೋಧ ಇತ್ಯಾದಿಗಳಿರುತ್ತವೆ.

೨ ಇ. ಜೀವನ ರೇಖೆ (ಆಯುಷ್ಯ ರೇಖೆ)

೨ ಇ ೧. ಜೀವನ ರೇಖೆ ಚೆನ್ನಾಗಿರುವುದು : ವ್ಯಕ್ತಿಯ ಅಂಗೈ ಮೇಲೆ ಜೀವನ ರೇಖೆ ಚೆನ್ನಾಗಿದ್ದರೆ ಅದು ಆ ವ್ಯಕ್ತಿಯ ಆರೋಗ್ಯ, ಆಯುಷ್ಯ, ಜೀವನದಲ್ಲಿನ ದೊಡ್ಡ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಸಂಗ, ಜೀವಕ್ಕೆ ಅಪಾಯವಾಗುವ ಪ್ರಸಂಗ ಅಥವಾ ಅಪಘಾತ, ವ್ಯಾವಹಾರಿಕ ಅಥವಾ ಆಧ್ಯಾತ್ಮಿಕ ದೃಷ್ಟಿಯಲ್ಲಿ ಜೀವನದಲ್ಲಿನ ಬದಲಾವಣೆಯ ಪ್ರಸಂಗ ಇತ್ಯಾದಿಗಳನ್ನು ತೋರಿಸುತ್ತದೆ.

೨ ಇ ೨. ಜೀವನರೇಖೆ ಚೆನ್ನಾಗಿಲ್ಲದಿರುವುದು : ವ್ಯಕ್ತಿಯ ಅಂಗೈ ಮೇಲಿನ ಜೀವನ ರೇಖೆ ಚೆನ್ನಾಗಿಲ್ಲದಿದ್ದರೆ ಅದು ಅಪಘಾತ, ಗಂಭೀರ ಕಾಯಿಲೆ, ಆತ್ಮಹತ್ಯೆಯ ಪ್ರಯತ್ನ, ಜೀವನದಲ್ಲಿನ ನಕಾರಾತ್ಮಕ ಪ್ರಸಂಗಗಳ ಪ್ರಭಾವ, ಪೂರ್ವಜರ ತೊಂದರೆ, ಅಪಘಾತದಲ್ಲಿ ಮರಣ, ಜೀವನದಲ್ಲಿನ ಏರಿಳಿಕೆ ಇತ್ಯಾದಿಗಳನ್ನು ತೋರಿಸುತ್ತದೆ.

೨ ಈ. ಭಾಗ್ಯರೇಖೆ (ಅಧ್ಯಾತ್ಮ ರೇಖೆ) : ಈ ರೇಖೆ ವ್ಯಕ್ತಿಯ ಪೂರ್ವಜನ್ಮದಲ್ಲಿನ ಸತ್ಕರ್ಮಗಳು ಹಾಗೂ ದೈವೀ ಕೃಪೆ ಇವುಗಳಿಂದ ಈ ಜನ್ಮದ ಮೇಲಾಗುವ ಪರಿಣಾಮಗಳನ್ನು ತೋರಿಸುತ್ತದೆ. ಈ ರೇಖೆಯಿಂದ ಈ ಮುಂದಿನ ವಿಷಯಗಳ ಮಾಹಿತಿ ತಿಳಿಯುತ್ತದೆ.

ಅ. ವ್ಯಕ್ತಿಯು ಒಳ್ಳೆಯ ಕುಟುಂಬದಲ್ಲಿ ಜನಿಸಿದ್ದಾನೆಯೇ ? ಅವನು ಪಾಲಕರಿಗೆ ಭಾಗ್ಯಶಾಲಿಯಾಗಿದ್ದಾನೆಯೇ ?

ಆ. ವ್ಯಕ್ತಿಯ ಮೇಲೆ ದೇವರ ಕೃಪೆ ಇದೆಯೇ ? ಅವನ ಮೇಲಿರುವ ದೇವರ ಕೃಪೆಯು ವರ್ತಮಾನ ಜನ್ಮದಲ್ಲಿನ ಒಳ್ಳೆಯ ಕರ್ಮಗಳಿಂದ ಆಗಿದೆಯೇ ಅಥವಾ ಹಿಂದಿನ ಜನ್ಮದ ಸತ್ಕರ್ಮಗಳಿಂದಾಗಿದೆಯೇ ?

ಇ. ವ್ಯಕ್ತಿಯ ಜೀವನದ ಧ್ಯೇಯ ಏನಿದೆ ? ಅವನಿಗೆ ಅದು ಈ ಜನ್ಮದಲ್ಲಿ ಸಾಧ್ಯವಾದೀತೇ ? ಅವನಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇದೆಯೇ, ಅವನಿಗೆ ಗುರುಗಳ ಮಾರ್ಗದರ್ಶನ ಸಿಗುವುದೇ ? ಇತ್ಯಾದಿ.

ಈ. ಭಾಗ್ಯರೇಖೆಯಿಂದ ವ್ಯಕ್ತಿಯ ಷಟ್ಚಕ್ರಗಳ ಜಾಗೃತಿ, ಜ್ಞಾನದ ಆಳ, ವಿವೇಕಶಕ್ತಿ, ಮನುಕುಲದ ಕಲ್ಯಾಣಕ್ಕಾಗಿ ಅವನ ಯೋಗದಾನ ಇತ್ಯಾದಿ ವಿಷಯಗಳು ತಿಳಿಯುತ್ತವೆ.

ಈ ಜನ್ಮದಲ್ಲಿ ಆಧ್ಯಾತ್ಮಿಕ ಉನ್ನತಿ ಸಾಧಿಸಲು ಮಾಡಿದ ಪ್ರಯತ್ನಗಳು ಭಾಗ್ಯರೇಖೆಯ ಮೇಲೆ ಪರಿಣಾಮ ಮಾಡುತ್ತವೆ ಹಾಗೂ ಆ ರೇಖೆಯನ್ನು ಸುಧಾರಿಸಲು ಸಹಾಯವಾಗುತ್ತದೆ. ಇದರ ಅರ್ಥ, ಈ ಜನ್ಮದಲ್ಲಿನ ಸಾಧನೆ ಮತ್ತು ಸತ್ಕರ್ಮಗಳಿಂದಾಗಿ ಭಾಗ್ಯರೇಖೆ ಬದಲಾಗುತ್ತದೆ ಹಾಗೂ ಪೂರ್ವಜನ್ಮದ ಪಾಪಕರ್ಮದ ಪರಿಮಾರ್ಜನೆಯಾಗುತ್ತದೆ.

೨ ಉ. ಸೂರ್ಯ ರೇಖೆ

ಅ. ಈ ರೇಖೆಯಿಂದ ವ್ಯಕ್ತಿಗೆ ಸಿಗುವ ಪ್ರಸಿದ್ಧಿ, ಯಶಸ್ಸು, ಇಚ್ಛಾಪೂರ್ತಿ, ನೇತೃತ್ವಗುಣ, ಸರಕಾರಿ ಯೋಜನೆಗಳ ಲಾಭ, ಸರಕಾರಿ ಆಡಳಿತಾಧಿಕಾರಿ, ರಾಜಕೀಯ ಚಟುವಟಿಕೆ, ಸರಕಾರಿ ಕ್ಷೇತ್ರದಲ್ಲಿನ ವ್ಯವಹಾರ ಹಾಗೂ ಸರಕಾರಿ ಸಂಸ್ಥೆಗಳಿಂದ ಸಿಗುವ ಲಾಭದ ಮಾಹಿತಿ ಸಿಗುತ್ತದೆ.

ಆ. ಸೂರ್ಯ ರೇಖೆಯಿಂದ ವ್ಯಕ್ತಿಯ ಕುಪ್ರಸಿದ್ಧಿ (ಕೆಟ್ಟ ನಡತೆ) ಹಾಗೂ ಅಹಂಕಾರದ ಬಗ್ಗೆ ತಿಳಿಯುತ್ತದೆ.

೨ ಊ. ಬುಧ ರೇಖೆ (ಆರೋಗ್ಯ ರೇಖೆ)

ಅ. ಈ ರೇಖೆ ಪ್ರಾಮುಖ್ಯವಾಗಿ ವಾಕ್ಚಾತುರ್ಯ, ಆರ್ಥಿಕ ವ್ಯವಹಾರ, ಸಂಪತ್ತು, ವ್ಯವಸಾಯ, ವ್ಯವಸ್ಥಾಪನೆ, ಯಾವುದಾದರೊಂದು ವಿಷಯವನ್ನು ಕೃತಿಯಲ್ಲಿ ತರುವುದು, ಕಠೋರ ಶ್ರಮಪಡುವ ಸಿದ್ಧತೆ ಹಾಗೂ ಅಂತರ್ಜ್ಞಾನದ ಕ್ಷಮತೆ ಇವುಗಳಿಗೆ ಸಂಬಂಧಿಸಿದೆ.

ಆ. ಈ ರೇಖೆ ಅಖಂಡ ಹಾಗೂ ಸರಳವಾಗಿದ್ದರೆ ವ್ಯಕ್ತಿ ತನ್ನ ಆರೋಗ್ಯದ ವಿಷಯದಲ್ಲಿ ಜಾಗರೂಕವಾಗಿರುತ್ತಾನೆ ಹಾಗೂ ಅವನಿಗೆ ಆರೋಗ್ಯಪೂರ್ಣ ಜೀವನ ನಡೆಸುವ ಇಚ್ಛೆ ಇರುತ್ತದೆ.

೨ ಋ. ವಿವಾಹ ರೇಖೆ

ಅ. ಈ ರೇಖೆಯಿಂದ ಸಂಗಾತಿ, ತಾತ್ಕಾಲಿಕ ಆಕರ್ಷಣೆ, ಪ್ರೇಮ, ಮಾನಸಿಕ ಸಂಬಂಧ ಹಾಗೂ ವಿವಾಹದ ವಿಷಯಗಳು ತಿಳಿಯುತ್ತವೆ.

ಆ. ‘ವ್ಯಕ್ತಿಗೆ ಎಷ್ಟು ಮಕ್ಕಳಾಗುವರು’, ಎಂಬುದು ಈ ರೇಖೆಯಿಂದ ತಿಳಿಯುತ್ತದೆ.

೨ ಏ. ಸಂಸ್ಕಾರ ರೇಖೆಗಳು

ಅಂಗೈ ಮೇಲಿನ ಶುಕ್ರನ ಎತ್ತರಕ್ಕೆ ಸಮಾಂತರವಾಗಿರುವ ರೇಖೆಗಳಿಗೆ ‘ಸಂಸ್ಕಾರ ರೇಖೆ’ಗಳು ಎನ್ನುತ್ತಾರೆ. ಇವುಗಳಿಂದ ವ್ಯಕ್ತಿಯಲ್ಲಿರುವ ಸಂಸ್ಕಾರಗಳು ಎಷ್ಟು ದೃಢವಾಗಿವೆ’, ಎಂಬುದು ಗಮನಕ್ಕೆ ಬರುತ್ತದೆ. ಈ ರೇಖೆಗಳಿಂದ ವ್ಯಕ್ತಿಯ ಕೊಡು-ಕೊಳ್ಳುವ ಲೆಕ್ಕಚಾರ ತಿಳಿಯುತ್ತದೆ.

೩. ಕೈಬೆರಳುಗಳ ಗೆಣ್ಣುಗಳ ಅರ್ಥ ಹಾಗೂ ಅವುಗಳ ಮಹತ್ವ

ಗೆಣ್ಣು ಅಂದರೆ ಕಾಂಡ ಅಥವಾ ಭಾಗ. ಕೈಗಳ ಪ್ರತಿಯೊಂದು ಬೆರಳಿನ ೩ ಗೆಣ್ಣುಗಳು ಅಂದರೆ ೩ ಭಾಗಗಳಿರುತ್ತವೆ. ಹಸ್ತರೇಖಾ ಶಾಸ್ತ್ರದ ದೃಷ್ಟಿಯಲ್ಲಿ ಅವುಗಳ ಮಹತ್ವವನ್ನು ಮುಂದೆ ಕೊಡಲಾಗಿದೆ.

೩ ಅ. ಬೆರಳುಗಳ ಎಲ್ಲಕ್ಕಿಂತ ಮೇಲಿನ ಗೆಣ್ಣುಗಳು : ಇವು ವ್ಯಕ್ತಿಯಲ್ಲಿನ ವ್ಯವಸ್ಥಾಪನ-ಕೌಶಲ್ಯ, ನೇತೃತ್ವಗುಣ, ಮಹತ್ವಾಕಾಂಕ್ಷೆ ಮತ್ತು ಆಕ್ರಮಕತೆಯನ್ನು ತೋರಿಸುತ್ತವೆ.

೩ ಆ. ಬೆರಳುಗಳ ಮಧ್ಯಭಾಗದಲ್ಲಿರುವ ಗೆಣ್ಣುಗಳು : ಇವು ಯಾವುದಾದರೊಂದು ವಿಚಾರವನ್ನು ಪ್ರತ್ಯಕ್ಷದಲ್ಲಿ ತರುವ ಕ್ಷಮತೆಯನ್ನು ತೋರಿಸುತ್ತವೆ.

೩ ಇ. ಬೆರಳುಗಳ ಕೆಳಗಿನ ಗೆಣ್ಣುಗಳು ಇವು ವ್ಯಕ್ತಿಯ ಕಠೋರ ಶ್ರಮ ಪಡುವ ಕ್ಷಮತೆಯನ್ನು ತೋರಿಸುತ್ತವೆ.

೪. ‘ಅಂಗೈ ಮೇಲಿನ ಮುಖ್ಯ ಹಾಗೂ ಸಣ್ಣ ರೇಖೆಗಳು ಬೆಳೆಯುವುದು, ಅಸ್ಪಷ್ಟವಾಗುವುದು ಅಥವಾ ಇಲ್ಲವಾಗುವುದು’ ಇದರ ಅರ್ಥ

೪ ಅ. ಅಂಗೈ ಮೇಲಿನ ರೇಖೆಗಳಲ್ಲಿ ಬೆಳವಣಿಗೆಯಾಗುವುದು : ಇದು ವ್ಯಕ್ತಿಯ ಗುಣವೈಶಿಷ್ಟ್ಯದಲ್ಲಿ ಯೋಗ್ಯ ದಿಕ್ಕಿನಲ್ಲಿ ಬೆಳವಣಿಗೆಯಾಗುತ್ತಿರುವುದರ ಸಂಕೇತವಾಗಿದೆ.

೪ ಆ. ಕೆಲವು ರೇಖೆಗಳು ಅಸ್ಪಷ್ಟ ಅಥವಾ ಇಲ್ಲವಾಗುವುದು : ಹೀಗಾಗುವುದು ಅಶುಭ ಘಟನೆಗಳನ್ನು ತೋರಿಸುತ್ತದೆ ಅಥವಾ ಜೀವನದ ಆ ಅವಧಿಯಲ್ಲಿನ ಕೊಡು-ಕೊಳ್ಳುವ ಲೆಕ್ಕಾಚಾರ ಮುಗಿದಿರುವುದನ್ನು ತೋರಿಸುತ್ತದೆ. ಇದನ್ನು ತಿಳಿದುಕೊಳ್ಳುವುದು ಅಷ್ಟು ಸುಲಭವಲ್ಲ. ಇದರಲ್ಲಿ ಬಹಳಷ್ಟು ಅಂಗಗಳಿವೆ ಹಾಗೂ ಅದಕ್ಕಾಗಿ ಉಳಿದ ರೇಖೆಗಳ ಅಭ್ಯಾಸವನ್ನೂ ಮಾಡಬೇಕಾಗುತ್ತದೆ.

೪ ಇ. ಅಂಗೈ ಮೇಲೆ ಸಣ್ಣ ರೇಖೆಗಳು ಮೂಡುವುದು ಅಥವಾ ಅವು ಇಲ್ಲವಾಗುವುದು : ವ್ಯಕ್ತಿಯ ಮನಸ್ಸಿನಲ್ಲಿ ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದ ವಿಚಾರ ಉತ್ಪನ್ನವಾದರೆ ಅಂತಹ ಸಣ್ಣ ರೇಖೆಗಳು ಕೈಗಳ ಮೇಲೆ ಮೂಡುತ್ತವೆ ಅಥವಾ ಅವು ಇಲ್ಲವಾಗುತ್ತವೆ. ಆ ರೇಖೆಗಳು ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿರಬಹುದು. ಅದೇ ರೀತಿ ಅವು ಜೀವನದಲ್ಲಿ ಏರಿಳಿಕೆಗಳ ಮೇಲೆ ಪರಿಣಾಮ ಮಾಡುತ್ತವೆ. ಸಣ್ಣ ರೇಖೆಗಳು ಇಲ್ಲವಾಗುವುದು, ಅಂದರೆ ಯಾವುದಾದರೊಂದು ಕಾರ್ಯ ಅಥವಾ ವಿಚಾರ ಪೂರ್ಣವಾಗಿರುವುದರ ಅಥವಾ ಅದಕ್ಕೆ ಸಂಬಂಧಿಸಿದ ಪ್ರಾರಬ್ಧ ಮುಗಿದಿರುವುದನ್ನು ತೋರಿಸುತ್ತದೆ.

– ಹಸ್ತರೇಖಾತಜ್ಞೆ ಸುನಿತಾ ಶುಕ್ಲಾ, ಋಷಿಕೇಶ, ಉತ್ತರಾಖಂಡ. (೧೭.೪.೨೦೨೪)